ಕೊಳಚಿ ನೀರಿನ ಹೊಂಡವಾಯಿತು ಮಸ್ಕಿ ಅಂಚೆ ಕಛೇರಿ

ಹೌದು ಪ್ರಿಯ ವೀಕ್ಷಕರೇ ಪ್ರಜಾಪ್ರತಿ ಧ್ವನಿ ಕನ್ನಡ ಸುದ್ದಿ ವಾಹಿನಿಯು ವಿಶೇಷ ವರದಿ ಒಂದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದೆ.

May 15, 2025 - 19:55
May 15, 2025 - 19:57
 0  20

ಮಸ್ಕಿ ಹೃದಯ ಭಾಗದಲ್ಲಿರುವ ಅಂಚೆ ಕಛೇರಿಯಲ್ಲಿ ಮಳೆ ಬಂದರೆ ಸಾಕು ಚರಂಡಿ ನೀರು ಮಳೆ ನೀರು ಸೇರಿಕೊಂಡು ಕೊಳಚೆ ನೀರಿನ ಹೋಂಡಾವಾಗಿ ಬಿಡುತ್ತದೆ. ನಾವು ವಿಕಲಚೇತನರು, ವೃದ್ಧರು, ವಿಧವೆಯರು  ಅಂಚೆ ಕಛೇರಿ ಕಾರ್ಯಾಲಯದಲ್ಲಿ ತೆವಳಿಕೊಂಡು ಹೋಗಿ  ವೇತನ ಪಡೆಯುವ ಹಾಗೆ  ಪರಿಸ್ಥಿತಿ  ನಿರ್ಮಾಣವಾಗಿದೆ,  ಹಲವಾರು ಬಾರಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ  ಮನವಿ ಮಾಡಿದರು ಕೂಡ ಇದುವರೆಗೆ  ಅಧಿಕಾರಿಗಳು ಅಂಚೆ ಕಛೇರಿ ಕಟ್ಟಡ ದುರಸ್ತಿ ಮಾಡದಿರುವುದು ನೋವಿನ ಸಂಗತಿಯಾಗಿದೆ, ಎಂದು  ಮಾಧ್ಯಮದ ಮುಂದೆ ತಮ್ಮ ಅಳಲನ್ನು ವ್ಯಕ್ತಪಡಿಸುತಿ ದ್ದಾರೆ.

ವರದಿಗಾರರು ಮತ್ತು ಪ್ರಗತಿಪರ ಸಂಘಟನೆ ಮುಖಂಡರು 

ಅಂಚೆ ಕಛೇರಿ ಸಮಸ್ಯೆಯ ಬಗ್ಗೆ 

ಸಂಬಂಧಪಟ್ಟ ಅಧಿಕಾರಿಯದ ರವೀಂದ್ರ ನಾಯಕ್ ಅವರನ್ನು ಫೋನ್ ಸಂಪರ್ಕ ಮಾಡಿದಾಗ ಅಧಿಕಾರಿ ರವೀಂದ್ರ ನಾಯಕ್ ಯಾವುದೇ ಪ್ರತಿಕ್ರಿಯೆ  ನೀಡದಿರುವುದೆ ಇವರ ಕಾರ್ಯ ಚಟುವಟಿಕೆ ಬಗ್ಗೆ ತಿಳಿಯುತ್ತದೆ.

 ಜನಸಾಮಾನ್ಯರ ಸಮಸ್ಯೆ ಅಂತ ಬಂದಾಗ ನಮ್ಮ  ದೇಶದ ಪ್ರಧಾನಿ ಅವರು ಕೂಡ    ಸಾಮಾನ್ಯ ಜನರ ಫೋನ್ ಸಂಭಾಷಣೆ  ಸ್ವೀಕರಿಸಿ ಸಮಸ್ಯೆ ಪರಿಹರಿಸುತ್ತಾರೆ. ಆದರೆ  ಇಂತಹ  ದಪ್ಪ ಚರ್ಮದ ಅಧಿಕಾರಿಗಳು ಕೆಲವೊಂದು ಇಲಾಕೆಗಳಲ್ಲಿ  ಇರುವುದರಿಂದ  ಜನಸಾಮಾನ್ಯರ ಪರಿಸ್ಥಿತಿ  ತುಂಬಾ ನೋವಿನ ಸಂಗತಿಯಾಗಿದೆ ಎಂದು  ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರು  ಬಾಲಸ್ವಾಮಿ ಜಿನ್ನಾಪುರ್  ಆಕ್ರೋಶ ವ್ಯಕ್ತಪಡಿಸುತ್ತಾ  ಇಂತಹ ಅಧಿಕಾರಿಗಳ ವಿರುದ್ಧ  ಸೂಕ್ತ ಕ್ರಮ ಜರುಗಿಸಿ ಅಂಚೆ ಕಛೇರಿ ಕಟ್ಟಡ ದುರಸ್ತಿ ಮಾಡುವುದರ ಮೂಲಕ ಸಮಸ್ಯೆಯನ್ನು  ಕೂಡಲೇ ಬಗೆಹರಿಸುವಂತೆ  ಸಂಬಂಧಪಟ್ಟ ಇಲಾಖೆ ಮತ್ತು ಕೇಂದ್ರ ಸರ್ಕಾರಕ್ಕೆ  ಆಗ್ರಹಿಸಿದರು.

 

What's Your Reaction?

like

dislike

love

funny

angry

sad

wow