ಸಾಲದ ಸುಳಿಗೆ ರೈತ ಆತ್ಮಹತ್ಯೆ, ಕುಟುಂಬಸ್ಥರ ಅಳಲು

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕು ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಗುಡಿಹಾಳ ಗ್ರಾಮದ ಶರಣಪ್ಪಗೌಡ ಪೊಲಿಸ್ ಪಾಟೀಲ್ ಎಂಬುವವರು ಸಾಲದಬಾದೆ ತಾಳಲಾರದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ .

Aug 24, 2025 - 17:57
Aug 24, 2025 - 18:17
 0  46

ಭಾರತ ದೇಶವು ಕೃಷಿ ಪ್ರಧಾನ ದೇಶ,ಬಹುತೇಕ   ಕುಟುಂಬಗಳು ವ್ಯವಸಾಯವನ್ನು ಮಾಡುತ್ತಾ  ಬದುಕತ್ತವೆ,ಇಂದು  ರೈತ ಬೆಳದ ಬೆಳಗೆ ಬೆಲೆ ಇಲ್ಲ, ಬೆಲೆ ಇದ್ದರೆ ಉತ್ತಮ ಬೆಳೆ ಇಲ್ಲ,ಬೆಲೆ ಮತ್ತು ಬೆಳೆ ಎರಡು ಇದ್ದರೂ ಉತ್ತಮ ಮಳೆ ಇಲ್ಲ . ಇದು ರೈತರ ನಿತ್ಯ ಜೀವನದ ದುಸ್ತರ ಬದುಕು, ಇಂತಹದರಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕು ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಗುಡಿಹಾಳ ಗ್ರಾಮದ ಶರಣಪ್ಪಗೌಡ ಪೊಲಿಸ್ ಪಾಟೀಲ್ ಎಂಬುವವರು ಸಾಲದಬಾದೆ ತಾಳಲಾರದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ .ಇದರಿಂದ ಕುಟುಂಬ ತೀವ್ರ ನೋವಿನಲ್ಲಿ ಮುಳಗಿದೆ, ಮೃತರಿಗೆ ಪತ್ನಿ ತಿಪ್ಪಮ್ಮ, ಐದು ಜನ ಹೆಣ್ಣುಮಕ್ಕಳನ್ನು ಹೊಂದಿರುವ ತುಂಬಿದ ಸಂಸಾರ ಕುಟುಂಬಕ್ಕೆ ಶರಣಪ್ಪಗೌಡರು ಆಧಾರ ಸ್ತಂಭವಾಗಿದ್ದರು, ಇವರ ಆರು ಎಕರೆ ಹೊರಭೂಮಿ ಇದ್ದು, ಮೂರು ರಿಂದ ನಾಲ್ಕು ಲಕ್ಷ ರೂಪಾಯಿ  ಸಾಲವನ್ನು ಎಸ್ ಬಿ ಐ ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳಿಂದ ಪಡೆದಿದ್ದು, ಸಾಲ ಸಕಾಲಕ್ಕೆ ಮರುಪಾವತಿ ಮಾಡಿಲ್ಲ, ಕಾರಣ ಸರಿಯಾದ ಬೆಳೆ,ಬೆಲೆ ಮತ್ತು ಮಳೆ   ಇಲ್ಲದ ಕಾರಣ ಸಾಲ ಕಟ್ಟಲು ಆಗದ ಕಾರಣ ಸಾಲಗಾರರ ಕಿರುಕುಳಕ್ಕೆ ಮನನೊಂದ ಶರಣಪ್ಪಗೌಡ ಪೊ.ಪಾ ಆತ್ಮಹತ್ಯೆಗೆ ಜೀವಕಳಕೊಂಡಿದ್ದಾರೆ,ಈ ಒಂದು ಪ್ರಕರಣ ಕವಿತಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಅದಕ್ಕೆ ಬ್ಯಾಂಕ್ ನಲ್ಲಿ ಹೊಲ ಹೊತ್ತಿ ಮಾಡಲಾಗಿದೆ ದಯವಿಟ್ಟು ನಮ್ಮ ಕಷ್ಟವನ್ನು ಅರ್ಥಮಾಡಿಕೊಂಡು ಸಹಾಯ ಮತ್ತು ಹೊಲವನ್ನು ನಮಗೆ ಬ್ಯಾಂಕಿನಿಂದ ಬಿಡಿಸಿ ಮುಂದಿನ ನಮ್ಮ ಜೀವನಕ್ಕೆ ಸಹಾಯ ಮಾಡಬೇಕು ಎಂದು ಪತ್ನಿ ತಿಪ್ಪಮ್ಮ ವಿನಂತಿಸಿದ್ದಾರೆ.

What's Your Reaction?

like

dislike

love

funny

angry

sad

wow