ಮೆಟ್ರೋಗೆ ರಾಜ್ಯದ ಪಾಲೇ ಹೆಚ್ಚು ಮೋದಿ ಎದುರೇ 'ಕ್ರೆಡಿಟ್, ಪಡೆದುಕೊಂಡ  ಸಿಎಂ ಸಿದ್ದು

ಕೇಂದ್ರದಿಂದ 7,468.86 ಕೋಟಿ, ರಾಜ್ಯದಿಂದ 25,387 ಕೋಟಿ ರೂ. ಖರ್ಚು; ವಿವರ ಕೊಟ್ಟ ಸಿಎಂ. ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಒತ್ತು ಕೊಡುವಷ್ಟೇ ಕರ್ನಾಟಕಕ್ಕೂ ಒತ್ತು ಕೊಡಿ ಎಂದು ವೇದಿಕೆಯಲ್ಲೇ ಪ್ರಧಾನಿಗೆ ಸಿಎಂ ಆಗ್ರಹಿಸಿದರು.

Aug 10, 2025 - 19:39
Aug 10, 2025 - 20:00
 0  38

ಬೆಂಗಳೂರು: ಮೆಟ್ರೋ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ. ಕೇಂದ್ರ 50%, ರಾಜ್ಯ 50% ಖರ್ಚು ಮಾಡುವ ಒಪ್ಪಂದ ಆಗಿದೆ. ಆದ್ರೆ ರಾಜ್ಯ ಸರ್ಕಾರವೇ ಹೆಚ್ಚು ಖರ್ಚು ಮಾಡ್ತಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಧಾನಿ ಮೋದಿ ಎದುರೇ ಕ್ರೆಡಿಟ್ ಪ

ಡೆದುಕೊಂಡುರು.

ಐಐಐಟಿಯಲ್ಲಿ ನಮ್ಮ ಮೆಟ್ರೋದ ಕಿತ್ತಳೆ ಮಾರ್ಗಕ್ಕೆ (Orange Line) ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತಮಾಡಿದ ಸಿಎಂ ಮೋದಿ ಎದುರೇ ಕ್ರೆಡಿಟ್ ತೆಗೆದುಕೊಂಡರು. ಇದನ್ನೂ ಓದಿ: ಬೆಂಗಳೂರಿಗೆ ಬಿಜೆಪಿಯ ಯಾವೊಬ್ಬ ನಾಯಕ 10 ರೂ. ಅನುದಾನ ತಂದಿಲ್ಲ: ಡಿಕೆಶಿ ಆಕ್ರೋಶ.

ಪ್ರಧಾನಿ ಮೋದಿಯವು (Narendra Modi) ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮೆಟ್ರೋ ಕೇಂದ್ರ ರಾಜ್ಯಗಳ ಸಹಯೋಗದೊಂದಿಗೆ ನಡೆಯುವ ಯೋಜನೆ.

ಈ ಯೋಜನೆಗೆ ಕೇಂದ್ರ 50%, ರಾಜ್ಯ 50% ಖರ್ಚು ಮಾಡುವ ಒಪ್ಪಂದ ಆಗಿದೆ. ಆದ್ರೆ ರಾಜ್ಯ ಸರ್ಕಾರವೇ ಹೆಚ್ಚು ಕರ್ಚು ಮಾಡ್ತಿದೆ, ಕೇಂದ್ರ ತಾಂತ್ರಿಕ ಮತ್ತು ಹಣಕಾಸು ನೆರವು ಕೊಡ್ತಿದೆ. ಹಾಗಾಗಿ ಇದು ಕೇಂದ್ರ, ರಾಜ್ಯಗಳ ಜಂಟಿ ಕಾರ್ಯಕ್ರಮ ಎಂದು ಹೇಳಿದರು.

ಇದನ್ನೂ ಓದಿ: ಆಪರೇಷನ್ ಸಿಂಧೂರ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ: ಮೋದಿ ಈಗಾಗಲೇ 96.10 ಕಿಮೀ ಮೆಟ್ರೋ ರೈಲು ಕೆಲಸ ಮುಗಿದಿದೆ. ಇದಕ್ಕೆ ರಾಜ್ಯ 25,387 ಕೋಟಿ ರೂ. ಖರ್ಚು ಮಾಡಿದೆ. ಕೇಂದ್ರ 7,468.86 ಕೋಟಿ ಖರ್ಚು ಮಾಡಿದೆ, ಹಳದಿ ಮಾರ್ಗಕ್ಕೆ 7,160 ಕೋಟಿ ಖರ್ಚಾಗಿದೆ ಎಂದು ಹೇಳಿದ ಸಿಎಂ ಮೋದಿ ಎದುರಲ್ಲೇ ಕ್ರೆಡಿಟ್ ಕ್ರೈಮ್ ಮಾಡಿಕೊಂಡರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಯಶಸ್ಸಿನ ಹಿಂದೆ ತಂತ್ರಜ್ಞಾನವಿದೆ: ಮೋದಿ ಅಭಿನಂದನೆ. 2030ರ ಹೊತ್ತಿಗೆ 220 ಕಿ.ಮೀ ಉದ್ದದ ಮೆಟ್ರೋ ಮಾಡುವುದು ಕೇಂದ್ರದ ಉದ್ದೇಶ. ಇದು ಆದರೆ, ನಿತ್ಯ 30 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಬಹುದು. ಇವತ್ತು 3ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 3ಎ ಯೋಜನೆಗೆ ಡಿಪಿಆರ್ ರೆಡಿಯಾಗಿದೆ, ಕೇಂದ್ರಕ್ಕೆ ಕಳಿಸಿದ್ದೇವೆ. ಕೇಂದ್ರ ಇದಕ್ಕೆ ಅನುಮತಿ ಕೊಟ್ರೆ ಶೀಘ್ರ ಕಾಮಗಾರಿ ಶುರು ಮಾಡಬಹುದು ಎಂದರಲ್ಲದೇ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಒತ್ತು ಕೊಡುವಷ್ಟೇ ಕರ್ನಾಟಕಕ್ಕೂ ಒತ್ತು ಕೊಡಿ ಎಂದು ವೇದಿಕೆಯಲ್ಲೇ ಪ್ರಧಾನಿಗೆ ಸಿಎಂ ಆಗ್ರಹಿಸಿದರು. 

What's Your Reaction?

like

dislike

love

funny

angry

sad

wow