“ಮಸ್ಕಿಯಲ್ಲಿ ಬೀದಿ ನಾಯಿಗಳ ದಾಳಿ! 7 ಮಕ್ಕಳು ಸೇರಿ 10 ಜನರಿಗೆ ಗಾಯ ಕ್ರಮಕ್ಕೆ ಆಗ್ರಹ”
ಮಸ್ಕಿ, ಜ 28 ತಾಲ್ಲೂಕಿನಿಂದ ಒಂದು ಆತಂಕಕಾರಿ ಸುದ್ದಿ ಮಸ್ಕಿ ಪಟ್ಟಣದ ಸೋಮನಾಥ ನಗರ ಹಾಗೂ ಪಿಂಜಾರ್ ಓಣಿಯಲ್ಲಿ ಜನವರಿ 25ರ ಬೆಳಿಗ್ಗೆ ಬೀದಿ ನಾಯಿಗಳ ದಾಳಿಯಿಂದ ಏಳು ಜನ ಮಕ್ಕಳು ಮತ್ತು ಮೂವರು ಹಿರಿಯ ನಾಗರಿಕರು ಹಾಗು ಜಾನವಾರು ದಳು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆಯಿಂದಾಗಿ
ಜನರು ಭಯಭೀತ ಸ್ಥಿತಿಯಲ್ಲಿ ಬದುಕುವಂತಾಗಿದೆ.
ಮಕ್ಕಳನ್ನು ಹೊರಗೆ ಬಿಡಲು ಪೋಷಕರು ಆತಂಕದಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ
ಆಯುಶ್ ವೈದ್ಯರಾದ ಶ್ರೀದೇವಿ ಹಾಗೂ ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ
ಡಾ. ಮಹೇಶ ಅವರು
ಜನವರಿ 26 ರಂದು ಪುರಸಭೆ ಮಸ್ಕಿಗೆ ಪತ್ರ ಬರೆದು ಮಹತ್ವದ ಮನವಿ ಸಲ್ಲಿಸಿದ್ದಾರೆ.
ಬೀದಿ ನಾಯಿಗಳನ್ನು ಹಿಡಿದು
ಸಂತಾನ ಹರಣ ಮಾಡಬೇಕು,
ಅವುಗಳಿಗೆ ಲಸಿಕೆ ಹಾಕಿ
ನಾಯಿಗಳ ಹಾವಳಿಗೆ ತಕ್ಷಣ ಕಡಿವಾಣ ಹಾಕಬೇಕು ಎಂದು
ಅವರು ಒತ್ತಾಯಿಸಿದ್ದಾರೆ.
ಜನರ ಸುರಕ್ಷತೆಗಾಗಿ
ಪುರಸಭೆ ಮತ್ತು ಸಂಬಂಧಿಸಿದ ಇಲಾಖೆಗಳು
ತಕ್ಷಣ ರೈತರ ಸಾಕು ಪ್ರಾಣಿ ಎಮ್ಮೆಗಳಿಗೂ ಬೀದಿ ನಾಯಿಗಳ ಕಡಿತ ಕೊಳಗಾಗಿದ್ದು ಸೂಕ್ತ ಪರಿಹಾರ ನೀಡಬೆಕ್ಕು ಎಂದು ಸ್ಥಳೀಯರ ಆಗ್ರಹವಾಗಿದೆ.
ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿ ಅವರ ಪ್ರತಿಕಿಯೇ
ವೈದ್ಯಾಧಿಕಾರಿಗಳು ಬರೆದ ಪತ್ರದ ಮಾಹಿತಿ ಬಂದ ತಕ್ಷಣ ಸರ್ವೆ ನಡೆಸಿ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿರುವವರಿಗೆ ದೃಢೀಕರಿಸಿ ಸೂಕ್ತ ಪರಿಹಾರ ಚೆಕ್ ನೀಡಲಾಗುವುದು ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳ ಕಡಿವಾಣಕ್ಕೆ ಟೆಂಡರ್ ಕರೆಯಲಾಗಿದ್ದು ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು.
What's Your Reaction?



