ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕುಷ್ಟರೋಗದ ಪ್ರತಿಜ್ಞಾ ವಿಧಿ ಕಾರ್ಯಕ್ರಮ.
ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ. ಕುಷ್ಟರೋಗದ ಪ್ರತಿಜ್ಞಾವಿಧಿ ಕಾರ್ಯಕ್ರಮ ನಂತರ ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳು ಪರಶುರಾಮ್ ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮ ವಾದ ದಿನ. ನಮ್ಮ ನೆರೆ ಹೊರೆ ಹಾಗು ಸಮುದಾಯದ ಯಾರೇ ಕುಷ್ಟರೋಗಿಗಳು ಕಂಡುಬಂದರೆ ಅವರಿಗೆ ಉಚಿತ ಚಿಕಿತ್ಸೆಯನ್ನು ನೀಡಬೇಕು ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಸೇರಿ ಕುಷ್ಟರೋಗ ಪ್ರತಿಜ್ಞಾ ವಿಧಿ ಯನ್ನು ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ ಹುತಾತ್ಮ ದಿನವಾದ 30-01-2025 ರಂದು ನನ್ನ ಕುಟುಂಬ ನೆರೆ ಹೊರೆ ಸಮುದಾಯದಲ್ಲಿ ಯಾರೇ ಕುಷ್ಟರೋಗಿಗಳು ಕಂಡು ಬಂದರೆ ಅವರಿಗೆ ಹಾರೋಗ್ಯ ಇಲಾಖೆಯಲ್ಲಿ ದೊರೆಯುವ ಉಚಿತ ಚಿಕಿತ್ಸೆಯನ್ನು ಕೊಡಿಸುತ್ತೇನೆ. ಮಹಾತ್ಮ ಗಾಂಧೀಜಿಯವರ ಕನಸಾದ ಕುಷ್ಟರೋಗ ಮುಕ್ತ ಭಾರತವನ್ನು ಕಟ್ಟಲು ಕಾಯ ವಾಚ ಮಾನಸ ಶ್ರಮಿಸುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಪರಶುರಾಮ್, ಪಂಚಾಯಿತಿ ಸಿಬ್ಬಂದಿ ಅನಪೂರ್ಣ, ಹಸೆನ್ ಬಾಷಾ, ಪಟ್ಟಣ ಪಂಚಾಯತಿ ಸದಸ್ಯರಾದ ಮಂಜುನಾಥ್, ರಂಜಾನ್ ಸಲಫಿ, ಮುಖಂಡರಾದ ಎರೇಗೌಡ, ಚಿದಾನಂದ, ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
What's Your Reaction?






