ಪತ್ರಕರ್ತರ ವಿವಿಧ ಬೇಡಿಕೆಗೆ ಆಗ್ರಹಿಸಿ ಕಾ ನೀ ಪ ದ್ವನಿ ಸಂಘಟನೆಯಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಧರಣಿ ನಡೆಯಿತು
ಬೆಳಗಾವಿ 15ಡಿ : ರಾಜ್ಯದಲ್ಲಿರುವ ಎಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಸರ್ಕಾರವು ರಕ್ಷಣೆ, ಬಸ್ ಪಾಸ್ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಸೋಮವಾರ ಬೆಳಗಾವಿ ಸುವರ್ಣ ಸೌಧದ ಮುಂದೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ರವರ ನೇತೃವದಲ್ಲಿ ಸಾವಿರಾರು ನೊಂದ ಪತ್ರಕರ್ತರು ಹೋರಾಟದಲ್ಲಿ ಬಾಗವಯಿಸಿ ರಾಜ್ಯ ಸರಕಾರದ ನಡೆ ಹಾಗೂ ಮಲತಾಯಿ ದೋರಣೆ ಖಂಡಿಸಿ ಆಕ್ರೋಶ ವೇಕ್ತಾ ಪಡಿಸಿದರು.
ನಂತರ ಕೆ. ಎಚ್ ಮುನಿಯಪ್ಪ ನಗರಾಭಿವೃದ್ಧಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ರವರು
ಎಲ್ಲಾ ಪತ್ರಕರ್ತರಿಗೂ ವೃತ್ತಿ ಸಂಬಂಧಿಸಿತ ಚಟುವಟಿಕೆಗಳ ಕಾರ್ಯನಿರ್ವಹಿಸಲು ರಾಜ್ಯಾದಂತ ಓಡಾಡಲು ಉಚಿತ ಬಸ್‌ಪಾಸ್ ವ್ಯವಸ್ಥೆ ಕಲ್ಪಿಸಬೇಕು, ಸರ್ಕಾರ ಹಾಗೂ ಸಾರ್ವಜನಿಕರ ಮದ್ಯೆ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ರಾಜ್ಯದ ಸಮಸ್ತ ಪತ್ರಕರ್ತರಿಗೆ ಈ ಕೂಡಲೇ ಸರ್ಕಾರ ಪತ್ರಕರ್ತರ ರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸಬೇಕು, ವಾರ್ತಾ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ 300 ಕ್ಕೂ ಅಧಿಕ ಸಿಬ್ಬಂದಿಯನ್ನು ಸರಕಾರ ಕೂಡಲೇ ನೇಮಕಗೊಳಿಸಬೇಕು (Press Registrar General of India) ಹಾಗು ಡಿಜಿಟಲ್ ಮಾಧ್ಯಮ ಪತ್ರಕರ್ತರಿಗೂ ವಿಧಾನಸೌಧ, ವಿಕಾಸಸೌಧ ಪ್ರವೇಶಿಸಲು ಮುಕ್ತ ಅವಕಾಶ ಒದಗಿಸಬೇಕು. ರಾಜ್ಯದ ಕಾರ್ಯನಿರತ ಪ್ರತಿಯೊಬ್ಬ ಪತ್ರಕರ್ತರುಗಳಿಗೆ ಜೀವ ವಿಮಾ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು. ನಾಡಿನ ಪತ್ರಕರ್ತರ ಹಿತಕ್ಕಾಗಿ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಪತ್ರಕರ್ತರು ಕರ್ತವ್ಯ ನಿರ್ವಹಿಸುವಾಗ ಸಹಜ ಸಾವು ಹಾಗೂ ಅಪಘಾತದಿಂದ ಮೃತಪಟ್ಟರೆ ಆ ಪತ್ರಕರ್ತರ ಕುಟಂಬಕ್ಕೆ ಸರ್ಕಾರದಿಂದ 10.ಲಕ್ಷ ರೂಗಳ ಪರಿಹಾರ ಒದಗಿಸಬೇಕು, ಪತ್ರಕರ್ತರ ಮಾಸಾಸನ ನಿಯಮಗಳನ್ನು ಸರಳೀಕರಿಸಿ ಸಂಕಷ್ಟದಲ್ಲಿರುವ ಹಿರಿಯ ಪತ್ರಕರ್ತರಿಗೆ ಸರ್ಕಾರ ನೆರವಾಗಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸದನದಲ್ಲಿ ಚರ್ಚಿಸಿ ಸರ್ಕಾರ ಕೂಡಲೇ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಒತ್ತಾಯಿಸುದರು.
ಹೋರಾಟದ ಧರಣಿ ಉದ್ದೇಶಿಸಿ ಉಪಾಧ್ಯಕ್ಷ ಇಸಾಕ್ ಎಮ್ ಸೇರಿದಂತ್ತೆ ಕಾ ನೀ ಪ ದ್ವನಿ ಮುಖಂಡರು ಮಾತನಾಡಿದರು.
ಈ
ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್. ರಾಜ್ಯ ಉಪಾಧ್ಯಕ್ಷರಾದ ಇಸಾಕ್. ಎಸ್ ಎಸ್ ಪಾಟೀಲ್. ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಹೋರಾಟದಲ್ಲಿ ಉಪಸ್ಥಿತರಿದ್ದರು.
What's Your Reaction?



