ಕೂಡ್ಲಿಗಿ : ಕರ್ನಾಟಕ ಮುಸ್ಲೀಂ ಸಂಘಟನೆ ಕಚೇರಿ ಉದ್ಘಾಟನೆ
ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ ಜಿಲ್ಲೆ ಕೂಡ್ಲಿಗಿ : ಪಟ್ಟಣ ಹೊರವಲಯ ರಾಷ್ಟ್ರೀಯ ಹೆದ್ದಾರಿ 50ರ ಬದಿಯಲ್ಲಿ , ಕಾವೇರಿ ನಗರದಲ್ಲಿರುವ ಎ-ಸ್ಟಾರ್ ತಾಜ್ ಹೋಟೆಲ್ ಪಕ್ಕದಲ್ಲಿ. ರಾಜ್ಯ ಕರ್ನಾಟಕ ಮುಸ್ಲಿಂ ಸಂಘಟನೆಯ , ಕಚೇರಿ ಉದ್ಘಾಟನೆ ಕಾರ್ಯಕ್ರಮ ಜರುಗಿತು. ಕಾಂಗ್ರೇಸ್ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷರು , ಹಾಗೂ ಮಾಜಿ ಶಾಸಕರಾದ ಶಿರಾಜ್ ಶೇಖ್ ರವರು ಕಚೇರಿ ಉದ್ಘಾಟಿಸಿ ಮಾತನಾಡಿದರು. ಪಹಲ್ಗಾಂವ್ ದುರ್ಘಟನೆ ಖಂಡನೀಯವಾದದ್ದು , ಅಮಾನವೀಯ ಘಟನೆಗೆ ಕಾರಣರಾದ ಉಗ್ರರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದರು. ಭಾರತೀಯ ಮುಸಲ್ಮಾನರು ದೇಶ ದ್ರೋಹಿಗಳಲ್ಲ ,
ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ನಮ್ಮದೂ ಪಾತ್ರವಿದೆ ಎಂದರು. ಈಗಲೂ ಕರೆ ಕೊಟ್ಟರೆ ಇಂದಿಗೂ ಪಾಕಿಸ್ತಾನ ವಿರುದ್ಧ ಹೋರಾಡಲು , ಭಾರತೀಯ ಮುಸಲ್ಮಾನರು ಸಿದ್ಧರಿದ್ದೇವೆ ಎಂದರು.
ಮುಸಲ್ಮಾನರನ್ನು ಅನುಮಾನಿಬೇಡಿ , ನಾವೆಂದೆಂದಿಗೂ ಭಾರತೀಯರು ಎಂದು ಬಹು ಹೆಮ್ಮೆಯಿಂದ ಬೀಗುತ್ತೇವೆ ಎಂದರು. ಮುಸಲ್ಮಾನರು ಕಾಯಕಯೋಗಿಗಳೆಂದೇ ಪ್ರಖ್ಯಾತಿ ಹೊಂದಿದ್ದೇವೆ , ಬಸವಣ್ಣನವರ ಕಾಯಕಯೋಗ ತತ್ವದಂತೆ ಶ್ರಮ ಪಡುತ್ತೇವೆ. ಮತ್ತು ಸ್ವ ಉದ್ಯೋಗ ದೊಂದಿಗೆ ಸ್ವಾವಲಂಭಿಗಳಾಗಿರುತ್ತೇವೆ , ಕಾಯಕದಲ್ಲಿ ಕೌಶಲ್ಯತೆ ಹಾಗೂ ನಿಷ್ಠೆ ತೋರಿ ಸ್ವಾಭಿಮಾನದ ಜೀವನ ನಿರ್ವಹಿಸುತ್ತೇವೆ ಎಂದರು. ಅನಾದಿಕಾಲದಿಂದಲೂ ಎಲ್ಲಾ ಜಾತಿ ಸಮುದಾಯಗಳೊಂದಿಗೆ , ಸೌಹಾರ್ಧತೆ ಭಾತೃತ್ವಪ್ರೇಮದೊಂದಿಗೆ ಜೀವಿಸುತ್ತಿದ್ದೇವೆ. ನಾವು