ಸ್ವಚ್ಛತೆಗೆ ಮತ್ತೊಂದು ಹೆಸರು ಸಂಡೇ ಫಾರ್ ಸೋಶಿಯಲ್ ವರ್ಕ್ ಡಾ. ಅಮರೇಶ್ ನಾಗಲಿಕರ್
ಮಸ್ಕಿ : ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಆರಂಭ ಮಾಡಿರುವ ಪ್ರತಿ ರವಿವಾರವೂ ಒಂದಿಲ್ಲ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು ಆ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛತೆ ಮಾಡಿ ಬಣ್ಣವನ್ನು ಹಚ್ಚುವ ಮೂಲಕ ನಮ್ಮ ಭಾಗದ ಬಸ್ ನಿಲ್ದಾಣ ಸರ್ಕಾರಿ ಶಾಲೆಗಳು ಉದ್ಯಾನವನಗಳು ಸೇತುವೆಗಳು ಸುಂದರವಾಗಿ ಕಾಣಲು ಈ ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನವು ಒಂದು ಪ್ರೇರಣೆಯಾಗಿದೆ ಇದರಲ್ಲಿ ನಾವು ಈ ಸೇವೆಯಲ್ಲಿ ಭಾಗಿಯಾಗಿರುವುದು ನಮ್ಮ ಸೌಭಾಗ್ಯ ಎಂದು ಬೆಳಗಾವಿಯ ಖ್ಯಾತ ವೈದ್ಯರಾಗಿರುವ ಅಮರೇಶ್ ನಾಗಲಿಕರ್ ಹೇಳಿದರು.
ಮಂಜುನಾಥ್ ನಾಡಗೌಡ ಮಾತನಾಡಿ ನಮ್ಮ ಉದ್ಬಾಳ್ ಗ್ರಾಮದಲ್ಲಿ ಹಲವಾರು ಸಾಮಾಜಿಕ ಸೇವೆಯನ್ನು ಮಾಡಿರುವುದು ನಮಗೆ ಒಂದು ಮಾದರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ
ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ, ಕನ್ನಡಪರ ಹೋರಾಟಗಾರರಾದ ಬಸವರಾಜ್ ಉದ್ಬಾಳ್, ಬಳಗನೂರಿನ ಸಂಜಯ್ ಶೇಠ್, ಅಭಿನಂದನ್ ಸಂಸ್ಥೆಯ ಪ್ರಜ್ವಲ್, ಕಿಶೋರ್ ಹಾಗೂ ಇತರರು ಉಪಸ್ಥಿತರಿದ್ದರು.
What's Your Reaction?