ರಾಯಚೂರು ಏಮ್ಸ್ ಗಾಗಿ ನಡೆದಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ 1000 ದಿನಗಳು
ಪಕ್ಷಾತೀತ ಹೋರಾಟದಿಂದ ರಾಜಕೀಯ ಇಚ್ಚ ಶಕ್ತಿಯಿಂದ ಮಾತ್ರ ರಾಯಚೂರಿಗೆ ಏಮ್ಸ್ ದೊರೆಯಲು ಸಾಧ್ಯ ---ಜಿ ಕುಮಾರ್ ನಾಯಕ್ ಸಂಸದ.
ರಾಯಚೂರು ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ಒಂದು ಸಾವಿರ ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ 1000 ದಿನಗಳ ಹೋರಾಟದ ದಿನದಂದು ಚಾರಿತ್ರಿಕವಾದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ನಗರದ ಕರ್ನಾಟಕ ಸಂಘದಿಂದ ಹೊರಟ ವಿದ್ಯಾರ್ಥಿ ಯುವಜನ ರೈತರ ಕಾರ್ಮಿಕರ ಸಾವಿರಾರು ಜನರ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಂಸದ ಜಿ. ಕುಮಾರ್ ನಾಯಕ್, ರವಿ ಬೋಸರಾಜ್, ಏನ್ ಸೂಪರ್ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಅಶೋಕ್ ಕುಮಾರ್ ಜೈನ್ ನಗರಸಭೆ ಸದಸ್ಯ ಜಯಣ್ಣ ರುದ್ರಪ್ಪ ಅಂಗಡಿ ಜಯಂತ್ ರಾವ್ ಪತಂಗೆ ಈಸೋಫ್ ಖಾನ್ ಮುಂತಾದವರು ಪ್ರಮುಖ ರಸ್ತೆಗಳಿಂದ ಹಾದು ಘೋಷಣೆಗಳನ್ನು ಕೂಗುತ್ತಾ ಏಮ್ಸ್ ಹೋರಾಟ ಸಮಿತಿಯ ವೇದಿಕೆಯಲ್ಲಿ ಸಮಾವೇಶಗೊಳ್ಳಲಾಯಿತು. ವೇದಿಕೆಗೆ ಆಗಮಿಸಿದ ಸಂಸದ ಜಿ. ಕುಮಾರ್ ನಾಯಕ್ ರವರು ಮಾತನಾಡುತ್ತಾ ರಾಯಚೂರು ಜಿಲ್ಲೆ ಮಹತ್ವಕಾಂಕ್ಷಿ ಜಿಲ್ಲೆಯಾಗಿದ್ದು ಕೇಂದ್ರ ಸರ್ಕಾರ ಈ ಬಜೆಟ್ ನಲ್ಲಿ ರಾಯಚೂರಿಗೆ ಘೋಷಿಸಬೇಕಾಗಿತ್ತು. ಆದರೆ ನಮ್ಮಲ್ಲಿರುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸಾಧ್ಯವಾಗುತ್ತಿಲ್ಲ ಆದರೂ ಛಲ ಬಿಡದೆ ಏಮ್ಸ್ ಹೋರಾಟ ಸಮಿತಿ ನಿರಂತರವಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಇನ್ನು ಮುಂದಾದರು ಸರ್ವ ಪಕ್ಷದ ಸಂಸದರು ಪ್ರಧಾನಮಂತ್ರಿಯವರಲ್ಲಿಗ ನಿಯೋಗ ತೆರಳಿ ರಾಯಚೂರಿಗೆ ಏಮ್ಸ್ ನೀಡುವ ಬಗ್ಗೆ ಒತ್ತಡ ತರಬೇಕು, ಅದರ ಜೊತೆಯಲ್ಲಿಯೇ ಏಮ್ಸ್ ಹೋರಾಟ ನಿರಂತರವಾಗಿ ನಡೆಯಬೇಕು ಇದಕ್ಕೆಲ್ಲ ನಾವು ಸದಾ ಬೆಂಬಲವಾಗಿದ್ದೇವೆ "ಎಂದು ಹೇಳಿದರು. ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್ ರವರು ಮಾತನಾಡುತ್ತ ಸಾವಿರ ದಿನಗಳ ಹೋರಾಟ ನಿಜವಾಗಲೂ ಚಾರಿತ್ರಿಕವಾದದ್ದು, ಈ ಹೋರಾಟಕ್ಕೆ ನಮ್ಮ ಪಕ್ಷದ ನನ್ನ ಸಂಪೂರ್ಣ ಬೆಂಬಲವಿದೆ ನಾವು ಆದಷ್ಟು ಶೀಘ್ರದಲ್ಲಿ ನಮ್ಮ ಪಕ್ಷದ ವತಿಯಿಂದ ಪ್ರತ್ಯೇಕವಾಗಿ ಕೇಂದ್ರ ಸರ್ಕಾರಕ್ಕೆ ನಿಯೋಗ ತೆರಳಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸುವ ಬಗ್ಗೆ ಕಾರ್ಯ ತತ್ಪರಾಗುತ್ತೇವೆ "ಎಂದು ಹೇಳಿದರು. ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜರವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಮೇಲೆ ಹಿಂದುಳಿದ ಮಹತ್ವಕಾಂಕ್ಷಿ ಜಿಲ್ಲೆಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪದೇಪದೇ ಶಿಫಾರಸ್ಸು ಪತ್ರಗಳನ್ನು ಕಳುಹಿಸಿ ಮನವಿ ಮಾಡಿಕೊಳ್ಳುತ್ತಾ ಬಂದಿದ್ದಾರೆ , ಆದರೆ ಕೇಂದ್ರ ಸರ್ಕಾರ ಇನ್ನು ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಸರ್ವ ಪಕ್ಷದವರು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಮಾತ್ರ ರಾಯಚೂರಿಗೆ ಏಮ್ಸ್ ಬರಲು ಸಾಧ್ಯ, ಈ ಚಾರಿತ್ರಿಕವಾದ ಹೋರಾಟದ ಬಗ್ಗೆ ನಮಗೆಲ್ಲ ಗೌರವ ಅಭಿಮಾನವಿದೆ ಏಮ್ಸ್ ಸ್ಥಾಪನೆ ಆಗುವರೆಗೂ ಈ ಹೋರಾಟ ಹೀಗೆ ಮುಂದುವರೆಯಲಿ ,ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ," ಎಂದು ಹೇಳಿದರು. ಕಲ್ಬುರ್ಗಿಯ ಶರಣಬಸಪ್ಪ ಅಪ್ಪ ಸಂಸ್ಥಾನದ ಆಡಳಿತ ಅಧಿಕಾರಿ ಬಸವರಾಜ್ ದೇಶಮುಖ್ ರವರು ಏಮ್ಸ್ ಹೋರಾಟಕ್ಕೆ ಬೆಂಬಲಿಸಿ ಮಾತನಾಡುತ್ತಾ," ಕಲ್ಯಾಣ ಕರ್ನಾಟಕದ ಇತಿಹಾಸದಲ್ಲಿಯೇ ಬಹು ಸುಧೀರ್ಘವಾದದ್ದು ಈ ಏಮ್ಸ್ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ,ಆದಷ್ಟು ಶೀಘ್ರದಲ್ಲಿ ಕೇಂದ್ರ ಸರ್ಕಾರ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲೇಬೇಕು ಇದರಿಂದ ಹಿಂದುಳಿದ ರೋಗಪೀಡಿತ ಇಡೀ ಕಲ್ಯಾಣ ಕರ್ನಾಟಕದ ಪ್ರದೇಶಕ್ಕೆ ಆರೋಗ್ಯದ ಸೇವೆಯಲ್ಲಿ ಬಹುದೊಡ್ಡ ಪ್ರಯೋಜನವಾಗಲಿದೆ "ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಏಮ್ಸ್ ಹೋರಾಟ ಸಮಿತಿಯ ಅಧ್ಯಕ್ಷ ಡಾ ಲಕ್ಷ್ಮಣ್ ದಸ್ತಿಯವರು ಮಾತನಾಡುತ್ತಾ , ಏಮ್ಸ್ ಸಮಸ್ಯೆ ಇದು ಕೇವಲ ರಾಯಚೂರಿನ ಸಮಸ್ಯೆಯಲ್ಲ ಇಂದು ಇಡೀ ಕಲ್ಯಾಣ ಕರ್ನಾಟಕದ ಪ್ರದೇಶದ ಸಮಸ್ಯೆಯಾಗಿದೆ, ಹೀಗಾಗಿ ನಾವೆಲ್ಲ ಒಂದಾಗಿದ್ದೇವೆ, ಇನ್ನು ಮುಂದೆ ನಮ್ಮ ಮೇಲೆ ಮೊದಲಿನಂತೆ ರಾಜಕೀಯ ದಬ್ಬಾಳಿಕೆಯನ್ನು ಸಹಿಸುವುದಿಲ್ಲ, ಇನ್ನು ಮುಂದಾದರು ಕೇಂದ್ರ ಸರ್ಕಾರ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವುದರ ಮೂಲಕ ಪ್ರಾದೇಶಿಕ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಗಂಭೀರವಾದ ಹೆಜ್ಜೆಯನ್ನು ಇಡಬೇಕು" ಎಂದು ಕರೆ ನೀಡಿದರು. ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ಚಿಂತಕರಾದ ಪ್ರೊಫೆಸರ್ ಆರ್. ಕೆ .ಹುಡುಗಿ ಮಾತನಾಡುತ್ತಾ, ಸಾವಿರ ದಿನಗಳ ಶಾಂತ ರೀತಿಯ ಹೋರಾಟ ಚಾರಿತ್ರಿಕವಾದದ್ದು ,ಇನ್ನು ಮುಂದೆ ಗಂಭೀರವಾದ ಅಮರನಾಂತರ ಉಪವಾಸ ಸತ್ಯಾಗ್ರಹವನ್ನು ಮಾಡುವುದರ ಮೂಲಕ ಈ ಜನಪ್ರತಿನಿಧಿಗಳನ್ನು ಜಾಗೃತಗೊಳಿಸಬೇಕಾದ ಅಗತ್ಯತೆ ಇದೆ, ಖಂಡಿತವಾಗಲೂ ಏಮ್ಸ್ ಅನ್ನು ಪಡೆದೆ ಪಡೆಯುತ್ತೇವೆ" ಎಂದು ಹೇಳಿದರು. ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಬಳ್ಳಾರಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪನ್ನಾ ರಾಜ್ ಬೀದರ್ ಕಾರಂಜಾ ಸಂತ್ರಸ್ತ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ನ್ಯಾಯವಾದಿಗಳ ಸಂಘದ ಹಿರಿಯ ನ್ಯಾಯವಾದಿ ಜೈ ನೀಲಕಂಠರಾವ್ ಮುಂತಾದವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಬೀದರ್ ಜಿಲ್ಲಾ ಮುಖಂಡರಾದ ವಿನಯ್ ಕುಮಾರ್ ಮಾಳ್ಗಿ ರೋಹನ್ ಕುಮಾರ್ ಯಾದಗಿರಿ ಜಿಲ್ಲಾ ಮುಖಂಡ ರಾಧಾ ವೈಜನಾಥ್ ಪಾಟೀಲ್ ಮುಂತಾದವರು ಭಾಗವಹಿಸಿದ್ದರು .ಅಶೋಕ್ ಕುಮಾರ್ ಜೈನ್ ಸ್ವಾಗತ ಭಾಷಣ ಮಾಡಿದರು. ಡಾ .