ಡಿ. 15, ಪತ್ರಕರ್ತರ ವಿವಿಧ ಬೇಡಿಕೆ ಆಗ್ರಹಿಸಿ ಬೆಳಗಾವಿ ಚಲೋ ಬೃಹತ್ ಹೋರಾಟ

ಬಳ್ಳಾರಿ : ರಾಜ್ಯದಲ್ಲಿರುವ ಎಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಸರ್ಕಾರವು ರಕ್ಷಣೆ, ಬಸ್ಪಾಸ್ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಡಿಸೆಂಬರ್ 15 ರಂದು ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ರವರು ತಿಳಿಸಿದ್ದಾರೆ.

Dec 10, 2025 - 18:29
 0  75
ಡಿ. 15, ಪತ್ರಕರ್ತರ ವಿವಿಧ ಬೇಡಿಕೆ ಆಗ್ರಹಿಸಿ  ಬೆಳಗಾವಿ ಚಲೋ ಬೃಹತ್   ಹೋರಾಟ
ಕ ಕಾ ನೀ ಪ ದ್ವನಿ ರಾಜ್ಯಾಧ್ಯಕ್ಷರು ಬಂಗ್ಲೆ ಮಲ್ಲಿಕಾರ್ಜುನ್ ಮತ್ತು ರಾಜ್ಯ ಉಪಾಧ್ಯಕ್ಷರು ಇಸಾಕ್ ಎಮ್

ಡಿಸೆಂಬರ್ 15 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಪತ್ರಕರ್ತರಿಗೂ ವೃತ್ತಿ ಸಂಬಂಧಿಸಿತ ಚಟುವಟಿಕೆಗಳ ಕಾರ್ಯನಿರ್ವಹಿಸಲು ರಾಜ್ಯಾದಂತ ಓಡಾಡಲು ಉಚಿತ ಬಸ್‌ಪಾಸ್ ವ್ಯವಸ್ಥೆ ಕಲ್ಪಿಸಬೇಕು, ಸರ್ಕಾರ ಹಾಗೂ ಸಾರ್ವಜನಿಕರ ಮದ್ಯೆ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ರಾಜ್ಯದ ಸಮಸ್ತ ಪತ್ರಕರ್ತರಿಗೆ ಈ ಕೂಡಲೇ ಸರ್ಕಾರ ಪತ್ರಕರ್ತರ ರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸಬೇಕು, ವಾರ್ತಾ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ 300 ಕ್ಕೂ ಅಧಿಕ ಸಿಬ್ಬಂದಿಯನ್ನು ಸರಕಾರ ಕೂಡಲೇ ನೇಮಕಗೊಳಿಸಬೇಕು (Press Registrar General of India) ಎಲ್ಲಾ ಪತ್ರಕರ್ತರಿಗೂ ವಿಧಾನಸೌಧ, ವಿಕಾಸಸೌಧ ಪ್ರವೇಶಿಸಲು ಮುಕ್ತ ಅವಕಾಶ ಒದಗಿಸಬೇಕು. ರಾಜ್ಯದ ಕಾರ್ಯನಿರತ ಪ್ರತಿಯೊಬ್ಬ ಪತ್ರಕರ್ತರುಗಳಿಗೆ ಜೀವ ವಿಮಾ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು. ನಾಡಿನ ಪತ್ರಕರ್ತರ ಹಿತಕ್ಕಾಗಿ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಪತ್ರಕರ್ತರು ಕರ್ತವ್ಯ ನಿರ್ವಹಿಸುವಾಗ ಸಹಜ ಸಾವು ಹಾಗೂ ಅಪಘಾತದಿಂದ ಮೃತಪಟ್ಟರೆ ಆ ಪತ್ರಕರ್ತರ ಕುಟಂಬಕ್ಕೆ ಸರ್ಕಾರದಿಂದ 10.ಲಕ್ಷ ರೂಗಳ ಪರಿಹಾರ ಒದಗಿಸಬೇಕು, ಪತ್ರಕರ್ತರ ಮಾಸಾಸನ ನಿಯಮಗಳನ್ನು ಸರಳೀಕರಿಸಿ ಸಂಕಷ್ಟದಲ್ಲಿರುವ ಹಿರಿಯ ಪತ್ರಕರ್ತರಿಗೆ ಸರ್ಕಾರ ನೆರವಾಗಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ರಾಜ್ಯ ಉಪಾಧ್ಯಕ್ಷ ಇಸಾಕ್ ಎಮ್ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಎಲ್ಲಾ ಜಿಲ್ಲೆ ಸೇರಿದಂತೆ ರಾಯಚೂರು ಜಿಲ್ಲೆಯಿಂದ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿಯಲ್ಲಿ ನಡೆಯುವ ಪತ್ರಕರ್ತರ ಹೋರಾಟ ಕ್ಕೆ ಆಗಮಿಸಬೇಕೆಂದು ರಾಯಚೂರು ಉಪಾಧ್ಯಕ್ಷ ಎಸ್ ನಜೀರ್ ಮಸ್ಕಿ ಮನವಿ ಮಾಡಿದ್ದಾರೆ.

What's Your Reaction?

like

dislike

love

funny

angry

sad

wow