ಅವೈಜ್ಞಾನಿಕ ರಸ್ತೆ ಅಗಲೀಕರಣ ನೀತಿಯನ್ನು ಕೈಬಿಟ್ಟು ಬೈಪಾಸ್ ರಸ್ತೆ ಮಾಡಿ|| ರಾಘವೇಂದ್ರ ಕುಲಕರ್ಣಿ

ಬಳಗಾನೂರು ರಸ್ತೆ ಅಗಲೀಕರಣ ವಿರೋಧಿ ಸಮಿತಿಯಿಂದ ಬೃಹತ್ ಪ್ರತಿಭಟನೆ

Jun 13, 2025 - 06:59
 0  61
ಅವೈಜ್ಞಾನಿಕ ರಸ್ತೆ ಅಗಲೀಕರಣ   ನೀತಿಯನ್ನು ಕೈಬಿಟ್ಟು ಬೈಪಾಸ್ ರಸ್ತೆ ಮಾಡಿ|| ರಾಘವೇಂದ್ರ ಕುಲಕರ್ಣಿ
ಬಳಗಾನೂರು ರಸ್ತೆ ಅಗಲೀಕರಣ ವಿರೋಧಿ ಸಮಿತಿಯಿಂದ ಬೃಹತ್ ಪ್ರತಿಭಟನೆ ಬಳಗಾನೂರಿನ ರಸ್ತೆ ಅಗಲೀಕರಣ ವಿರೋಧಿ ಸಮಿತಿಯಿಂದ ಗುರುವಾರ ಬೆಳಿಗ್ಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪೋತ್ನಾಳದಿಂದ ಮಸ್ಕಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿರುವ ಮನೆ,ಅಂಗಡಿ ಮುಂಗಟ್ಟುಗಳನ್ನು ತೆರವು ಗೊಳಿಸಿ ರಸ್ತೆ ಅಗಲೀಕರಣ ಮಾಡುವ ನಿರ್ಧಾರವನ್ನು ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈಗೊಂಡಿದ್ದರು. ಆದರೆ ಅದರಿಂದ ಸಂತ್ರಸ್ತರಾಗುವ ಭಯದಿಂದ ನೂರಾರು ವ್ಯಾಪಾರಸ್ತರು,ನಾಗರೀಕರು,ಪಕ್ಷಾತೀತವಾಗಿ ಸಂಘಟಿತರಾಗಿ ರಸ್ತೆ ಅಗಲೀಕರಣದ ವಿರುದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಮ
ಅವೈಜ್ಞಾನಿಕ ರಸ್ತೆ ಅಗಲೀಕರಣ   ನೀತಿಯನ್ನು ಕೈಬಿಟ್ಟು ಬೈಪಾಸ್ ರಸ್ತೆ ಮಾಡಿ|| ರಾಘವೇಂದ್ರ ಕುಲಕರ್ಣಿ
ಅವೈಜ್ಞಾನಿಕ ರಸ್ತೆ ಅಗಲೀಕರಣ   ನೀತಿಯನ್ನು ಕೈಬಿಟ್ಟು ಬೈಪಾಸ್ ರಸ್ತೆ ಮಾಡಿ|| ರಾಘವೇಂದ್ರ ಕುಲಕರ್ಣಿ
ಅವೈಜ್ಞಾನಿಕ ರಸ್ತೆ ಅಗಲೀಕರಣ   ನೀತಿಯನ್ನು ಕೈಬಿಟ್ಟು ಬೈಪಾಸ್ ರಸ್ತೆ ಮಾಡಿ|| ರಾಘವೇಂದ್ರ ಕುಲಕರ್ಣಿ
ಅವೈಜ್ಞಾನಿಕ ರಸ್ತೆ ಅಗಲೀಕರಣ   ನೀತಿಯನ್ನು ಕೈಬಿಟ್ಟು ಬೈಪಾಸ್ ರಸ್ತೆ ಮಾಡಿ|| ರಾಘವೇಂದ್ರ ಕುಲಕರ್ಣಿ
ಅವೈಜ್ಞಾನಿಕ ರಸ್ತೆ ಅಗಲೀಕರಣ   ನೀತಿಯನ್ನು ಕೈಬಿಟ್ಟು ಬೈಪಾಸ್ ರಸ್ತೆ ಮಾಡಿ|| ರಾಘವೇಂದ್ರ ಕುಲಕರ್ಣಿ

