ಅತಿಥಿ ಉಪನ್ಯಾಸಕರ ಭದ್ರಬದುಕಿಗೆ ಮುನ್ನುಡಿ ಬರೆಯಲು ಮುಂದಾದ ಸಚಿವ ಡಾ,ಹೆಚ್ ಕೆ ಪಾಟೀಲ್!

ಬೆಂಗಳೂರು: ರಾಜ್ಯದ ಸುಮಾರು ನಾಲ್ಕುನೂರಾ ನಲವತ್ತಕ್ಕೂ ಅಧಿಕ ಸರಕಾರಿ ಪದವಿ ಕಾಲೇಜುಗಳಲ್ಲಿ ಕಳೆದೆರಡು ದಶಕಗಳಿಂದ ಭದ್ರತೆಯಿಲ್ಲದ ಸೇವೆ ಸಲ್ಲಿಸುತ್ತಿರುವ ಸುಮಾರು ಹತ್ತು ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆಗಾಗಿ ಹೋರಾಡುತ್ತಲೇಬಂದಿದ್ದಾರೆ.

Aug 10, 2025 - 06:55
 0  18

ಕೆಲವರು ಆ ಹೋರಾಟದಲ್ಲೇ ಇಹಲೋಕಯಾತ್ರೆಯನ್ನು ಮುಗಿಸಿ ಹೆತ್ತವರನ್ನು,ಹೆಂಡತಿ ಮಕ್ಕಳನ್ನು ಬೀದಿಗೆ ಬಿಟ್ಟು ಸ್ನಾತಕೋತ್ತರ ಪದವಿ ಪಡೆದಿದ್ದರೂ ಕುಟುಂಭ ನಿರ್ವಹಣೆ ಮಾಡಲಾಗದ ಮಕ್ಕಳೆಂಬ ಕಳಂಕ ಹೊತ್ತು ಸ್ವರ್ಗಸ್ತರಾದರು.

ಇನ್ನೂ ಕೆಲವು ಜನ ಇತ್ತ ಉತ್ತಮವಾಗಿ ಬದುಕಲೂ ಆಗದೆ ಅತ್ತ ಸಾಯಲೂ ಆಗದೆ ಸಮಾಜದ ಅಗೌರವಕ್ಕೆ ಟೀಕೆಗಳಿಗೆ ಗುರಿಯಾಗಿ ಜೀವಂತಶವಗಳಂತೆ ಬದುಕುತ್ತಿದ್ದಾರೆ.

ಕಡಲ ಮಧ್ಯದಲ್ಲಿ ಬಿರುಗಾಳಿಗೆ ಸಿಕ್ಕ ಒಂಟಿ ಹಡಗಿನಂತೆ,ಜಲಸಮಾಧಿಯಾಗುವ ಭೀತಿಯಲ್ಲಿ ಬದುಕುತ್ತಿದ್ದ ಅತಿಥಿ ಉಪನ್ಯಾಸಕರ ಪಾಲಿನ ಆಪದ್ಭಾಂಧವನಂತೆ ಬಂದು ಡೋಲಾಯಮಾನ ಪರಿಸ್ಥಿತಿಯಲ್ಲಿದ್ದ ಹಡಗಿನ ಚುಕ್ಕಾಣಿ ಹಿಡಿದ ಡಾ,ಕಲ್ಮನಿ,

ಸುರಿವ ಮಳೆ,ಬೀಸುವ ಬಿರುಗಾಳಿಯ ಮಧ್ಯಯೂ ಮುಳುಗುವ ಹಡುಗನ್ನು ಲಂಗರಿಗೆ ತರುವ ಸಾಹಸಮಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಈಗ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಕಾನೂನು ಸಚಿವರಾದ ಡಾ.ಎಚ್.ಕೆ.ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಅಡ್ವೊಕೇಟ್ ಜನರಲ್ ಜಾಕ್‌ವೆಲ್ ಜೊತೆಗೆ ಅತಿಥಿ ಉಪನ್ಯಾಸಕರ ಪರವಾಗಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಎಸ್.ಪಿ.ಕುಲಕರ್ಣಿ,ಆಯುಕ್ತೆ ಮಂಜುಶ್ರೀಯವರನ್ನು ಒಂದೇ ವೇಧಿಕೆಯಲ್ಲಿ ಸೇರಿಸುವ ಹೊಸ ಇತಿಹಾಸ ಸೃಷ್ಠಿಸಿದ್ದಾರೆ.

