ಜಿಲ್ಲಾಧಿಕಾರಿಗಳಿಂದ ಕಾಮಗಾರಿ ಪರಿವೀಕ್ಷಣೆ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಲು ಸೂಚನೆ

ರಾಯಚೂರಿನ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸಿ, ಬೇಗನೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸೂಚನೆ ನೀಡಿದರು. ಸೆಪ್ಟೆಂಬರ್ 11ರ ಸಂಜೆ, ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ

Sep 14, 2025 - 07:47
 0  29
ಜಿಲ್ಲಾಧಿಕಾರಿಗಳಿಂದ ಕಾಮಗಾರಿ ಪರಿವೀಕ್ಷಣೆ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಲು ಸೂಚನೆ
ಜಿಲ್ಲಾಧಿಕಾರಿಗಳಿಂದ ಕಾಮಗಾರಿ ಪರಿವೀಕ್ಷಣೆ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಲು ಸೂಚನೆ
ಜಿಲ್ಲಾಧಿಕಾರಿಗಳಿಂದ ಕಾಮಗಾರಿ ಪರಿವೀಕ್ಷಣೆ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಲು ಸೂಚನೆ

ಕಾಮಗಾರಿಯ ಉದ್ದೇಶಿತ ಸ್ಥಳವಾದ ಯರಮರಸ್ ಹೊರವಲಯದ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯ ಪರಿವೀಕ್ಷಣೆ ನಡೆಸಿ ಅವರು ಮಾತನಾಡಿದರು.

ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಪ್ರಸ್ತಾಪಿಸಿರುವ ರನ್‌ವೇ, ಸಿಆರ್‌ಎಫ್ ಕಟ್ಟಡ, ಎಟಿಸಿ ಕಟ್ಟಡ ಮತ್ತು ಮಾಸ್ಟರ್ ಪ್ಲಾನ್‌ದಲ್ಲಿ ತೋರಿಸಿದ ಎಲ್ಲ ಕಾಮಗಾರಿಗಳು ನಿಗದಿಪಡಿಸಿದ ಕಾಲಮಿತಿಯೊಳಗೆ ಪೂರ್ಣವಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಪ್ರಸ್ತುತ ವಿಮಾನ ನಿಲ್ದಾಣದ 2.5 ಕಿ ಮೀ ಉದ್ದದ ರನ್ ವೆ ಕಾಮಗಾರಿ ಪೂರ್ಣವಾಗಿದ್ದು, ಈದೀಗ ಮರ್ಮ ಹಾಕಲಾಗುತ್ತದೆ. ನಿಲ್ದಾಣದ ಕಾಂಪೌಂಡ್ ವಾಲ್ ಕಾಮಗಾರಿ ಶೇ.70ರಷ್ಟು ಪೂರ್ಣವಾಗಿದೆ.

ಪ್ಯಾಸೆಂಜರ್ ಟರ್ಮಿನಲ್ ಕಟ್ಟಡಕ್ಕೆ ಬುನಾದಿ ಫೂಟಿಂಗ್ ಹಾಕುವ ಕಾಮಗಾರಿ ಪೂರ್ಣವಾಗಿದೆ. ಸಿಎಫ್ ಆರ್ ಕಟ್ಟಡಕ್ಕೆ ಪುಟ್ಟಿಂಗ್ ಹಾಕುವ ಕಾಮಗಾರಿ ಸಹ ಪೂರ್ಣವಾಗಿದೆ. ಇಎಸ್ ಎಸ್ ಪುಟ್ಟಿಂಗ್ ಹಾಕುವ ಕಾಮಗಾರಿ ಶೇ.90ರಷ್ಟು ಪೂರ್ಣವಾಗಿದೆ ಎಂದು ಇದೆ ವೇಳೆ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ವೆಂಕಟೇಶ ಗಳಗ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಮಹೇಶಕುಮಾರ, ವಿಮಾನ ನಿಲ್ದಾಣದ ಎಂಜಿನಿಯರ್ ಪ್ರವೀಣ್ ಹಾಗೂ ಸಂಬಂಧಿಸಿದ ಗುತ್ತಿಗೆದಾರರ ಎಂಜಿನಿಯರು 

What's Your Reaction?

like

dislike

love

funny

angry

sad

wow