ಬಳಗಾನೂರು ಪಟ್ಟಣ ಪಂಚಾಯ್ತಿಯ ಜನವಿರೋಧಿ ನಡೆ ಖಂಡಿಸಿ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ
ಬಳಗಾನೂರು ಡಿ15 :ಪಟ್ಟಣಪಂಚಾಯ್ತಿ ಆಡಳಿತದ ನಿರ್ಲಕ್ಷ್ಯ,ಭ್ರಷ್ಟಾಚಾರ,ಮತ್ತು ಜನವಿರೋಧಿ ನಡೆಯವಿರುದ್ದ ಕರ್ನಾಟಕ ರಾಜ್ಯ ರೈತಸಂಘ ತಾಲೂಕಾ ಘಟಕ ಮಸ್ಕಿಯ ವತಿಯಿಂದ ಸೋಮವಾರ ಬೆಳಿಗ್ಗೆ ಮಸ್ಕಿಯ ಡಾಕ್ಟರ್,ಬಿ,ಆರ್,ಅಂಬೇಡ್ಕರ ಪುತ್ತಳಿಯ ಮುಂಭಾಗ ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿ,ಪಿ,ಐ,ಎಮ್,ಎಲ್,ರೆಡ್ ಸ್ಟಾರ್ ನ ರಾಜ್ಯಸಮಿತಿಯ ಸದಸ್ಯ ಎಮ್,ಗಂಗಾಧರ್ ಬುದ್ದಿನ್ನಿ ಬಳಗಾನೂರು ಪಟ್ಟಣ ಪಂಚಾಯ್ತಿ ಅವ್ಯವಸ್ಥೆಯ ಆಗರವಾಗಿದೆ 509 ಸರ್ವೆ ನಂಬರಿನ ಜಮೀನಿನಲ್ಲಿ ಹಲವಾರು ಕುಟುಂಭಗಳು ವಾಸಮಾಡುತ್ತಿದ್ದಾರೆ,ಆದರೆ ಖಾಸಗಿ ವ್ಯಕ್ತಿಗಳು ಪಶ್ಚಿಮಕ್ಕಿರುವ ಐದು ಅಡಿ ರಸ್ತೆಯನ್ನು ವಿನಾಕಾರಣ ಬಂದ್ ಮಾಡಿ ನಿವಾಸಿಗಳ ಓಡಾಟಕ್ಕೆ ತೊಂದರೆ ನೀಡುತ್ತಿದ್ದಾರೆ,ಇದನ್ನು ಕೂಡಲೆ ಸ್ಥಳಪರಿಶೀಲನೆ ಮಾಡಿ ಸರಿಪಡಿಸಬೇಕು.
ಬಸವೇಶ್ವರ ನಗರದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಬೇಕು ಹಾಗೂ ಹೈಟೆಕ್ ಶೌಚಾಲಯ ನಿರ್ಮಿಸಬೇಕು.
ಪರಿಸರ,ಜನ,ಜಾನುವಾರುಗಳಿಗೆ ಕಂಟಕವಾಗಿರುವ ಬುದ್ದಿನ್ನಿ ಮತ್ತು ಜಾಲವಾಡಗಿಯಲ್ಲಿನ ಅಕ್ರಮ ಮರಳುಗಣಿಗಾರಿಕೆಗೆ ಪೂರ್ಣವಿರಾಮವಿಡಬೇಕು.
ಚರಂಡಿ,ರಸ್ತೆ ಬದಿಯ ತಿಪ್ಪೆಗಳು,ಶುದ್ದಕುಡಿಯುವ ನೀರಿನ ಸರಬರಾಜು,ಆಸ್ಪತ್ರೆಯ ಪಕ್ಕದ ಬಯಲು ಶೌಚಾಲಯದ ತೆರವು,ಪಟ್ಟಣ ಪಂಚಾಯ್ತಿಯ ಲಂಚಾವತಾರ,ಬೀದಿದೀಪಗಳ ಅಳವಡಿಕೆ,ಸ್ವತಹ ಪಟ್ಟಣ ಪಂಚಾಯ್ತಿಯೇ ಊರಿನ ಕಸವನ್ನೆಲ್ಲ ಹಳ್ಳದಲ್ಲಿ ಹಾಕುತ್ತಿರುವುದನ್ನು ನಿಲ್ಲಿಸಬೇಕು,
ಬಯಲು ಶೌಚಾಲಯ ಮುಕ್ತ ಮಾಡಬೇಕು,ಕ್ಯಾಂಪ್ ಗಳ ಮನೆಗಳನ್ನು ಡಿಮ್ಯಾಂಡಿನಲ್ಲಿ ಸೇರಿಸಬೇಕು ಇಲ್ಲವಾದರೆ ಕರ್ನಾಟಕ ರೈತಸಂಘ A,I,K,K,S, ನ ನೇತೃತ್ವದಲ್ಲಿ ತಹಸಿಲ್ ಕಾರ್ಯಾಲಯದ ಮುಂದೆ ಉಗ್ರಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಸಿ ತಹಸಿಲ್ದಾರ್ ಮಂಜುನಾಥ ಬೋಗಾವತಿಯವರಿಗೆ ಮನವಿಪತ್ರವನ್ನು ನೀಡಿದರು.
ಇದಕ್ಕೂ ಮೊದಲು ಕರ್ನಾಟಕ ರೈತಸಂಘದ ಪ್ರಧಾನಕಾರ್ಯದರ್ಶಿ ಮಾರುತಿ ಜಿನ್ನಾಪೂರು,ಹೋರಾಟಗಾರ ಬಸವರಾಜ ಎಕ್ಕಿ ಮಾತನಾಡಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರೈತಸಂಘದ ಮಸ್ಕಿ ತಾಲೂಕಾ ಅಧ್ಯಕ್ಷ ಸಂತೋಷ ಹಿರೇದಿನ್ನಿ,ತಾಲೂಕಾ ಕಾರ್ಯದರ್ಶಿ ವೆಂಕಟೇಶ ನಾಯಕ,ಹುಲುಗಪ್ಪ,ಶಾಂತಮೂರ್ತಿ,ಮರಿಯಪ್ಪ,ದುರುಗಪ್ಪ,ಶರಣಪ್ಪ,ಶಿವಣ್ಣ,ಹನುಮಂತ,ಹುಚ್ಚಪ್ಪ,ಯಂಕಪ್ಪ ಸೇರಿದಂತೆ ಹಲವು ಹೋರಾಟಗಾರರು ಭಾಗವಹಿಸಿದ್ದರು.
What's Your Reaction?



