ಮಸ್ಕಿ ತಹಶಿಲ್ದಾರರ ಕಚೇರಿಯಲ್ಲಿ ಬದಲಾವಣೆ ಗಾಳಿ ಬಿಸಿದ್ದಾ ಡಾ. ಮಲ್ಲಪ್ಪ ಕೆ ಯರಗೋಳ ವರ್ಗಾವಣೆ

ಈ ಹಿಂದೆ ಮಸ್ಕಿ ತಹಸಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ ಡಾ ಮಲ್ಲಪ್ಪ ಕೆ ಯರಗೋಳ ಇವರನ್ನು ಕಂದಾಯ ಅಧಿಕಾರಿ, ಮಹಾನಗರ ಪಾಲಿಕೆ, ರಾಯಚೂರು ಗೆ ವರ್ಗಾಯಿಸಲಾಗಿದ್ದು. ಈ ಹಿಂದೆ ಹೊಸಪೇಟೆ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಹಾಯಕ ನಿರ್ದೇಶಕರು, ಓಂ, ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸಿದ ಮಂಜುನಾಥ, ಇವರನ್ನು ಮಸ್ಕಿ ತಾಲೂಕು ದಂಡಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಸರಕಾರದ ಅಧೀನ ಕಾರ್ಯದರ್ಶಿ (ಪ್ರ), ಕಂದಾಯ ಇಲಾಖೆಯ ರಾಘವೇಂದ್ರ.ಟಿ ಇವರು ಆದೇಶ ಹೊರಡಿಸಿದ್ದಾರೆ.

Sep 9, 2025 - 07:52
 0  101
ಮಸ್ಕಿ ತಹಶಿಲ್ದಾರರ ಕಚೇರಿಯಲ್ಲಿ ಬದಲಾವಣೆ ಗಾಳಿ ಬಿಸಿದ್ದಾ ಡಾ. ಮಲ್ಲಪ್ಪ ಕೆ ಯರಗೋಳ ವರ್ಗಾವಣೆ
ತಹಶೀಲ್ದಾರ್ ವರ್ಗಾವಣೆ ಸಾರ್ವಜನಿಕರಲ್ಲಿ ಬೇಸರ

ಮಸ್ಕಿ: ತಾಲೂಕಿನ ದಂಡಾಧಿಕಾರಿಯಾಗಿ ತಹಸೀಲ್ದಾ‌ರ್ ಡಾ.ಮಲ್ಲಪ್ಪ ಕೆ ಯರಗೋಳ ಅವರು ಕಳೆದ 1 ವರ್ಷ 1 ತಿಂಗಳುಗಳ ಕಾಲ ಮಸ್ಕಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ್ದು. ಅವಧಿಗೂ ಮುನ್ನವೇ ಸರ್ಕಾರ ವರ್ಗಾವಣೆ ಮಾಡಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ತಾಲೂಕಿನಾದ್ಯಂತ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ಸಾರ್ವಜನಿಕರೊಂದಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಿದ್ದು, ತಾಲ್ಲೂಕಿಗೆ ತಹಶೀಲ್ದಾರ್ ಆಗಿ ಬಂದ ನಂತರ ಉತ್ತಮ ಆಡಳಿತ ನೀಡಿದ್ದಾರೆ. ಬಡವರ, ರೈತರ ಹಲವು ಸಮಸ್ಯೆ ಬಗೆಹರಿಸಿ ಉತ್ತಮ ಆಡಳಿತಗಾರಾಗಿದ್ದರು. ನೂತನ ತಾಲೂಕಾಗಿ ಯಾವುದೇ ಅಭಿವೃದ್ಧಿ ಹೊಂದದೆ ಇರುವಂತ ಸಮಯದಲ್ಲಿ, ಪಟ್ಟಣದಲ್ಲಿ ಕಚೇರಿ ಗಳಲ್ಲದೆ ಮೂರು ತಾಲೂಕುಗಳಿಗೆ ದಿನನಿತ್ಯ ಅಲೆದಾಟ ಇರುವಂತಹ ಪರಿಸ್ಥಿತಿ ನಿರ್ಮಾಣವಾದಂತ ಸಂದರ್ಭದಲ್ಲಿ ಮಲ್ಲಪ್ಪ ಯರಗೋಳ ಬಂದ ನಂತರ ತಾಲ್ಲೂಕಿನಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ್ದರು ಹಾಗೂ ಪಟ್ಟಣದಲ್ಲಿ ಅನೇಕ ಕಚೇರಿಗಳು ಇಲ್ಲದೆ ಪರದಾಡುವ ಪರಿಸ್ಥಿತಿ ಇದ್ದಾಗ ಸರ್ಕಾರಿ ಸೂಕ್ತ ಸ್ಥಳವನ್ನು ಹುಡುಕಿ, ತಾಲೂಕು ಪಂಚಾಯಿತಿ, ಪ್ರಜಾಸೌಧ, ಕ್ರೀಡಾಂಗಣ, ಆಸ್ಪತ್ರೆಯ ಭೂಸ್ವಾಧೀನದ ವಿಷಯವಾಗಿ, ಬಿಸಿಎಂ ವಸತಿ ನಿಲಯ, ಇನ್ನಿತರ ಕಚೇರಿಗಳ ಪ್ರಾರಂಭಿಸಲು ಹಗಲು-ರಾತ್ರಿ ಎನ್ನದೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಸಾರ್ವಜನಿಕರಿಗೆ ಎಲ್ಲಾ ಕಚೇರಿಯ ಕಟ್ಟಡ ಪ್ರಾರಂಭ ಮಾಡಲು ಪಣತೊಟ್ಟಿದ್ದರು. ತಾಲೂಕಿನ ಕಂದಾಯ ಇಲಾಖೆಯ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು ಕಂಡಂತಹ ವ್ಯಕ್ತಿಯಾಗಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣರಾಗಿದ್ದರು. ಆದರೆ ದಕ್ಷ ಅಧಿಕಾರಿ ತಹಸೀಲ್ದಾ‌ರ್ ಡಾ. ಮಲ್ಲಪ್ಪ ಕೆ ಯರಗೋಳ ಅವರನ್ನು ರಾಜಕೀಯ ಹುನ್ನಾರು ನಿಂದ ಬೇರೆ ಕಡೆ ವರ್ಗಾಯಿಸಲಾಗಿದೆ ಎಂದು ಸಾರ್ವಜನಿಕರಲ್ಲಿ ಒಂದೆಡೆ ಅನುಮಾನ ಮೂಡಿದ್ದು. ಒಂದೆಡೆ ಆಕ್ರೋಶಕ್ಕೆ ಕಾರಣವಾಗಿದೆ.

What's Your Reaction?

like

dislike

love

funny

angry

sad

wow