ಸಿಂಧನೂರು ತಾಲೂಕಾ ಹೊರಗುತ್ತಿಗೆ ನೌಕರರ ಸಂಘದ ತಾಲೂಕಾ ಅಧ್ಯಕ್ಷೆಯಾಗಿ ಕು,ಶ್ವೇತ ವೆಂಕಟೇಶ ಆಯ್ಕೆ.
ಸಿಂಧನೂರು ತಾಲೂಕ ಹೂರ ಗುತ್ತಿಗೆ ನೌಕರರ ಸಂಘದ ತಾಲೂಕಾಧ್ಯಕ್ಷೆಯಾಗಿ ಕುಮಾರಿ ಶ್ವೇತಾ ತಂದೆ ವೆಂಕಟೇಶ ಮಸ್ಕಿ ಇವರನ್ನು ಆಯ್ಕೆಮಾಡಲಾಗಿದೆ. ಗುರುವಾರ ಬೆಳಿಗ್ಗೆ ಸಿಂಧನೂರಿನ ನಿರೀಕ್ಷಣಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಕುಮಾರಿ ಶ್ವೇತಾ ತಂದೆ ವೆಂಕಟೇಶ ರವರನ್ನು ಅಧ್ಯಕ್ಷೆಯನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹೊರಗುತ್ತಿಗೆ ನೌಕರರ ಏನೇ ಸಮಸ್ಯಗಳಿದ್ದರೂ ಪರಿಹರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುವೆ. ಇಲಾಖೆಯ ಗಮನಕ್ಕೆತರುತ್ತೇನೆ. ಆದರೂ ಪರಿಹಾರಸಿಗದಿದ್ದರೆ ಹೋರಾಟದ ಮೂಲಕವಾದರೂ ನ್ಯಾಯಕೊಡಿಸುವ ಪ್ರಯತ್ನ ಮಾಡುತ್ತೇನೆಂದು ಹೇಳಿದರು. ವರದಿ,,,ಸುರೇಶ ಬಳಗಾನೂರು.
What's Your Reaction?






