ಅಕ್ಷಾಂಬರ ಸಹಕಾರಿ ಸಂಘದ ಸಮಾಜ ಸೇವೆ ಶ್ಲಾಘನೀಯ: ಹಿರಿಯ ಪತ್ರಕರ್ತ ವೀರೇಶ್ ಸೌದ್ರಿ
ಮಸ್ಕಿ: ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ, ಪತ್ರಕರ್ತರು ಹೀಗೆ ಮೂರು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಆರೋಗ್ಯ ತಪಾಸಣೆ ಮಾಡಿಸುತ್ತಿರುವ ಆಕ್ಷಾಂಬರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ ಎಂದು ಹಿರಿಯ ಪತ್ರಕರ್ತ ಸಂಘದ ತಾಲೂಕು ಘಟಕದ ಅಧ್ಯಕ್ಷ ವೀರೇಶ ಸೌದ್ರಿ ಹೇಳಿದರು.
ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಆಕ್ಷಾಂಬರ ಪತ್ತಿನ ಸಹಕಾರಿ ಸಂಘದ ದಶಮಾನೋತ್ಸವ ನಿಮಿತ್ತ ಸೋಮವಾರ ನಡೆದ ಆರೋಗ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ರಕ್ಷಣೆ ಮಾಡುವುದಕ್ಕೆ ಪೌರ ಕಾರ್ಮಿಕರು ಪಟ್ಟಣ ಸ್ವಚ್ಛತೆ ಮಾಡುತ್ತಾರೆ. ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡುತ್ತಾರೆ. ದಿನನಿತ್ಯ ನಡೆಯುವ ಘಟನೆಗಳನ್ನು ಪತ್ರಿಕೆ ಮೂಲಕ ಪತ್ರಕರ್ತರು ತಿಳಿಸುತ್ತಾರೆ. ಸಮಾಜದಲ್ಲಿ ಈ ಮೂರು ಕ್ಷೇತ್ರ ಬಹಳ ಪ್ರಾಮುಖ್ಯತೆ ಹೊಂದಿದೆ. ಇವರನ್ನು ಗುರುತಿಸಿ ಆರೋಗ್ಯ ತಪಾಸಣೆ ಮಾಡಿ, ಕಿರು ಕಾಣಿಕೆ ನೀಡುತ್ತಿರುವುದು ಬಹಳ ಖುಷಿಯ ಸಂಗತಿಯಾಗಿದೆ ಎಂದು ಹೇಳಿದರು. ಆಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಚಿಕ್ಕದು ಇದ್ದರು ಸಹ ಪ್ರತಿವರ್ಷ ಒಂದಿಲ್ಲೊಂದು ಸಮಾಜಮುಖಿ ಕೆಲಸ ಮಾಡುತ್ತ
ಬಂದಿದೆ. ಸಸಿ ನೆಡುವುದು ಪತ್ರಿಕೆ ಹಂಚುವ ಹುಡಗರಿಗೆ ಶೇಟರ್ ವಿತರಣೆ ಸೇರಿದಂತೆ ಅನೇಕ ಚಟುವಟಿಕೆಗಳ ಮೂಲಕ ಸಮಾಜ ಸೇವೆ ಮಾಡುತ್ತ ಬಂದಿದೆ. ಈ ಸಹಕಾರಿ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹೇಳಿದರು.
ಪಟ್ಟಣದ ಪುರಸಭೆ ಪೌರ ಕಾರ್ಮಿಕರಿಗೆ, ಪೊಲೀಸ್ ಸಿಬ್ಬಂದಿ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಆಕ್ಷಾಂಬರ ಸಹಕಾರಿ ಸಂಘದ ಅಧ್ಯಕ್ಷ ಸೂಗಣ್ಣ ಬಾಳೆಕಾಯಿ, ಖ್ಯಾತ ವೈದ್ಯ ವಿನೋದ ಅಂಗಡಿ, ವೈದ್ಯೆ ವಿಜಯತ್ರಿ, ನಿವೃತ್ತ ವೈದ್ಯ ನಾಗರಾಜ ಚೌಕಟ್ಟಿ ಪೊಲೀಸ್ ಪೇದೆ ಸಿದ್ದಾರೆಡ್ಡಿ ಪುರಸಭೆ ಆರೋಗ್ಯಾಧಿಕಾರಿ ನಾಗರಾಜ್ ಸಂಸ್ಥೆಯ ಅನೇಕರು ಉಪಸ್ಥಿತರಿದ್ದರು.
What's Your Reaction?






