ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿಂದ ಆರಂಭ

ವರದಿ ಶೇಖ ಖಾಜಾ ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ * ಶಿಸ್ತಿನ ಸಿಪಾಯಿಗಳ ಶಾಲೆಯಂತಾದ ರಾಯಚೂರಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣ

Aug 8, 2025 - 10:43
Aug 8, 2025 - 14:39
 0  45
ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿಂದ ಆರಂಭ
ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿಂದ ಆರಂಭ
ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿಂದ ಆರಂಭ
ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿಂದ ಆರಂಭ
ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿಂದ ಆರಂಭ
ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿಂದ ಆರಂಭ
ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿಂದ ಆರಂಭ
ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿಂದ ಆರಂಭ

ರಾಯಚೂರು ಆಗಸ್ಟ್ 07 (ಕರ್ನಾಟಕ ವಾರ್ತೆ): ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯು ಥರ್ಮಲ್ ಪಾವರ್ ಸ್ಟೇಷನ್, ಶಕ್ತಿ ಸ್ಥಾವರ ಖ್ಯಾತಿಯ ರಾಯಚೂರಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆರಂಭವಾಗಲಿದೆ.

ಆಗಸ್ಟ್ 8 ರಿಂದ ಆಗಸ್ಟ್ 22ರವರೆಗೆ ಹಾಗೂ ಆಗಸ್ಟ್ 25ರಂದು ಶಾರಿರೀಕ ದೇಹದಾರ್ಡ್ಯ ಪರೀಕ್ಷೆ ಮತ್ತು ಆಗಸ್ಟ್ 26ರಂದು ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಪ್ರವೇಶ ಪತ್ರದಲ್ಲಿ ನೀಡಲಾದ ದಿನಾಂಕಗಳಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಅಭ್ಯರ್ಥಿಗಳು ರಾಯಚೂರಿನಲ್ಲಿ ನಡೆಯುವ ಈ ಸೇನಾ ನೇಮಕಾತಿ ರ‍್ಯಾಲಿಗೆ ವರದಿ ಮಾಡಿಕೊಳ್ಳಲಿದ್ದಾರೆ.

ಸೇನೆಯಲ್ಲಿ ಎಲ್ಲ ವಿಭಾಗಗಳ ಆಯ್ಕೆಯಾಗಿ ನಡೆಯುವ ಸೇನಾ ನೇಮಕಾತಿ ರ‍್ಯಾಲಿಗೆ ರಾಯಚೂರು ನಗರದಲ್ಲಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ವಿಶಾಲ ಆವರಣವು ಸಿದ್ಧಗೊಂಡಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯ ಎಲ್ಲ ಕಾರ್ಯಚಟುವಟಿಕೆಗಳು ಆಗಸ್ಟ್ 8 ರಿಂದ ಆರಂಭವಾಗಿ ಆಗಸ್ಟ್ 26ರವರೆಗೆ ನಡೆಯಲಿವೆ.

ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅಭ್ಯರ್ಥಿಗಳಿಗೆ ಅನುಕೂಲವಾಗಲು ವಿಶ್ವ ವಿದ್ಯಾಲಯದ ಆವರಣದಲ್ಲಿ ಪೆಂಡಾಲ್ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಪೂರೈಕೆ, ಮೊಬೈಲ್ ಟಾಯ್ಲೆಟ್ ಸೇರಿದಂತೆ ನಾನಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಭಾಗಿಯಾಗಲು ವಿವಿಧೆಡೆ ವಸತಿ ಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆ ಸೇರಿದಂತೆ ನಾನಾ ಸೌಕರ್ಯ ಕಲ್ಪಿಸಲಾಗಿದೆ.

ಈ ಸೇನಾ ನೇಮಕಾತಿ ರ‍್ಯಾಲಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡು ಸಮಿತಿಗಳನ್ನು ರಚಿಸಿ ಸುವ್ಯವಸ್ಥೆಗೆ ಕ್ರಮ ವಹಿಸಿದ್ದಾರೆ. ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಮೇಲುಸ್ತುವಾರಿ ವಹಿಸಿದ್ದು, ತಹಸೀಲ್ದಾರರಾದ ಸುರೇಶ ವರ್ಮಾ, ಅಧಿಕಾರಿಗಳಾದ ಕೃಷ್ಣ ಶಾವಂತಗೇರಿ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ವಿವಿಧ ಸಮಿತಿಗಳ ನೇತೃತ್ವ ವಹಿಸಿದ್ದಾರೆ.

ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯ ಯಶಸ್ಸಿಗೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಹತ್ತಾರು ಸಭೆಗಳನ್ನು ನಡೆಸಿ ಆಯಾ ಸಮಿತಿಗಳಿಗೆ ನಾನಾ ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಿದಂತೆ ಆಯಾ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳು ಮತ್ತು ಸದಸ್ಯರಾದ ವಿವಿಧ ಇಲಾಖೆಯ ಅಧಿಕಾರಿಗಳು ಆಯಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಚೇರಿ ಅದೇಶದ ಮೂಲಕ ನಾನಾ ಕೆಲಸ ಕಾರ್ಯಗಳ ಹಂಚಿಕೆ ಮಾಡಿ ಕಾರ್ಯಪ್ರವೃತ್ತರಾಗಿದ್ದಾರೆ.

ಸೇನಾ ನೇಮಕಾತಿ ರ‍್ಯಾಲಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಅವರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಆವರಣದಲ್ಲಿ ಬ್ಯಾರಿಕೇಡ್ ಅಳವಡಿಸಿ, ಅಗತ್ಯ ಪ್ರಮಾಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಪೊಲೀಸ್ ಭದ್ರತೆಗೆ ಕ್ರಮವಹಿಸಿದ್ದಾರೆ.

*ಸೇನಾ ಅಧಿಕಾರಿಗಳು ಭಾಗಿ:* ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ಈ ಸೇನ ನೇಮಕಾತಿ ರ‍್ಯಾಲಿ ಪ್ರಕ್ರಿಯೆ ನಡೆಯಲಿದ್ದು, ಸೇನಾ ಅಧಿಕಾರಿ ಎಆರ್‌ಓ ಮನೋಜ್ ಸೇರಿದಂತೆ ಅನೇಕ ಅಧಿಕಾರಿಗಳು ಹಲವಾರು ದಿನಗಳಿಂದ ರಾಯಚೂರ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಆವರಣದಲ್ಲಿದ್ದು ಸೇನಾ ನೇಮಕಾತಿ ರ‍್ಯಾಲಿಯ ನಾನಾ ಪ್ರಕ್ರಿಯೆಗಳನ್ನು ನಡೆಸಿ ಸಿದ್ಧತೆ ಮಾಡಿದ್ದಾರೆ.

*2017ರಲ್ಲಿ ನಡೆದಿತ್ತು:* ಮಹತ್ವದ ಸೇನಾ ಭರ್ತಿ ರ‍್ಯಾಲಿಯು ಈ ಹಿಂದೆ ರಾಯಚೂರ ಜಿಲ್ಲೆಯಲ್ಲಿ 2017ರಲ್ಲಿ 11 ದಿನಗಳ ಕಾಲ ನಡೆದಿತ್ತು. ಆ ವೇಳೆ ರಾಯಚೂರ ಜಿಲ್ಲೆಯ ಸಾರ್ವಜನಿಕರು ದವಸ ಧಾನ್ಯ ನೀಡಿ ಸಹಕರಿಸಿದ್ದು ನಮಗೆ ಈಗಲೂ ನೆನಪಿದೆ. ಅದಾದ ಬಳಿಕ ಇದೀಗ ಮತ್ತೆ ನಮ್ಮ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ‍್ಯಾಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ರ‍್ಯಾಲಿಗೆ ಬರುವ ಅಭ್ಯರ್ಥಿಗಳಿಗೆ ಊಟ, ವಸತಿಗೆ ಸಹಾಯ ಮಾಡೋಣ. ಎಲ್ಲ ಕಾರ್ಯಗಳಿಗೆ ಸಹಕಾರ ನೀಡಿ ರ‍್ಯಾಲಿಯನ್ನು ಯಶಗೊಳಿಸೋಣ ಎನ್ನುತ್ತಾರೆ ಮಾಜಿ ಸೈನಿಕರಾದ ಚೆನ್ನಾ ರೆಡ್ಡಿ.

*ರಾಯಚೂರಿನತ್ತ ಬರುತ್ತಿರುವ ಅಭ್ಯರ್ಥಿಗಳು*: ರಾಯಚೂರ ಸೇರಿದಂತೆ ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಿಂದ ಪ್ರಥಮ ಹಂತದಲ್ಲಿ ಆಯ್ಕೆಯಾದ ಅಂದಾಜು 15,000 ಅಭ್ಯರ್ಥಿಗಳು ಈ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದು, ಸೇನೆ ಸೇರಬೇಕು, ನಾಡಸೇವೆ ಮಾಡಬೇಕು ಎನ್ನುವ ಕನಸು ಹೊತ್ತ ಯುವ ಪಡೆಯು ರಾಯಚೂರ ಸಿಟಿಯತ್ತ ತಂಡೋಪತಂಡವಾಗಿ ಆಗಮಿಸುವ ದೃಶ್ಯಗಳು ಕಾಣಿಸುತ್ತಿವೆ.

*ಟಿಕೇಟ್ ಪ್ರಯಾಣ ದರ ನಿಗದಿ*: ಆಗಸ್ಟ್ 8ರಿಂದ ಆಗಸ್ಟ್ 26ರವರೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸೇನಾ ರ‍್ಯಾಲಿಯ ಅಭ್ಯರ್ಥಿಗಳಿಗೆ ಅನುಕೂಲವಾಗಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೆಚ್ಚುವರಿ ಸಾರಿಗೆ ಕಾರ್ಯಚರಣೆಗೆ ಕ್ರಮ ವಹಿಸಿದೆ. ಜೊತೆಗೆ ಟಿಕೆಟ್ ಪ್ರಯಾಣ ದರವನ್ನು ಸಹ ಸಾರಿಗೆ ಇಲಾಖೆಯು ನಿಗದಿಪಡಿಸಿದೆ. ವಾಲ್ಮೀಕಿ ಭವನ ರಾಜಮಾತಾ ದೇವಸ್ಥಾನ, ಬಂಜಾರ ಭವನ ಯರಗೇರಾ ರಸ್ತೆ, ಸಿದ್ರಾಂಪುರದ ಡಿಗ್ರಿ ಕಾಲೇಜ್ ನಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣಕ್ಕೆ ತೆರಳಲು ತಲಾ 20 ರೂ. ಟಿಕೇಟ್ ದರ ಹಾಗೂ ಗಾಂಧಿ ವೃತ್ತದ ಸಂತೋಷ ಹಬ್, ರೈಲ್ವೆ ನಿಲ್ದಾಣ ಮತ್ತು ರಾಯಚೂರ ಕೇಂದ್ರ ಬಸ್ ನಿಲ್ದಾಣದಿಂದ ಲಿಂಗಸೂರ ರಸ್ತೆಯಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ತೆರಳಲು ತಲಾ 15 ರೂ. ಟಿಕೇಟ್ ದರ ನಿಗದಿಪಡಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

*ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ:*

ಸೇನೆಯಲ್ಲಿ ಎಲ್ಲ ವಿಭಾಗಗಳ ಆಯ್ಕೆಯಾಗಿ ಸೇನಾ ನೇಮಕಾತಿ ರ‍್ಯಾಲಿಯನ್ನು ನಡೆಸಲಾಗುತ್ತದೆ. ಈ ಸೇನಾ ಭರ್ತಿಯು ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವುದು ವಿಶೇಷ. ಈ ರ‍್ಯಾಲಿಯಲ್ಲಿ ಬೇರೆ ಬೇರೆ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿಯಾಗಲಿದ್ದು, ರ‍್ಯಾಲಿಯು ಶಿಸ್ತಿನಿಂದ ನಡೆದಲ್ಲಿ ನಮ್ಮ ಜಿಲ್ಲೆಗೆ ಹೆಸರು ಬರಲಿದೆ. ರಾಯಚೂರ ಜಿಲ್ಲೆಯ ಸಾರ್ವಜನಿಕರು ಈ ಸೇನಾ ನೇಮಕಾತಿ ರ‍್ಯಾಲಿಗೆ ಸಹಕರಿಸಬೇಕು. ಈ ಭಾಗದ ವಿದ್ಯಾರ್ಥಿ-ಯುವಜನರು ಈ ರ‍್ಯಾಲಿಯಿಂದಾಗಿ ಸೇನೆ ಸೇರುವ ಸ್ಫೂರ್ತಿ ಹೊಂದಬೇಕು.

- *ಕೆ ನಿತೀಶ್, ಜಿಲ್ಲಾಧಿಕಾರಿಗಳು, ರಾಯಚೂರು ಜಿಲ್ಲೆ, ರಾಯಚೂರು*

What's Your Reaction?

like

dislike

love

funny

angry

sad

wow