ಅಂಬೇಡ್ಕರ್ ರಥಕ್ಕೆ ಶಾಸಕರೇ ಸಾರಥಿ.ಬಾಬೂಜಿಯ ಪಥಕ್ಕೆ ಯರಗೋಳರ ಅಭಿಮಾನದ ಆರತಿ.
ಮಸ್ಕಿ ತಾಲೂಕಾಡಳಿತದಿಂದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರ 118 ನೇ ಮತ್ತು ಸಂವಿಧಾನಶಿಲ್ಪಿ ಡಾ,ಬಿ,ಆರ್,ಅಂಬೇಡ್ಕರರ 134ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಸ್ಕಿಯ ಶಾಸಕ ಆರ್,ಬಸನಗೌಡ ತುರುವಿಹಾಳರು ಉಬಯ ಸಾಧಕರ ಭಾವಚಿತ್ರಗಳನ್ನು ಹೊತ್ತ ರಥಕ್ಕೆ ಚಾಲನೆ ನೀಡಿ ತಾವೇ ಸಾರಥಿಯಾಗಿ ಅನತಿ ದೂರ ಚಲಾಯಿಸಿಕೊಂಡು ಹೋದರು. ಇದು ಅಂಬೇಡ್ಕರರ ವಿಚಾರಗಳ ರಥಕ್ಕೆ ಭಾರತದ ಪ್ರಜೆಗಳೇ ಸಾರಥಿಗಳಾಗಿ ಮುಂದಕ್ಕೆ ಎಳೆದೊಯ್ಯಬೇಕೆಂಬ ಸಂದೇಶವನ್ನು ಸಾರುವಂತಿತ್ತು. ತಹಸಿಲ್ದಾರ್,ಮುಖ್ಯಾಧಿಕಾರಿ,ಪುರಸಭೆಯ ಅಧ್ಯಕ್ಷ,ಉಪಾಧ್ಯಕ್ಷರು,ಸದಸ್ಯರುಗಳು,ತಾಲೂಕ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಅಭಿಯಂತರರು,ಆರಕ್ಷಕರು,ಅತಿಥಿ ಅಭ್ಯಾಗತರನ್ನೊಳಗೊಂಡ ಮೆರವಣಿಗೆ ಮಸ್ಕಿಯ ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ಮುಖ್ಯ ಬೀದಿಗಳಲ್ಲಿ ಸಂಚರಿಸಿ ವಾಲ್ಮೀಕಿಭವನದಲ್ಲಿ ಆಯೋಜಿಸಲಾಗಿದ್ದ ವೇಧಿಕೆ ಕಾರ್ಯಕ್ರಮದ ಮುಖಾಂತರ ಮುಂದುವರೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ತಹಸಿಲ್ದಾರ್ ಡಾ,ಮಲ್ಲಪ್ಪ ಯರಗೋಳ್ ಅಂಬೇಡ್ಕರ್ ಮತ್ತು ಬಾಬೂಜಿ ನಮ್ಮ ಎರಡು ಕಣ್ಗಳ ಕಾಂತಿಯಿದ್ದಂತೆ,ಆ ದೃಷ್ಟಿ ಎಂಬ ಜ್ಯೋತಿಯಾರಿದರೆ ಲೋಕವೇ ಶೂನ್ಯವಾಗುತ್ತದೆ ಕಗ್ಗತ್ತಲಲ್ಲಿ ಬದುಕಬೇಕಾಗುತ್ತದೆ. ಅವರ ಸ್ವಾಭಿಮಾನದ ಬದುಕಿಗೆ ನಮ್ಮ ಅಭಿಮಾನದ ಅನುಸರಣೆಯೇ ಆರತಿಯಾಗಬೇಕು,ನಮ್ಮಿಂದಲೇ ಅವರ ಕೀರುತಿ ಪಸರಿಸಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರ,ಬಸನಗೌಡ ತುರುವಿಹಾಳ ಮಾತನಾಡಿ ಅವರ ಪರಿಶ್ರಮದ ಫಲವಾಗಿ ನಾವು ಶಾಸಕರು,ಸಂಸದರು,ಪಂಚಾಯ್ತಿಗಳ ಸದಸ್ಯರುಗಳು,ಐ,ಎ,ಎಸ್,ಕೆ,ಎ,ಎಸ್, ಐ,ಪಿ,ಎಸ್,ಲಾಯರ್,ಲೆಕ್ಚರರ್,ಶಿಕ್ಷಕರಾಗಿ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ.ಅವರ ಆಶಯಗಳನ್ನು ಈಡೇರಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಅಂಬೇಡ್ಕರರ ಜೀವನ ಸಾಧನೆಯ ಬಗ್ಗೆ ಉಪನ್ಯಾಸ ನೀಡಲು ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಮಸ್ಕಿಯ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ,ಮಹಾಂತಗೌಡ ಪಾಟೀಲ್,ಮತ್ತು ಬಾಬೂಜಿರವರ ಜೀವನದ ಯಶೋಘಾತೆಗಳ ಬಗ್ಗೆ ಉಪನ್ಯಾಸ ನೀಡಲು ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಂಪಾಪತಿ ಬಳಗಾನೂರು ಅರ್ಥಪೂರ್ಣವಾದ ಮಾಹಿತಿ ನೀಡಿದರು. ದಲಿತ ಕವಿ ಜನಕವಿ ಸಿ,ದಾನಪ್ಪ ನಿಲಗಲ,ಮಲ್ಲಯ್ಯ ಬಳ್ಳಾ,ಸುರೇಶ ಅಂತರಗಂಗಿ,ಹನುಮಂತಪ್ಪ ವೆಂಕಟಾಪೂರು,ಕಿರಣ್ ಮುರಾರಿ,ಹರ್ಷದ್,ಅಂಬೇಡ್ಕರ್ ಮತ್ತು ಬಾಬೂಜಿರವರ ಕುರಿತಾದ ಜಾಗೃತಿ ಹಾಡುಗಳನ್ನು ಹಾಡಿದರು. ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ತಾಲೂಕ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮಲ್ಲಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿದ ಇಲಾಖೆಗಳ ಅಭಿಯಂತರರು,ಅಧಿಕಾರಿಗಳು,ಆರಕ್ಷಕ ವೃತ್ತ ನಿರೀಕ್ಷಕ ಬಾಲಚಂದ್ರ ಡಿ ಲಕ್ಕಂ ಸೇರಿದಂತೆ ಮುಖಂಡರು ಅಂಬೇಡ್ಕರ್,ಬಾಬೂಜಿ ಅಭಿಮಾನಿಗಳು ಹೋರಾಟಗಾರರು ಇದ್ದರು. ಆರಕ್ಷಕರು ಸೂಕ್ತಭದ್ರತೆಯನ್ನೊದಗಿಸಿ ಮೆರವಣಿಗೆಯ ಯಶಸ್ವಿಗೆ ಸಹಕರಿಸಿದರು. ವರದಿ,,,ಸುರೇಶ ಬಳಗಾನೂರು.
What's Your Reaction?






