ಬೀದಿಬದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳ ಅವೈಜ್ಞಾನಿಕ ತೆರವು ಕೈಬಿಡುವಂತೆ ಅಂತರಾಷ್ಟ್ರೀಯ ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್ ನಜೀರ್ ಆಗ್ರಹ.!
ಮಸ್ಕಿ ಪುರಸಭೆ 6 ನೇ ವಾರ್ಡಿನ ಬೀದಿಬದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳ ಅವೈಜ್ಞಾನಿಕ ತೆರವು ಕಾರ್ಯಾಚರಣೆಯನ್ನು ರದ್ದುಗೊಳಿಸುವ ಕುರಿತು. ಅಂತರಾಷ್ಟ್ರೀಯ ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯು ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿ ಬೀದಿ ಬದಿ ಡಬ್ಬ ವ್ಯಾಪಾರಸ್ಥರು ಸೇರಿ ಮನವಿ ಸಲ್ಲಿಸಿದರು.
ಪುರಸಭೆ 6 ನೇ ವಾರ್ಡಿನ ಸದಸ್ಯ ಕೃಷಿ ಬ್ಯಾಂಕ್ ಪಕ್ಕದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಗುರಿಯಾಗಿರಿಸಿಕೊಂಡು ಟ್ರಾಫಿಕ್ ನೆಪದಲ್ಲಿ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಅಧಿಕಾರಿಗಳ ಮೇಲೆ ಒತ್ತಡ ಹೇರುವುದರ ಮೂಲಕ ಸುಮಾರು ವರ್ಷಗಳಿಂದ ಬೀದಿ ಬದಿ ವಿವಿದ ಅಂಗಡಿಗಳನ್ನು ಹಾಕಿಕೊಂಡು ಉಪಜೀವನ ನಡೆಸುತ್ತಿರುವ ಬಡಪಾಯಿಗಳಿಗೆ ಅಂಗಡಿಗಳನ್ನು ತೆಗೆಯಲು ಹೇಳುತ್ತಿರುವುದು ಬಿದ್ದಿಬದಿ ವ್ಯಾಪಾರಸ್ಥರ ಕುಟುಂಬಗಳ ಜೀವನದಮೇಲೆ ಬಹಳ ದುಷ್ಪರಿಣಾಮ ಬೀರುತ್ತದೆ.
ಈ ಅಂಗಡಿಗಳನ್ನೇ ನಂಬಿಕೊಂಡು ಕುಟುಂಬಗಳು ಜೀವನಮಾಡುತ್ತಿವೆ.ಈ ನಿಮ್ಮ ನಿರ್ಧಾರ ಬೀದಿ ಬದಿ ವ್ಯಾಪಾರಸ್ಥರ ಕುಟುಂಭವನ್ನು ಬೀದಿಗೆ ಬೀಳುವಂತೆ ಮಾಡುತ್ತದೆ.
ಕಾರಣ ತಾವುಗಳು ಈ ಅವೈಜ್ಞಾನಿಕ ತೆರವು ಕಾರ್ಯಾಚರಣೆಯನ್ನು ರದ್ದುಗೊಳಿಸಿ ಬೀದಿಬದಿವ್ಯಾಪಾರಿಗಳ ಬದುಕಿಗೆ ಆಸರೆಯಾಗಬೇಕೆಂದು ಈ ಮೂಲಕ ಅಂತರಾಷ್ಟ್ರೀಯ ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್ ನಜೀರ್ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ
ಮಲ್ಲಪ್ಪ, ಅಂಬರೀಶ್ ಪತ್ತಾರ್, ಮಹಾನಂದ, ನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
What's Your Reaction?






