ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ - 8 ಜನರ ವಿರುದ್ದ ಪ್ರಕರಣ, ಒಬ್ಬ ಆರೋಪಿ ಆರೆಸ್ಟ್
ರಾಯಚೂರು|ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರ ಆಸ್ತಿಯನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಎಂಟು ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ತಾಲೂಕಿನ ಚಂದ್ರಬಂಡಾ ಹೋಬಳಿಯ ಶಾಖವಾದಿ ಗ್ರಾಮದ ಸರ್ವೆ 84 ರಲ್ಲಿರುವ ಖಾಸಿಂಸಾಬ್ ಗುಡುಸಾಬ ಎಂಬುವವರ ಹೆಸರಿನ ಜಮೀನನ್ನು ಆಸ್ತಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಖಾಸಿಂಸಾಬ್ 2013 ರಲ್ಲಿ ಮೃತವಾಗಿದ್ದರೂ ಆಸ್ತಿಯನ್ನು ನೊಂದಣಿ ಮಾಡಿಕೊಂಡಿರುವ ಕುರಿತು ನಗರದ ಪಶ್ಚಿಮ ಠಾಣೆಯಲ್ಲಿ 8 ಜನರ ವಿರುದ್ದ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಎಂ.ಡಿ.ಜಾವೀದ್, ಅಕ್ಷಯ ಕುಮಾರ ಭಂಡಾರಿ, ನಕಲಿ ಖಾಸಿಂಸಾಬ್, ಅಕ್ಷಯ ಕುಮಾರ ಭಂಡಾರಿ(ಆರೋಪಿ 3) ಸಬ್ ರಜಿಸ್ಟಾರ್ ಸಿಬ್ಬಂದಿ ಸಲೀಂ ಮೊಹಿನುದ್ದೀನ್, ಸಬ್ ರಿಜಿಸ್ಟ್ರಾರ ಕಚೇರಿಯ ಕೋಸಗಿ ನಾರಾಯಣ, ಎಸ್‌ಡಿಸಿ ಸುರೇಶ, ಪ್ರಹ್ಲಾದ ವಕೀಲ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಖಾವಾದಿ ಗ್ರಾಮದ ಖಾಜಾಬೀ ಎಂಬುವವರು ನೀಡಿದ ದೂರಿನ ಮೇರೆಗೆ 2013 ಅಕ್ಟೋಬರ್ 2 ರಂದು ಗುಡ್ ಸಾಬ್ ನಿಧನರಾಗಿದ್ದು, ಇನ್ನು ಜಮೀನು ಆಸ್ತಿ ಪತ್ನಿ ಹೆಸರಿನಲ್ಲಿ ವರ್ಗಾವಣೆಯಾಗಿಲ್ಲ. ಆದರೂ ನಕಲಿ ಆಧಾರ ಕಾರ್ಡ, ಸತ್ತಹೋದ ವ್ಯಕ್ತಿ ಜೀವಂತವಾಗಿರುವುದಾಗಿ ವ್ಯಕ್ತಿಯೊಬ್ಬರನ್ನು ಸಬ್ ರಜಿಸ್ಟ್ರಾರ ಕಚೇರಿ ಸಿಬ್ಬಂದಿ ಭಾಗಿಯಾಗಿ ಆಸ್ತಿಯನ್ನು ಜಿಪಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಕಲಿ ಜಿಪಿಎ ಸೃಷ್ಟಿಸಿರುವ ಆರೋಪದ ಮೇಲೆ ಅಹೇಸಾನ್ ಅಹ್ಮದ ಹಸೀಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
What's Your Reaction?






