ಟಾಟಾ ಏಸ್ ವಾಹನ ಅಪಘಾತ: 108 ಆಂಬ್ಯುಲೆನ್ಸ್ ಸೇವೆಯಿಂದ 10ಕ್ಕೂ ಹೆಚ್ಚು ಮಂದಿಗೆ ತುರ್ತು ಚಿಕಿತ್ಸೆ
ಮಾನ್ವಿ :ಕುರಡಿ ಕ್ರಾಸ್ ಬಳಿ ಅಪಘಾತ:108 ಆಂಬ್ಯುಲೆನ್ಸ್ ತಂಡದಿಂದ ಜನರ ಜೀವ ರಕ್ಷಣೆ
ರಾಯಚೂರು: ಮಾನ್ವಿ ಕಡೆಗೆ ಸಾಗುತ್ತಿದ್ದ ಟಾಟಾ ಏಸ್ ವಾಹನವು ಸಾಯಂಕಾಲ 6 ಗಂಟೆ ಸುಮಾರು ಕುರಡಿ ಕ್ರಾಸ್ ಹತ್ತಿರ ಟೈರ್ ಬ್ಲಾಸ್ಟ್ ಆಗಿ ಅಪಘಾತಕ್ಕೊಳಗಾಯಿತು. ಈ ವಾಹನದಲ್ಲಿ ಕಾರ್ಮಿಕ ಕೆಲಸ ಮುಗಿಸಿಕೊಂಡು ಕಲ್ಮಲಾಯಿಂದ ಮನ್ವಿಗೆ ಹಿಂದಿರುಗುತ್ತಿದ್ದ ಹಲವರು ಪ್ರಯಾಣಿಸುತ್ತಿದ್ದರು.
ಘಟನೆ ಸಂಬಂಧಿತ ಮಾಹಿತಿಯು 108 ಆಂಬ್ಯುಲೆನ್ಸ್ ತಂಡಕ್ಕೆ ಲಭಿಸಿದ ತಕ್ಷಣ, ಸ್ಥಳಕ್ಕೆ ಧಾವಿಸಿ, ತಕ್ಷಣದ ಪ್ರಥಮ ಚಿಕಿತ್ಸೆ ನೀಡಲು ಮುಂದಾದರು. ಗಾಯಗೊಂಡ 10ಕ್ಕೂ ಹೆಚ್ಚು ಮಂದಿ ಮೊದಲು ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ (PHC) ಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ RIMS (ರಾಯಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಸ್ಥಳೀಯರು 108 ಆಂಬ್ಯುಲೆನ್ಸ್ ಸಿಬ್ಬಂದಿಯ ಸಮಯೋಚಿತ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸೇವೆಯು ತುರ್ತು ಸಮಯದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಮೂಲಕ ಮಾನವೀಯತೆಯ ನಿಜವಾದ ಉದಾಹರಣೆಯಾಗಿರುತ್ತದೆ ಎಂದು ಜನರು ಶ್ಲಾಘಿಸಿದರು.
What's Your Reaction?






