ಮಸ್ಕಿ: ಸರ್ವೇ ಇಲಾಖೆ ಧ್ವಜಾರೋಹಣ ಮಾಡದೇ ಅಪಮಾನ
ಮಸ್ಕಿ : ದೇಶದಾದ್ಯಂತ 79ನೇ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರೆ ಪಟ್ಟಣದ ಕೆಲವು ಕಚೇರಿ ಹಾಗೂ ಸಹಕಾರಿ ಬ್ಯಾಂಕ್'ಗಳಲ್ಲಿ ಧ್ವಜಾರೋಹಣ ಮಾಡದೇ ನಿರ್ಲಕ್ಷ್ಯ ಮೆರೆದಿದ್ದು, ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪಟ್ಟಣದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿರಾಷ್ಟ್ರ ಧ್ವಜಾರೋಹಣ ಮಾಡದೇ ಅಗೌರವ ತೋರಿ ಅಪಮಾನ ಮಾಡಿದ್ದಾರೆ.
ಯಾವುದೇ ರೀತಿ ಕಟ್ಟಡ ಜಾಗದ ವ್ಯವಸ್ಥೆ ಇಲ್ಲದೆ ಸ್ವಯಂ ಪ್ರೇರಿತರಾಗಿ ಆಟೋ ಮತ್ತು ಹಮಾಲರ ಸಂಘಗಳು ಹಬ್ಬದಂತೆ ಸ್ವಾತಂತ್ರೋತ್ಸವನ್ನು ಆಚರಣೆ ಮಾಡಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವಕ್ತಪಡಿಸಿದ್ದಾರೆ. ಇವರೊಟ್ಟಿಗೆ ರೈತರಿಗೆ ಇರುವಂತಹ ಪರಿಕಲ್ಪನೆಗಳು ಈ ವಿದ್ಯಾವಂತರಿಗೆ
ಇಲ್ಲದಿರುವುದು ಒಂದು ನೋವಿನ ಸಂಗತಿ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಯಾವುದೇ ರೀತಿಯ ಸ್ಪಂದನೆ ನೀಡಿರುವುದಿಲ್ಲ.ಬಹುತೇಕ ಸಾರ್ವಜನಿಕರ ಮೊಬೈಲ್ ಸಂಖ್ಯೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ.
79 ನೇ ಸ್ವಾತಂತ್ರೋತ್ಸವದ ದಿನ ಇಂತಹ ದೇಶಕ್ಕೆ ಅಗೌರವ ತರುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿರುವ ಸಂಸ್ಥೆಗಳ ವಿರುದ್ಧ ಸಂಭಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಕಾದುನೋಡಬೇಕಿದೆ.
What's Your Reaction?