ಆ ಸಭೆಯ ನೇತೃತ್ವ ವಹಿಸಿದ್ದ ಹಿರಿಯ ಕಾನೂನು ಸಚಿವ ಡಾ,ಹೆಚ,ಕೆ,ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ಕಾನೂನು ನಿಯಮಾವಳಿ ರೂಪಿಸಿ ಯುಜಿಸಿ ನಾನ್ ಯುಜಿಸಿಯನ್ನದೆ, ಮಾನವೀಯತೆ ದೃಷ್ಟಿಯಿಂದ ಎಲ್ಲ ಅತಿಥಿ ಉಪನ್ಯಾಸಕರ ಒಳಿತಿಗಾಗಿ ಒಂದು ಬಾರಿ ಸೇವಾ ಸಕ್ರಮಾತಿಮಾಡಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಭೆಯಲ್ಲಿ ಹೇಳಿದರು.

ಎಲ್ಲಾ ಅತಿಥಿ ಉಪನ್ಯಾಸಕರಿಗೂ (ಯುಜಿಸಿ ನಾನ್ ಯುಜಿಸಿ)ಎಂಬ ಭೇದ ಮಾಡದೆ ಒಂದು ಬಾರಿ ಸೇವಾ ಸಕ್ರಮಾತಿ ಮಾಡಲು ಕಾನೂನು ನಿಯಮಾವಳಿಗಳನ್ನು ರೂಪಿಸುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಸಚಿವರು ಸೂಚಿಸಿದರು.

ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮಾನವೀಯ ದೃಷ್ಟಿಯಿಂದ ನ್ಯಾಯ ಒದಗಿಸುವ ಭರವಸೆ ನೀಡಿದರು. 

2009ರ ಹಿಂದೆ ಪಡೆದ ಎಂಫಿಲ್ ಪದವಿಯನ್ನು ಪರಿಗಣಿಸಲು ಯುಜಿಸಿಗೆ ಇಲಾಖೆ ಪತ್ರ ಬರೆದಿದ್ದು,ಪತ್ರಬಂದ ನಂತರ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಸಭೆಯಲ್ಲಿ ಮಾತನಾಡುತ್ತ ಎಲ್ಲಾ ಅತಿಥಿ ಉಪನ್ಯಾಸಕರ ಹಿತರಕ್ಷಣೆಗಾಗಿ ಇಲಾಖೆ ಮತ್ತು ಸರ್ಕಾರ ಶ್ರಮಿಸುತ್ತಿದ್ದು ಕಾನೂನು ಸಚಿವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೇವಾ ಸಕ್ರಮಾತಿ ಮಾಡಲು ಬದ್ದರಿದ್ದೇವೆ.

ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಯಂತೆ ಅತಿಥಿ ಉಪನ್ಯಾಸಕರ ಸೇವಾಭದ್ರತೆ ಒದಗಿಸಲು ವಿಶೇಷ ನಿಯಮಾವಳಿಗಳನ್ನು ರೂಪಿಸಿಲಾಗುವುದು ಎಂದರು.

ನಂತರ ರಾಜ್ಯಾಧ್ಯಕ್ಷ ಡಾ,ಕಲ್ಮನಿ ಮಾತನಾಡಿ ಅತಿಥಿ ಉಪನ್ಯಾಸಕರು ಕಳೆದೆರಡು ದಶಕಗಳಿಂದ ಅನುಭವಿಸುತ್ತಿರುವ ನರಕಯಾತನೆ ಯನ್ನು ಸಚಿವದ್ವಯರ ಮುಂದೆ ಸ್ಪಷ್ಟವಾಗಿ ಅನಾವರಣ ಮಾಡಿ ಪರಿಹಾರ ಒದಗಿಸುವ ಶಕ್ತಿ ನಿಮ್ಮಲ್ಲಿದೆ ಇದು ಕಾರ್ಯಗತಗೊಂಡರೆ ದೀರ್ಘಕಾಲದ ಸಮಸ್ಯೆಯೊಂದಕ್ಕೆ ಕಾಂಗ್ರೆಸ್ ಪಕ್ಷ ಶಾಶ್ವತ ಪರಿಹಾರ ಸೂಚಿಸಿದ ಶ್ರೇಯಸ್ಸು ದೊರೆಯುತ್ತದೆ ಎಂದು ಹೇಳಿದರು.

ಈ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow