ಖಡ್ಗ,ಬಂದೂಕುಗಳನ್ನು ಹಿಡಿಯದೆ ಬದಲಾವಣೆಯನ್ನು ತಂದ ಕ್ರಾಂತಿಕಾರಿ ಕಲಿಯುಗದ ಬುದ್ದ ಡಾ,ಬಿ,ಆರ್,ಅಂಬೇಡ್ಕರ್.

ಡಾ,ಬಿ,ಆರ್,ಅಂಬೇಡ್ಕರರ ಬಗ್ಗೆ ಮಾತಿಗಿಳಿದಾಗ ಪ್ರತಿಯೊಬ್ಬರೂ ನಾನೂ ಅವರ ಅನುಯಾಯಿ ಎಂದು ಮಾತುಗಳನ್ನು ಆರಂಭಿಸುತ್ತಾರೆ.ಏಕೆಂದರೆ ಅವರು ಜಾತಿ,ದೇಶ,ಧರ್ಮಗಳನ್ನು ಮೀರಿ ಜನರನ್ನು ಆವರಿಸಿಕೊಂಡಿದ್ದಾರೆ. 2012 ರಲ್ಲಿ ಹಿಸ್ಟರಿ T,V,18 ಸೇರಿದಂತೆ ಕೆಲ ಖಾಸಗಿ ವಾಹಿನಿಗಳು great indian ಯಾರು ಎಂಬ ಪ್ರಶ್ನೆಯನ್ನು ಹಿಡಿದು ಸುಮಾರು ಎರಡು ಕೋಟಿ ಭಾರತೀಯರನ್ನು ಕೇಳಿದರೆ ಅದರಲ್ಲಿ ಜನ ಅಂಬೇಡ್ಕರ್ ಎಂದರು. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಅಂಬೇಡ್ಕರರ ಈ ಸ್ಥಾನಮಾನಕ್ಕೆ ಅವರ ಪರಿಶ್ರಮ,ಅಪರಿಮಿತವಾದ ಜ್ಞಾನ ಅಸಮಾನತೆ,ಜಾತಿಯತೆ,ತಾರತಮ್ಯ,ಶಿಕ್ಷಣದ ವಂಚನೆಯನ್ನು ತೊಡೆದು ಹಾಕಬೇಕೆಂಬ ಅಧಮ್ಯ ಹಂಬಲ ಅವರನ್ನು ಈ ಸ್ಥಾನಕ್ಕೇರಿಸಿದೆ. ಅವರಿಗೆ ಓದುವ ಹಂಬಲ ಎಷ್ಟಿತ್ತೆನ್ನುವುದಕ್ಕೆ ಅವರ ಖಾಸಗಿ ಗ್ರಂಥಾಲಯದಲ್ಲಿ 50,000. ಪುಸ್ತಕಗಳಿದ್ದವು ಎನ್ನುವುದೇ ಸಾಕ್ಷಿ. ಕೋಲಂಬಿಯಾ ವಿಶ್ವವಿದ್ಯಾಲಯದ ಪ್ರಪಂಚದ 100 ಜನ ವಿದ್ವಾಂಸರ ಪಟ್ಟಿಯಲ್ಲಿ ಅಂಬೇಡ್ಕರರ ಹೆಸರು ಮೊದಲ ಸ್ಥಾನಪಡೆದಿದೆ. 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಅವರಿಗೆ 9 ಭಾಷೆಗಳಲ್ಲಿ ಓದಲು,ಬರೆಯಲು,ಮಾತನಾಡಲು ಬರುತ್ತಿತ್ತೆಂದರೆ ಅವರ ಜ್ಞಾನಭಂಢಾರ ಎಂತಹದ್ದೆಂಬುದನ್ನು ಬೇರೆ ಹೇಳಬೇಕಿಲ್ಲ. ವಿಶ್ವದ ಎಲ್ಲಾ ಧರ್ಮಗಳ ಬಗ್ಗೆ ಅಧ್ಯಯನ ಮಾಡಿದ ಅಂಬೇಡ್ಕರರು ಮಹಾಂತವೀರಚಂದ್ರಮಣಿ ಎನ್ನುವ ಪ್ರಖ್ಯಾತ ಬೌದ್ದ ಸನ್ಯಾಸಿಯ ಪ್ರೇರಣೆಯಿಂದ ಬೌಧ್ದ ಧರ್ಮಕ್ಕೆ ಮತಾಂತರವಾದರು.ಈ ಬೌಧ್ದ ಸನ್ಯಾಸಿಗಳು ಅಂಬೇಡ್ಕರರನ್ನು ಕಲಿಯುಗದ ಬುದ್ದ ಎಂದು ಕರೆದರು. ಅಂಬೇಡ್ಕರರನ್ನೇ ಹಿಂಬಾಲಿಸಿದ ಸುಮಾರು ಎಂಟುಲಕ್ಷ ಐವತ್ತುಸಾವಿರ ಅನುಯಾಯಿಗಳು ಇವರ ಜೊತೆಗೆ ಬೌಧ್ದ ಧರ್ಮಕ್ಕೆ ಮತಾಂತರರಾದರೆಂದರೆ ಅವರ ಪ್ರಭಾವಳಿ,ಜನಪ್ರಿಯತೆ,ಎಷ್ಟಿತ್ತೆಂಬುದು ತಿಳಿಯುತ್ತದೆ. ಲಂಡನ್ ಸಂಗ್ರಹಾಲಯದಲ್ಲಿ ಅಂಬೇಡ್ಕರರ ಪ್ರತಿಮೆಯನ್ನು ಮಾರ್ಕ್ಸರ ಪ್ರತಿಮೆಯ ಜೊತೆಗೆ ಪ್ರತಿಷ್ಠಾಪಿಸಲಾಗಿದೆ. ಪ್ರಪಂಚದಲ್ಲಿ ಅತಿಹೆಚ್ಚು ಪ್ರತಿಮೆಗಳಿರುವುದು ಅಂಬೇಡ್ಕರರವರದ್ದೇ,ಪ್ರತಿಯೊಂದು ಕಾರ್ಯಾಲಯಗಳಲ್ಲೂ ಅವರ ಭಾವಚಿತ್ರಗಳಿವೆ. ದಿನಗಳು ಕಳೆದಂತೆ ಅವರು,ಅವರ ಹೆಸರು,ಅವರ ಚಿಂತನೆಗಳು ಪ್ರಭಾವಿಯಾಗುತ್ತಿವೆ. ಕಾಲ ಕಾಲದಿಂದ ಆಕ್ರಮಣ,ತಾರತಮ್ಯ,ಎಲ್ಲವನ್ನೂ ಕಂಡ ದೇಶ ಭಾರತ.ಈ ಜಾತಿಯತೆ,ತಾರತಮ್ಯ,ತೊಡೆದು ಹಾಕಲು ಬುದ್ದ,ಬಸವ,ಕನಕ ಮುಂತಾದ ಸುಧಾರಕರು ಬಂದರು ಆದರೆ ಈ ಸಮಾಜ ಅವರನ್ನೇ ಆ ಅನಿಷ್ಠಪದ್ದತಿಯಲ್ಲಿ ಬಂಧಿಸಿ ಅದೇ ಜಾತಿ,ಧರ್ಮದ ವ್ಯವಸ್ಥೆಗೆ ಸೀಮಿತಗೊಳಿಸಿತು. ಆದರೆ ಅಂಬೇಡ್ಕರರು ಬುದ್ದ,ಬಸವ,ಕನಕದಾಸ,ಮುಂತಾದ ಸಮಾನತೆಯನ್ನು ಸಾರಿದವರ ವಿಚಾರಗಳಿಗೆ,ತಮ್ಮ ಸಂವಿಧಾನವೆಂಬ ಕಾನೂನಾತ್ಮಕ ಚೌಕಟ್ಟನ್ನು ಹಾಕಿ ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು ಎನ್ನುವ ಸಂದೇಶವನ್ನು ಜಗದಗಲ ಪಸರಿಸಿದ ವಿಶ್ವಮಾನವ, ಖಡ್ಗ,ಬಂದೂಕುಗಳನ್ನು ಹಿಡಿಯದೆ ಬದಲಾವಣೆ ತಂದ ಕ್ರಾಂತಿಕಾರಿ ಡಾ,ಬಾಬಾ ಸಾಹೇಬ್ ಅಂಬೇಡ್ಕರರು. ಅಂಬೇಡ್ಕರರು ಪ್ರಕಾಂಡ ಪಂಡಿತರಾಗಿದ್ದರು.ಬಯಸಿದ್ದರೆ ವಿದೇಶದಲ್ಲೇ ಜೀವನ ಕಳೆಯಬಹುದಾಗಿತ್ತು.ಆದರೆ ಅದೆಲ್ಲವನ್ನೂ ಬಿಟ್ಟು ತನ್ನವರ,ತನ್ನ ದೇಶದ ಹಿತಕಾಯಲು ಭವ್ಯಭವಿತವ್ಯದ ದಿಕ್ಸೂಚಿಯಾಗಲು ಭಾರತದಲ್ಲಿಯೇ ಬದುಕಿ ಹಗಲಿರುಳು ಶ್ರಮವಹಿಸಿ ಭಾರತಕ್ಕೊಂದು ಭದ್ರತೆಯನ್ನು ನೀಡಿ ಸೂರ್ಯಚಂದ್ರಾರ್ಕವಾಗಿ ಅಜರಾಮರರಾದರು. ಪರಕೀಯರ ಆಕ್ರಮಣದಿಂದ ಬಂದಿಯಾಗಿದ್ದ ಭಾರತವನ್ನು ಸ್ವತಂತ್ರಗೊಳಿಸಲು ಗಾಂಧೀಜಿ ಶಾಂತಿ,ಅಹಿಂಸೆ,ಸತ್ಯಾಗ್ರಹಗಳೆಂಬ ತಂತ್ರಗಳನ್ನು ಹಿಡಿದು ಚಳುವಳಿ ಮಾಡಿದರೆ, ಅಂಬೇಡ್ಕರರು ಸತ್ತುಹೋಗಿದ್ದ ಸಮಾನತೆ,ತಾಂಡವವಾಡುತ್ತಿದ್ದ ಜಾತಿಯತೆ,ಕಂದಾಚಾರ,ಶಿಕ್ಷಣದ ವಂಚನೆಯಿಂದ ಜನರನ್ನು ಪಾರುಮಾಡಲು ಶಿಕ್ಷಣ,ಸಂಘಟನೆ,ಹೋರಾಟಗಳೆಂಬ ಮಂತ್ರಬೀಜಾಕ್ಷರಗಳನ್ನು ಹಿಡಿದು ದೇಶದೊಳಗಿನ ಸ್ವಾತಂತ್ರ್ಯ ಸಮಾನತೆಗಾಗಿ ಹೋರಾಡಿದರು. ಪ್ರಜೆಗಳು ಗೌರವದಿಂದ ಬದುಕಲು ಯಾರೂ ಅಡ್ಡಿಪಡಿಸಬಾರದು,ಸರ್ವಧರ್ಮೀಯರೂ ಸ್ವತಂತ್ರವಾಗಿ ಬದುಕಲು ದೇಶದಲ್ಲಿ ಅವಕಾಶವಿದೆ ಎಂದು ಹೇಳಿ ನವ ಸಮಾಜದ ನಿರ್ಮಾಣ ಮಾಡಿದರು. ಮಹ್ಮದಲಿ ಜಿನ್ನಾ ದೇಶವನ್ನು ಒಡೆದು ಪಾಕಿಸ್ಥಾನ ಮಾಡಿದ,ಪೆರಿಯಾರರಿಗೆ ದ್ರಾವಿಡರ ಪರ ನಿಂತು ದ್ರಾವಿಡರ ದೇಶ ಮಾಡಬೇಕೆಂಬ ಅಭಿಲಾಷೆ ಇತ್ತು. ಆದರೆ ನಿಜವಾದದೇಶಭಕ್ತ ಅಂಬೇಡ್ಕರರು ದೇಶವನ್ನು ಒಡೆಯಲಿಲ್ಲ ಕಾಶ್ಮೀರಕ್ಕೆ 370 ನೇ ವಿಧಿ ವಿಶೇಷ ಅವಕಾಶ ಬೇಡವೆಂದು ವಾದಿಸಿದರು,ಸಮಗ್ರಭಾರತಕ್ಕೆ ಸಂವಿಧಾನ ಬರೆದರು. ದೇಶದ ಪ್ರಗತಿಗೆ ಪೂರಕವಾದ R,B,I ಸ್ಥಾಪನೆಯಲ್ಲಿ ಇವರ ಶ್ರಮ ಅನುಪಮವಾದದ್ದು,ಮಧ್ಯಪ್ರದೇಶದಿಂದ ಬಿಹಾರವನ್ನು ವಿಭಜಿಸಲು ಇವರ ಸಲಹೆಯಿದೆ,ಕೆಲಸದ ಸಮಯವನ್ನು ಹದಿನಾಲ್ಕು ತಾಸಿನಿಂದ ಎಂಟು ತಾಸಿಗಿಳಿಸಿದ ಪ್ರಯತ್ನ ಇವರದ್ದು ಹೀಗೇ ಡಾ,ಬಿ,ಆರ್,ಅಂಬೇಡ್ಕರರ ವಿರಮಿಸದ ಶ್ರಮ ಭಾರತವನ್ನು ಇಂದು ಜಗತ್ತಿನಾದ್ಯಂತ ಪ್ರಚುರಪಡಿಸಿದೆ.ದೇಶವಾಸಿಗಳಿಗೆ ಭದ್ರತೆ,ಸ್ವಾಭಿಮಾನ,ಶಿಕ್ಷಣ,ಸ್ವಾತಂತ್ರ್ಯ,ಸಮಾನತೆಯಿಂದ ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿದೆ. ಅವರ ಆಶಯಗಳನ್ನು ದಿಕ್ಕರಿಸದೆ ಪುರಸ್ಕರಿಸಿ,ಸತ್ಕರಿ,ಅನುಸರಿಸಿದರೆ ಅವರ ಕನಸು ಈಡೇರಿದಂತಾಗುತ್ತದೆ. ಇವರಿಲ್ಲದೇ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.ಒಟ್ಟಿನಲ್ಲಿ ಖಡ್ಗ,ಬಂದೂಕುಗಳನ್ನು ಹಿಡಿಯದೆ ಬದಲಾವಣೆ ತಂದ ಕ್ರಾಂತಿಕಾರಿ ಅಂಬೇಡ್ಕರ್ ಎಂದು ಗಟ್ಟಿಯಾಗಿ ಹೇಳಬಹುದಾಗಿದೆ. ಲೇಖನ:- ಸುರೇಶ ಬಳಗಾನೂರು ಉಪನ್ಯಾಸಕರು ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಕಿ.9980167085

Apr 13, 2025 - 22:41
Apr 13, 2025 - 22:49
 0  9

What's Your Reaction?

like

dislike

love

funny

angry

sad

wow