ಬಳಗಾನೂರು ರಸ್ತೆ ಅಗಲೀಕರಣ ವಿರೋಧಿ ಸಮಿತಿಯಿಂದ ಬೃಹತ್ ಪ್ರತಿಭಟನೆ  

ಬಳಗಾನೂರಿನ ರಸ್ತೆ ಅಗಲೀಕರಣ ವಿರೋಧಿ ಸಮಿತಿಯಿಂದ ಗುರುವಾರ ಬೆಳಿಗ್ಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪೋತ್ನಾಳದಿಂದ ಮಸ್ಕಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿರುವ ಮನೆ,ಅಂಗಡಿ ಮುಂಗಟ್ಟುಗಳನ್ನು ತೆರವು ಗೊಳಿಸಿ ರಸ್ತೆ ಅಗಲೀಕರಣ ಮಾಡುವ ನಿರ್ಧಾರವನ್ನು ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈಗೊಂಡಿದ್ದರು.

ಆದರೆ ಅದರಿಂದ ಸಂತ್ರಸ್ತರಾಗುವ ಭಯದಿಂದ ನೂರಾರು ವ್ಯಾಪಾರಸ್ತರು,ನಾಗರೀಕರು,ಪಕ್ಷಾತೀತವಾಗಿ ಸಂಘಟಿತರಾಗಿ ರಸ್ತೆ ಅಗಲೀಕರಣದ ವಿರುದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ ಹತ್ತುಗಂಟೆಯ ಸುಮಾರಿಗೆ ಮೇಗಡೆಪೇಟೆಯ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. 

ಅಲ್ಲಿಂದ ಮೊದಲ್ಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣಪಂಚಾಯ್ತಿಯ ನಿರ್ಧಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಮುಖ್ಯರಸ್ತೆಯ ಗುಂಟ ಸಾಗಿ ಪಟ್ಟಣಪಂಚಾಯ್ತಿಯ ಆವರಣಕ್ಕೆ ತಲುಪಿತು.

ಅಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಟ್ಟಣ ಪಂಚಾಯ್ತಿಯ ಮಾಜಿ ಸದಸ್ಯ ಮಹಾಬಳೇಶ ಹಡಪದ ಇದು ಜನವಿರೋಧಿ ನೀತಿ.ಬಡ ವ್ಯಾಪಾರಿಗಳನ್ನು,ನಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನವಿದು.ಇದನ್ನು ಕೈಬಿಟ್ಟು ಹಲವಾರು ಪ್ರಗತಿಪರ ಯೋಜನೆಗಳಿವೆ ಅವುಗಳನ್ನು ಜಾರಿಮಾಡಿ ಜನರಿಗೆ ಒಳಿತನ್ನು ಮಾಡಿ ಎಂದು ಆಗ್ರಹಿಸಿದರು.

ನಂತರ ಹಿರಿಯ ಹೋರಾಟಗಾರ ಮಾಜಿ ಗ್ರಾಮಪಂಚಾಯ್ತಿ ಅಧ್ಯಕ್ಷ ಬಿ,ತಿಕ್ಕಯ್ಯ ಮಾತನಾಡಿ ಬಳಗಾನೂರಿಗೆ ದಿನಕ್ಕೆ ನಾಲ್ಕಾರು ಬಸ್ಸುಗಳು ಮಾತ್ರ ಬಂದೋಗುತ್ತವೆ,ವ್ಯಾಪಾರ ವಹಿವಾಟೂ ಹೇಳಿಕೊಳ್ಳುವಂತಿಲ್ಲ ಇದರಮಧ್ಯ ಅಗಲೀಕರಣ ನೆಪದಲ್ಲಿ ವ್ಯಾಪಾರಸ್ತರಿಗೆ ಬೀದಿಬದಿಯ ನಿವಾಸಿಗಳಿಗೆ ತೊಂದರೆ ನೀಡಿದರೆ ವ್ಯಾಪಾರ ಮಾಡುವುದಾದರೂ ಹೇಗೆ ಜೀವನ ನಡೆಸುವುದಾದರೂ ಹೇಗೆ? ಅಂಗಡಿ ಮುಂಗಟ್ಟುಗಳೇ ಇಲ್ಲವಾದಮೇಲೆ ಪಂಚಾಯ್ತಿಗೆ ಕಂದಾಯ ಬರುವುದಾದರೂ ಹೇಗೆ? ಈ ಅವೈಜ್ಞಾನಿಕ ನೀತಿಯನ್ನು ಕೈಬಿಟ್ಟು ಬೈಪಾಸ್ ರಸ್ತೆ ಮಾಡಿ ಎಂದು ಸಲಹೆ ನೀಡಿದರು.