ಅಪ್ಪಟ ಭಾರತೀಯರಾಗಿದ್ದು ನಮ್ಮನ್ನು ಯಾವುದೇ ಕಾರಣಕ್ಕೂ, ಅನುಮಾನ ದೃಷ್ಟಿಯಿಂದ ನೋಡಬೇಡಿ ಎಂದರು. ಸ್ವಾತಂತ್ರ್ಯ ದೊರತ ಸಂದರ್ಭದಲ್ಲಿ ಪಾಕಿಸ್ತಾನ ಬೇಕು ಎಂದು , ಭಾರತ ಬಿಟ್ಟು ತೊಲಗಿದ ಪಾಕಿಸ್ಥಾನದ ಮುಸಲ್ಮಾನರು ಪಾಕಿಸ್ಥಾನದಲ್ಲಿದ್ದಾರೆ. ನಾವು ಎಂದೆಂದಿಗೂ ಭಾರತಾಂಬೆಯ ಮಕ್ಕಳು , ಭಾರತಾಂಬೆಯ ಮುಸ್ಲಿಂರಾಗಿದ್ದೇವೆ ಎಂದು ಹೆಮ್ಮೆ ಪಟ್ಟು ಹೇಳುತ್ತೇವೆ ಎಂದರು. ಅನೇಕತೆಯಲ್ಲಿ ಏಕತೆ ಮೆರೆಯೋ ಮೂಲಕ , ಭಾರತ ವಿಶ್ವದಲ್ಲಿ ಭಾವೈಕ್ಯೆತೆಗೆ ಪ್ರಖ್ಯಾತಿ ಪಡೆದಿದೆ. ಅದಕ್ಕೆ ಎಂದಿಗೂ ಭಂಗ ತರುವ ಕೆಲಸವನ್ನು , ಭಾರತೀಯ ಮುಸಲ್ಮಾನರು ಮಾಡುವುದಿಲ್ಲ ಎಂದರು. ಉಗ್ರರ ಧಮನಕ್ಕೆ ಕಾರ್ಯದಲ್ಲಿ ನಮಗೆ ಅವಕಾಶ ಕೊಟ್ಟರೆ , ದೇಶ ಸೇವೆ ಮಾಡಲು ಸದಾ ಸಿದ್ಧರಿದ್ದೇವೆ ಎಂದು ಶಿರಾಜ್ ಶೇಖ್ ಭಾವುಕರಾಗಿ ನುಡಿದರು.
*ಕ.ಮು.ಸಂಘ ನೊಂದವರ ಧ್ವನಿಯಾಗಿ ಸೇವೆ ಮಾಡುತ್ತದೆ - ಎಲ್ ಎಸ್ ಭಷೀರ್ ಅಹಮದ್*- ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್. ಬಷೀರ್ ಅಹಮದ್ ಮಾತನಾಡಿ, ದಲಿತ, ದಮನಿತ, ಶೋಷಿತ, ಕಡುಬಡವರ ಪರವಾಗಿ ಹೋರಾಡುತ್ತೇನೆ. ಅವರಿಗೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ , ಮುಸ್ಲಿಂ ಜನಾಂಗಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಸೌಲಭ್ಯಗಳನ್ನು ಸರ್ಕಾರ ಕೊಡಬೇಕಾಗಿದೆ. ನಾವು ಹಿಂದುಳಿದ ಅಲ್ಪಸಂಖ್ಯಾತರಾಗಿದ್ದು , ಸಂವಿಧಾನದ ಆಶಯದಂತೆ ನ್ಯಾಯಬದ್ಧವಾಗಿ ನೀಡಬೇಕಾದ ಅನುಕೂಲತೆಗಳನ್ನು ಕಲ್ಪಿಸುವಂತೆ ಈ ಮೂಲಕ ವಿನಂತಿ ಮಾಡುತ್ತಿದ್ದೇವೆ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಖುರಾನ್ ಪಠಣ, ಹಾಗೂ ನಾಡಗೀತೆ ಹಾಡಲಾಯಿತು. ನಂತರ ಪೆಹಲ್ಗಾಮದಲ್ಲಿ ಹುತಾತ್ಮರಾದವರಿಗೆ , ಶ್ರದ್ಧಾಂಜಲಿ ಅರ್ಪಿಸಿ ಒಂದು ನಿಮಿಷ ಮೌನಚರಣೆಯನ್ನು ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ , ಸಮಾಜದ ಗಣ್ಯರಿಗೆ ಸನ್ಮಾನ ನೆರವೇರಿಸಲಾಯಿತು. ಕಾರ್ಯಕ್ರಮದ ವೇದಿಕೆಯ ಸಾನಿಧ್ಯವನ್ನು , ಕೂಡ್ಲಿಗಿ ಹಿರೇಮಠ ಸಂಸ್ಥಾನದ ಷ ಬ್ರ ಪ್ರಶಾಂತ ಸಾಗರ ಶಿವಾಚಾರ್ಯಸ್ವಾಮಿ , ಡೆವಿಡ್ ಫಾದರ್, ಗಂಗಾವತಿಯ ಬಾಬಾಖಾನ್ ಸಾಹೇಬ್ ವಹಿಸಿದ್ದರು. ನವರಂಗ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ, ಕ್ರಾಂತಿಕಾರಿ ಕವಿ ಹಜರತ್ ಅಬ್ದುಲ್ ಕರೀಮ್ ಹಾಶೀಮ್ ಪೀರ್ ದೇಸಾಯಿ, ಕನ್ನಡ ಸೇನೆ ಕರ್ನಾಟಕ ರಾಜ್ಯಧ್ಯಕ್ಷ ಕೆ.ಆರ್.ಕುಮಾರ್, ಶರಣೇಶ್ವರ ವಿದ್ಯಾ ಕೇಂದ್ರದ ಅಧ್ಯಕ್ಷ ಕೆ.ಯಂ. ಶಶಿಧರಸ್ವಾಮಿ. ಪಿ.ಹೆಚ್.ದೊಡ್ಡರಾಮಣ್ಣ, ಓಂಕಾರ್ ನಾಯ್ಕ್, ಕರ್ನಾಟಕ ಮುಸ್ಲಿಮ್ ಸಂಘದ ರಾಜ್ಯ ಗೌರವಾಧ್ಯಕ್ಷ , ಉಡುಪಿಯ ಸೈಯದ್ ಯಾಸೀನ್ ಹೆಮ್ಮಾಡಿ. ಕಾರ್ಯಧ್ಯಕ್ಷ ಎ. ಜಾಕೀರ್ ಹುಸೇನ್, ಪ್ರಧಾನ ಕಾರ್ಯದರ್ಶಿ ಸೈಯದ್ ಪುರ್ಖಾನ್ ಯಾಸೀನ್ ಹೆಮ್ಮಾಡಿ, ಮಹಮದ್ ಸಿರಾಜ್, ಇಸ್ಮಾಯಿಲ್, ಮಹಮ್ಮದ್ ಸಾದಿಕ್ ವುಲ್ಲಾ, ಮೊಹಮ್ಮದ್ ಮೋಸೀನ್ ಸಾಬ್ ಸೇರಿದಂತೆ. ಕೂಡ್ಲಿಗಿ ಪಟ್ಟಣ , ವಿಜಯನಗರ ಜಿಲ್ಲೆ ಸೇರಿದಂತೆ , ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ್ದ. ಅನೇಕ ಮುಸ್ಲಿಂ ಮುಖಂಡರು , ಸಂಘಟನೆಯ ಪದಾಧಿಕಾರಿಗಳು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ , ನೂರಾರು ಮಸಲ್ಮಾನ್ ಭಾಂದವರು ಹಾಗೂ ವಿವಿದ ಸಮುದಾಯದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
What's Your Reaction?






