ಕ.ರಾ.ಅಂ.ನೌ.ಸಂಘದ ಮುಖಂಡರೊಂದಿಗೆ ಕಾರ್ಯಕರ್ತೆಯರು : ಸಿಐಟಿಯು ಸೇರ್ಪಡೆ ಘೋಷಣೆ

Aug 1, 2025 - 05:13
Aug 1, 2025 - 05:54
 0  16
ಕ.ರಾ.ಅಂ.ನೌ.ಸಂಘದ ಮುಖಂಡರೊಂದಿಗೆ ಕಾರ್ಯಕರ್ತೆಯರು : ಸಿಐಟಿಯು ಸೇರ್ಪಡೆ ಘೋಷಣೆ
ಕ.ರಾ.ಅಂ.ನೌ.ಸಂಘದ ಮುಖಂಡರೊಂದಿಗೆ ಕಾರ್ಯಕರ್ತೆಯರು : ಸಿಐಟಿಯು ಸೇರ್ಪಡೆ ಘೋಷಣೆ

ವಿಜಯನಗರ ಜಿಲ್ಲೆ ಕೂಡ್ಲಿಗಿ : ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕೂಡ್ಲಿಗಿ ತಾಲೂಕು ಘಟಕ , ರಾಜ್ಯ ಘಟಕ ಹಾಗೂ ವಿಜಯನಗರ ಜಿಲ್ಲಾ ಘಟಕ ನಿರ್ಧೇಶನದಂತೆ ಸಿಐಟಿಯು ಸಂಘಟನೆಗೆ ಸೇರ್ಪಡೆಗೊಂಡಿರುವುದಾಗಿ ಘೋಷಿಸಲಾಗಿದೆ. ಸಂಬಂಧಿಸಿದಂತೆ ಕ.ರಾ.ಅಂ.ನೌ.ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾದ ಕೆ.ನಾಗರತ್ನ ರವರು , ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಮ್.ಸ್ವಪ್ನರವರು ಜಂಟಿ ಹೇಳಿಕೆ ನೀಡಿದ್ದಾರೆ. ಅವರು ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನದ ಹತ್ತಿರ ವಿರುವ , ಸಿಐಟಿಯು ತಾಲೂಕು ಕಚೇರಿಯಲ್ಲಿ ಅಧೀಕೃತವಾಗಿ ಹೇಳಿಕೆ ನೀಡಿ ಖಚಿತಪಡಿಸಿದ್ದಾರೆ. ಅಂಗನವಾಡಿ ಸಂಘದ ರಾಜ್ಯ ಮುಖಂಡರಾದ ಕೆ.ನಾಗರತ್ನ ರವರು ಮಾತನಾಡಿದರು , ಸಿ ಐ ಟಿ ಯು ಸಂಘಟನೆ ರಾಜ್ಯಾಧ್ಯಂತ ತುಂಬಾ ಪ್ರಭಲ ಹಾಗೂ ಪ್ರಭಾವಿ ಸಂಘಟನೆಯಾಗಿ ಹೊರಹೊಮ್ಮಿದೆ. ಕ.ರಾ.ಅಂ.ನೌ. ಸಂಘದ ರಾಜ್ಯಾಧ್ಯಕ್ಷರಾದ ವರಲಕ್ಷ್ಮಿ ಕಾಮ್ರೆಡ್ ರವರು , ರಾಜ್ಯದ ಸಮಸ್ತ ಅಂಗನವಾಡಿ ನೌಕರರ ಏಳಿಗೆಗಾಗಿ ಹಾಗೂ ಹಲವಾರು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ. ಸರ್ಕಾರಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು , ನಮ್ಮೆಲ್ಲರ ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆಹರಿಸಬೇಕೊಳ್ಳಬೇಕಿದೆ ಎಂದರು. ಕ.ರಾ.ಅಂ.ನೌ.ಸಂಘದ ರಾಜ್ಯ ಮುಖಂಡರ‍ಾದ ಬಿ.ಉಮಾದೇವಿ, ಸಿಐಟಿಯು ಸಂಘಟನೆ ಹಾಗೂ ಕಾರ್ಮಿಕ ಮುಖಂಡರು , ವಕೀಲರಾದ ಸಿ.ವಿರುಪಾಕ್ಷಪ್ಪ ನೇತೃತ್ವದಲ್ಲಿ. ಸಿಐಟಿಯು ಸಂಘಟನೆಯ ತಾಲೂಕು ಮುಖಂಡರಾದ , ಗುನ್ನಳ್ಳಿ ರಾಘವೇಂದ್ರ. ಕ.ರಾ.ಅಂ.ನೌ.ಸಂಘದ ತಾಲೂಕು , ಹಾಗೂ ವಿವಿದ ಘಟಕಗಳ ಪದಾಧಿಕಾರಿಗಳು ಸದಸ್ಯರು. ವಾಲ್ಮೀಕಿ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಬೊಮ್ಮಘಟ್ಟ ಪಂಪಾಪತಿ , ವಾಲ್ಮೀಕಿ ಸಮುದಾಯದ ಮುಖಂಡರಾದ ಯು.ಗೌರಮ್ಮರವರ ಸ್ವಾಮಿರವರು ಉಪಸ್ಥಿತರಿದ್ದರು. *ಪದಾಧಿಕಾರಿಗಳ ಆಯ್ಕೆ*- ಈ ಸಂದರ್ಭದಲ್ಲಿ ಕೂಡ್ಲಿಗಿ ಸಿ ಐ ಟಿಯು ಸಂಘಕ್ಕೆ ಸೇರಿದ , ಕ.ರಾ.ಅಂ.ನೌ.ಸಂಘದ ಪದಾಧಿಕಾರಿಗಳ ಹೆಸರು ಇಂತಿದೆ. ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ , ಕೂಡ್ಲಿಗಿ ತಾಲೂಕು ಅಧ್ಯಕ್ಷರಾಗಿ ಮಹಾಂತೇಮ್ಮ.

ಪ್ರಧಾನ ಕಾರ್ಯದರ್ಶಿಯಾಗಿ ಕೆ. ಯೆಂಕಮ್ಮ , ಖಜಾಂಚಿ ಕೆಂಚಮ್ಮ ,

 ಉಪಾದ್ಯಕ್ಷರಾಗಿ ಸುಮಂಗಳ ,

 ಸಹಕಾರ್ಯದರ್ಶಿ ಗಳಾಗಿ ಜ್ಯೋತಿ ,ಕವಿತಾ, ಚೌಡಮ್ಮ, ಕಾಮಾಕ್ಷಿ ಆಯ್ಕೆಯಾಗಿದ್ದಾರೆ. 

What's Your Reaction?

like

dislike

love

funny

angry

sad

wow