ಬಳ್ಳಾರಿ_ಎಸ್ಪಿ_ಪವನ್_ನೆಜ್ಜೂರ್ ಆತ್ಮಹತ್ಯೆ ಯತ್ನ?ನಿಜವಾಗಿಯೂ ನಡೆದಿದ್ದೇನು

ಒಂದೇ ದಿನದಲ್ಲಿ ಎಲ್ಲವೂ ತಲೆಕೆಳಗಾಯಿತು? ಕುರ್ಚಿಯಲ್ಲಿ ಬಂದು ಕುಳಿತುಕೊಂಡು ಸಾವರಿಸುವ ಹೊತ್ತಿನಲ್ಲಿ ಅಮಾನತು ಆದೇಶ ಬಂದರೆ ಇದಕ್ಕೆ ಅನ್ನೋದು ದುರದೃಷ್ಟ!

Jan 4, 2026 - 11:39
 0  21
ಬಳ್ಳಾರಿ_ಎಸ್ಪಿ_ಪವನ್_ನೆಜ್ಜೂರ್ ಆತ್ಮಹತ್ಯೆ ಯತ್ನ?ನಿಜವಾಗಿಯೂ ನಡೆದಿದ್ದೇನು
ಎಸ್‌ಪಿ ಪವನ್ ನೆಜ್ಜೂರ್

ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅವರ ಅಮಾನತು ಮತ್ತು ಆತ್ಮಹತ್ಯೆ ಯತ್ನದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಹರಡಿರುವ ವದಂತಿಗಳು ಮತ್ತು ವಾಸ್ತವದ ಸತ್ಯಾಂಶಗಳ ಸಮಗ್ರ ವರದಿ ಇಲ್ಲಿದೆ.

​ಕೇವಲ 24 ಗಂಟೆಗಳ ಅಂತರದಲ್ಲಿ ಅಧಿಕಾರ ಸ್ವೀಕಾರ ಮತ್ತು ಅಮಾನತು ನಡೆದಿದ್ದೇ ಈ ಎಲ್ಲಾ ಚರ್ಚೆಗಳಿಗೆ ಮೂಲ ಕಾರಣ.

​ಜನವರಿ 1: ಪವನ್ ನೆಜ್ಜೂರ್ ಅವರು ಶೋಭಾರಾಣಿ ಅವರಿಂದ ಬಳ್ಳಾರಿ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದರು.

​ಜನವರಿ 2: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಹರಿದು ಹಾಕಿದ ಗಲಾಟೆ ಪ್ರಕರಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಮತ್ತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದ ಆರೋಪದ ಮೇಲೆ ಸರ್ಕಾರ ಅವರನ್ನು ಅಮಾನತುಗೊಳಿಸಿತು.

​ಕಳೆದ ಐದು ವರ್ಷಗಳಿಂದ ನಾನು ಎಕ್ಸಿಕ್ಯೂಟಿವ್ ಹುದ್ದೆಯಲ್ಲಿದ್ದ ಪವನ್ ರಿಗೆ ಎಸ್ ಪಿ ಹುದ್ದೆ ದೊರೆತಿರುವ ಹಿನ್ನೆಲೆಯಲ್ಲಿ ಹೊಸ ವರ್ಷವಾಗಿರುವುದರಿಂದ ಗೆಳೆಯರಿಗೆ ಪಾರ್ಟಿ ಕೊಟ್ಟು ಸಾವರಿ ಸುವ ಅಷ್ಟರಲ್ಲಿ ಡಿಸಿಎಂ, ಸಿಎಂ ಕರೆಗೆ ಸರಿಯಾಗಿ ಸ್ಪಂದಿಸದೇ ಇದ್ದ ಪರಿಸ್ಥಿತಿಯಿಂದಾಗಿಯೇ ಹುದ್ದೆ ಕಳೆದುಕೊಳ್ಳುವಂತಾಯಿತು ಅನ್ನೋ ವಿಚಾರವೂ ಹರಿದಾಡುತ್ತಿದೆ. 