ತದನಂತರ ಕೃಷಿ ಪತ್ತಿನ ಸಹಕಾರಿಯ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ ಕಳೆದ ಬಾರಿ ಮಾಡಿದ ಅಗಲೀಕರಣದಿಂದಾದ ನಷ್ಟವನ್ನು ನಾವಿನ್ನೂ ಭರಿಸಲಾಗಿಲ್ಲ ಈಗ ಮತ್ತೆ ಅಗಲೀಕರಣವೆಂದರೆ ನಾವು ಬದುಕುವುದಾದರೂ ಹೇಗೆ? ನಮ್ಮ ಕುಟುಂಭವನ್ನು ಕೊಲ್ಲಿ ನಂತರ ವಾರಸುದಾರರಿಲ್ಲದ ನಮ್ಮ ಮನೆಯೆಲ್ಲವನ್ನೂ ನೆಲಸಮ ಮಾಡಿ ಬೇಕಾದಷ್ಟು ಅಗಲೀಕರಣ ಮಾಡಿ ಎಂದು ನೊಂದು ನುಡಿದರು.

ನಂತರ ಉಪನ್ಯಾಸಕ ಸುರೇಶ ಬಳಗಾನೂರು ಮಾತನಾಡಿ ಜನರಿಗೆ ಬೇಕಿಲ್ಲದ ಕೆಲಸವನ್ನು ಒತ್ತಾಯ ಪೂರ್ವಕವಾಗಿ ಮಾಡುವುದು ಅಭಿವೃದ್ದಿಯಲ್ಲ,ಜನಪರವಾದ ಕೆಲಸಮಾಡಿ ಜನರ ಖುಷಿಗೆ ಕಾರಣವಾಗುವುದೇ ನಿಜವಾದ ಅಭಿವೃದ್ದಿ.

ಅಷ್ಟಕ್ಕೂ ಬೇಕಿಲ್ಲದ ಅಗಲೀಕರಣ ಮಾಡಲೇಬೇಕೆಂಬ ಜಿದ್ದು ಏಕೆ? ಶುದ್ದ ಕುಡಿಯುವ ನೀರಿನ ವ್ಯವಸ್ಥೆ,ಸೇತುವೆ,ಕಾಲೇಜು,ಅಕ್ರಮ ಮರಳು ಗಣಿಗಾರಿಕೆಯ ರದ್ದತಿ, ವಸತಿಶಾಲೆಗಳು,ಕುಡಿಯುವ ನೀರಿನ ಕೆರೆಯ ನಿರ್ಮಾಣಗಳಂತಹ ಹತ್ತು ಹಲವು ಯೋಜನೆಗಳ ಅವಶ್ಯಕತೆಯಿದೆ,ಅಂತಹವುಗಳನ್ನು ಮಾಡುವುದನ್ನು ಬಿಟ್ಟು ಇದೊಂದಕ್ಕೇ ಜೋತುಬಿದ್ದಿರುವುದೇಕೆ?ಎಂದು ಪ್ರಶ್ನಿಸಿದರು.

ನಂತರ ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮಿ ಗಂಡ ಮಲ್ಲಪ್ಪ ಹಿಂದಪೂರು ಮಾತನಾಡಿ ಇದು ಬಡಜನರಿಗೆ ಅರಗಿಸಿಕೊಳ್ಳಲಾಗದ ಕೆಲಸ ಇದರ ಬದಲಿಗೆ ಬೈ ಪಾಸ್ ರಸ್ತೆ ಮಾಡಿ ಎಂದರು.

