ಹೊಸ ಎಸ್‌ಪಿ ಅರುಣಾಂಶು ಗಿರಿ ರಾಯಚೂರು ಜಿಲ್ಲೆಗೆ ವರ್ಗ

ರಾಯಚೂರು: ಜ -2 ಸಿಐಡಿ ಎಸ್‌ಪಿ ಅರುಣಾಂಶು ಗಿರಿ ಅವರು ರಾಯಚೂರಿನ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಸಿಐಡಿ ಎಸ್‌ಪಿ ಹುದ್ದೆಯಿಂದ ಅವರಿಗೆ ರಾಯಚೂರಿಗೆ ವರ್ಗವಾಗಿದೆ. 2015ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಇವರು ಹಿಂದೆ ಮಂಗಳೂರು ನಗರದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ಕಾರ್ಯನಿರ್ವಹಿಸಿದ್ದಾರೆ. ಬಿಇ, ಎಂಬಿಎ ಪದವೀಧರರಾಗಿರುವ ಅರುಣಾಂಶು ಗಿರಿ ಪಶ್ಚಿಮ ಬಂಗಾಳ ಮೂಲದವರು. ಹಿಂದೆ ಮಂಗಳೂರು ನಗರದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ), ಕೊಪ್ಪಳದ ಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದಾರೆ.

Jan 3, 2026 - 06:07
 0  34
ಹೊಸ ಎಸ್‌ಪಿ ಅರುಣಾಂಶು ಗಿರಿ ರಾಯಚೂರು ಜಿಲ್ಲೆಗೆ ವರ್ಗ

ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಎಂ.ಪುಟ್ಟಮಾದಯ್ಯ ಅವರಿಗೆ ಕಲಬುರಗಿಯ ಪಿಟಿಸಿ ಪ್ರಾಂಶುಪಾಲ ಡಿಐಜಿಪಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.

ಬೀಳ್ಕೊಡುಗೆ: ಮುಂಬಡ್ತಿ ಹೊಂದಿರುವ 

ಎಂ.ಪುಟ್ಟಮಾದಯ್ಯ ಅವರಿಗೆ ಜಿಲ್ಲಾ ಪೊಲೀಸ್‌ ಮುಖ್ಯಾಲಯದಲ್ಲಿ ಗುರುವಾರ ಬೀಳ್ಕೊಡಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಹರಿಶ್ ಹಾಗೂ ಕುಮಾರ ಸ್ವಾಮಿ ಅವರು ಪುಟ್ಟ ಮಾದಯ್ಯ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಪೊಲೀಸ್ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿರಿದ್ದರು.

What's Your Reaction?

like

dislike

love

funny

angry

sad

wow