ಡಿಸಿಎಂ ಶಿವಕುಮಾರ್ ಮಾಧ್ಯಮದ ಮುಂದೆ ಹೇಳಿರುವ ಮಾತಿನಲ್ಲೇ ಎಸ್ ಪಿ ಯವರ ಆ ಹೊತ್ತಿನಲ್ಲಿ ಕರ್ತವ್ಯ ನಿಭಾಯಿಸದೆ ಇರುವ ಪರಿಸ್ಥಿತಿಯಲ್ಲಿ ಕಂಡುಬಂದಿದ್ದಾರೆ. .

 ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವದಂತಿಗಳೇನು?

​ಸಹಿ ಮಾಡಿರುವ ಅಮಾನತು ಆದೇಶದ ಪ್ರತಿ ವೈರಲ್ ಆಗುತ್ತಿದ್ದಂತೆಯೇ, "ಸರ್ಕಾರದ ಕ್ರಮದಿಂದ ಮನನೊಂದ ಎಸ್‌ಪಿ ಅವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂಬ ಸುದ್ದಿಗಳು ಫೇಸ್‌ಬುಕ್ ಮತ್ತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದವು.

ನಿಜವಾಗಿಯೂ ನಡೆದಿದ್ದೇನು? 

​ಈ ವದಂತಿಗಳಿಗೆ ಅವರ ಆಪ್ತರು ಮತ್ತು ಸಹೋದ್ಯೋಗಿಗಳು ತೆರೆ ಎಳೆದಿದ್ದಾರೆ:

​ಆರೋಗ್ಯದ ಸಮಸ್ಯೆ: ಬೆಂಗಳೂರು ಸಿಸಿಬಿ ಡಿಸಿಪಿ ಹಾಗೂ ಪವನ್ ಅವರ ಆಪ್ತ ಗೆಳೆಯ ಶ್ರೀಹರಿಬಾಬು ನೀಡಿರುವ ಮಾಹಿತಿ ಪ್ರಕಾರ, ಪವನ್ ಅವರಿಗೆ ಕೇವಲ ಆರೋಗ್ಯದಲ್ಲಿ ಏರುಪೇರಾಗಿತ್ತು, ಮಾತ್ರೆ ಸೇವಿಸಿದ್ದರು. 

 ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತೇ ಹೊರತು ಅದು ಆತ್ಮಹತ್ಯೆ ಯತ್ನವಲ್ಲ.

ಅವರು ಈಗ ತುಮಕೂರು ಜಿಲ್ಲೆಯ ಶಿರಾ ಬಳಿಯ ತಮ್ಮ ಫಾರ್ಮ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

​ಮಂಡ್ಯ ಎಸ್‌ಪಿ ಶೋಭಾರಾಣಿ ಅವರು ಸ್ವತಃ ಪವನ್ ಅವರೊಂದಿಗೆ ಮಾತನಾಡಿ, ಅವರು ಆರೋಗ್ಯವಾಗಿದ್ದಾರೆ ಮತ್ತು ಆತ್ಮಹತ್ಯೆ ಯತ್ನ ಮಾಡಿಲ್ಲ ಎಂದು ಖಚಿತಪಡಿಸಿದ್ದಾರೆ.

ಅಮಾನತಿಗೆ_ನಿಖರ_ಕಾರಣವೇನು?

​ಪೊಲೀಸ್ ಮೂಲಗಳ ಪ್ರಕಾರ, ಬಳ್ಳಾರಿಯಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲಿ ಎಸ್‌ಪಿ ಅವರು ಸ್ಥಳೀಯ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ ಮತ್ತು ಈ ಬಗ್ಗೆ ಬಳ್ಳಾರಿ ರೇಂಜ್ ಡಿಐಜಿ ಅವರಿಗೆ ಸಕಾಲದಲ್ಲಿ ವರದಿ ನೀಡಿರಲಿಲ್ಲ. ಇದನ್ನು 'ಕರ್ತವ್ಯ ಲೋಪ' ಎಂದು ಪರಿಗಣಿಸಿದ ಡಿಜಿ-ಐಜಿಪಿ ಅವರ ಶಿಫಾರಸಿನ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ.

What's Your Reaction?

like

dislike

love

funny

angry

sad

wow