ಅಕ್ರಮ ಮರಳು ಸಾಗಾಣಿಕೆ ಅವ್ಯಾಹತವಾಗಿ ಸಾಗಿದೆ,ಬಹುತೇಕ ಟಿಪ್ಪರ್ ಗಳಿಗೆ ನಂಬರ್ ಪ್ಲೇಟುಗಳೇ ಇಲ್ಲ,ಅಧಿಕ ಭಾರ,ರಾತ್ರಿ ಹೊತ್ತು ಕಾನೂನು ಬಾಹೀರವಾಗಿ ಸಾಗಾಣಿಕೆ,ನಡೆಸುತ್ತಿವೆ ಎಂಬ ವರದಿಗಳು ಟಿ,ವಿ,ಮತ್ತು ದಿನಪತ್ರಿಕೆಗಳಲ್ಲಿ ಪ್ರಸಾರವಾಗಿದ್ದರೂ ಯಾವೊಬ್ಬ ಅಧಿಕಾರಿಯಾಗಲಿ ಜನಪ್ರತಿನಿಧಿಯಾಗಲಿ ತಡೆಯಲು ಪ್ರಯತ್ನಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಭೂವಿಧಿ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ,ತಹಸಿಲ್ದಾರರಾಗಲಿ,ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾಗಲಿ,ಶಾಸಕರಾಗಲಿ ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ತರಮೇಲೆ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ,ಜನಪ್ರತಿನಿಧಿಗಳ ಬೇಜವಬ್ದಾರಿತನ ಮತ್ತು ಕರ್ತವ್ಯಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ,ಇದನ್ನು ನಿಲ್ಲಿಸದಿದ್ದರೆ ಅದರ ವಿರುದ್ದ ಒಂದು ಹೋರಾಟವನ್ನೇ ರೂಪಿಸಬೇಕಾಗುತ್ತದೆಂದು ಹಲವು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಗರಡಿ ಕಳಕಮಲ್ಲೇಶ ಮತ್ತು ಅಧ್ಯಕ್ಷ ಶಿವಕುಮಾರ ನಾಯಕರಿಗೆ ಮನವಿಪತ್ರವನ್ನು ನೀಡುವ ಮೂಲಕ ತುರ್ತು ನಿರ್ಧಾರ ಪ್ರಕಟಿಸಲು ಆಗ್ರಹಿಸಿದರು.

ಗುರುವಾರದಂದೇ ಪೂರ್ವನಿಗದಿಯಾಗಿದ್ದ ಸರ್ವ ಸದಸ್ಯರ ಸಾಮಾನ್ಯಸಭೆಯನ್ನು ಅಧ್ಯಕ್ಷ ಶಿವಕುಮಾರ ನಾಯಕರ ಅಧ್ಯಕ್ಷತೆಯಲ್ಲಿ ನಡೆಸಿ ಸದಸ್ಯರೊಂದಿಗೆ ಚರ್ಚಿಸಿ ಕೆಲ ಸದಸ್ಯರ ವಿರೋಧದ ನಡುವೆಯೇ 2012 ರಲ್ಲಿ ನಿಗದಿಯಾಗಿದ್ದ ರಸ್ತೆಯ ಮಧ್ಯದಿಂದ ಇಪ್ಪತ್ತೊಂದು ವರೆ,ಇಪ್ಪತ್ತೊಂದುವರೆ ಒಟ್ಟು ಚರಂಡಿಯಿಂದ ಚರಂಡಿಗೆ ನಲವತ್ಮೂರು ಫೀಟ್ ಅಗಲ ಮಾಡುವ ನಿರ್ಧಾರವನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಪರವಾನಗಿ ಪಡೆಯಲಾಗುವುದೆಂಬ ನಿರ್ಧಾರವನ್ನು ಪ್ರಕಟಿಸಿದರು.

ಈ ನಿರ್ಧಾರಕ್ಕೆ ಸಾರ್ವಜನಿಕರು ಒಪ್ಪುತ್ತಾರೋ ಅಥವಾ ಮತ್ತೆ ಪ್ರತಿಭಟನೆಗಿಳಿಯುತ್ತಾರೋ ಕಾದು ನೋಡಬೇಕಿದೆ.

ಈ ಪ್ರತಿಭಟನೆಯಲ್ಲಿ ಹತ್ತಾರು ಮಹಿಳೆಯರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.ಆರಕ್ಷಕರು ಬಿಗಿ ಬಂದೋಬಸ್ತನ್ನು ನೀಡಿದ್ದರು.

What's Your Reaction?

like

dislike

love

funny

angry

sad

wow