ಬಸವರಾಜ ಕಳಸ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಯಚೂರು ನಗರದ ವಿವಿಧ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಯುವಕರು ಮಹಿಳೆಯರು ರೈತರು ಆಗಮಿಸಿದ್ದರು. ವೇದಿಕೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಕಾಂಗ್ರೆಸ್ ಮುಖಂಡ ರಾಜಶೇಖರ್ ನಾಯಕ್ ಡಾ. ಮಹಲಿಂಗ ರವೀಂದ್ರ ಜಾಲದಾರ್ ಕಾಂಗ್ರೆಸ್ ಪಕ್ಷದ ಕೆ ಶಾಂತಪ್ಪ ಜಯಣ್ಣ ರುದ್ರಪ್ಪ ಅಂಗಡಿ ನರಸಿಂಹಲು ಮಾಡಿಗೇರಿ, ಯೂಸುಫ್ ಖಾನ್ ಜಾತ್ಯತೀತ ಜನತಾ ದಳ ಪಕ್ಷದ ಜಿಲ್ಲಾಧ್ಯಕ್ಷ ವಿರುಪಾಕ್ಷಿ ಎಸ್ ಕೆ ಇ ಎಸ್ ಪ್ಯಾರಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಬಾಬುರಾಯ ಶಾಹಿನ್ ಕಾಲೇಜಿನ ಪ್ರಾಚಾರ್ಯ ಆದಿಲ್ ವೇದಾಂತ ಕಾಲೇಜಿನ ಪ್ರಾಚಾರ್ಯ ರಾಕೇಶ್ ರಾಜಲಬಂಡಿ ವಿವಿಧ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು ಮಹಿಳೆಯರಾದ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ,ಅಂಬಮ್ಮ ಕೆ. ಸುಗಮ್ಮ ಮತ್ತು ಏಮ್ಸ್ ಹೋರಾಟ ಸಮಿತಿಯ ತಿಮಾರೆಡ್ಡಿ ,ಎಸ್. ಮಾರಪ್ಪ ವಕೀಲರು, ನರಸಪ್ಪ ಬಾಡಿಯಲ ,ರಮೇಶ್ ರಾವ್ ಕಲ್ಲೂರುಕರ್, ಶ್ರೀನಿವಾಸ್ ನಾಗಲದಿನ್ನಿ, ಡಾ.ಜಗದೀಶ್ ಪೂರತಿಪ್ಪಲೆ, ಅಮರೇಗೌಡ ಪಾಟೀಲ್ ,ವೆಂಕಟರೆಡ್ಡಿದ್ದಿನಿ, ಸಂತೋಷ್ ಕುಮಾರ್ ಮಿರ್ಜಾಪುರ್, ಆನಂದ್ ಮಿರ್ಜಾಪುರ್ , ಕಾಮರಾಜ ಪಾಟೀಲ್, ಶಾಂತಗೌಡ ಸುಬೇದಾರ್ ವೆಂಕಟಯ್ಯಶೆಟ್ಟಿ ಹೊಸಪೇಟೆ ,ಆರಿಫ್ ಮಿಯಾ ನೆಲಹಾಳ, ಸಾಧಿಕ್ ಖಾನ್, ಬಸವರಾಜ್ ಮಿಮಿಕ್ರಿ, ನಾಸೀರ್ ಹೊಸೂರ್ , ಜಿಲನಿಪಾಷ, ಅಜೀಜ್, ತರಕಾರಿ ಮಾರುಕಟ್ಟೆ ಸಂಘದ ಎನ್. ಮಹಾವೀರ್, ಪ್ರಭು ನಾಯಕ್, ಉದಯಕುಮಾರ್, ಬಸವರಾಜ್, ಅನಿಲ್, ವೀರೇಶ್, ಖಾಜಪ್ಪ, ತಿಮ್ಮಾರೆಡ್ಡಿ, ಸಚಿತ್ ಮೊಹಮ್ಮದ್ ಇಸಾಕ್ ಜೈ ಭೀಮ್ ಶ್ರೀನಿವಾಸ್ ಕಡಗಂದೊಡ್ಡಿ ಗುರುರಾಜ್ ಕುಲಕರ್ಣಿ, ವೀರೇಶ್ ಬಾಬು, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ಅನ್ವರ್ ಅಲಿ ಖಾನ್,ಇಪಿಎಸ್ ಹೋರಾಟ ಸಮಿತಿಯ ವೀರಭದ್ರಪ್ಪ ಅಂಬರಪೇಟೆ ಅವರ ನೇತೃತ್ವದಲ್ಲಿ ಅನೇಕ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಪರವಾಗಿ ಸಹಾಯಕ ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಲಾಯಿತು.
What's Your Reaction?






