ಸ್ಮರಣ ಸಂಚಿಕೆಗೆ ಬರಹ ಮತ್ತು ಜಾಹೀರಾತುಗಳ ಆಹ್ವಾನ.
ಐತಿಹಾಸಿಕ ಹಾಗೂ ಬಂಗಾರ ಬೆಳೆಯುವ ರಾಯಚೂರು ನಗರದಲ್ಲಿ ಡಿಸೆಂಬರ್ 14 ಮತ್ತು 15 ರಂದು ಎರಡು ದಿನಗಳ ಕಾಲ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಉದ್ದೇಶಿಸಲಾಗಿದೆ.
ಆ ಸಮ್ಮೇಳನದಲ್ಲಿ ರಾಜ್ಯಮಟ್ಟದ ದಲಿತಪರ ಲೇಖಕರು, ಪ್ರಗತಿಪರ ಚಿಂತಕರು ಮತ್ತು ಸ್ವಾಭಿಮಾನಿ ಹೋರಾಟಗಾರರು ಹಾಗೂ ನಾಡಿನ ಹೆಸರಾಂತ ಸಾಂಸ್ಕೃತಿಕ ವಿಮರ್ಶಕರಿಂದ ಬರಹಗಳನ್ನು ಆಹ್ವಾನಿಸಲಾಗಿದೆ. ಬರಹಗಾರರು ತಮ್ಮ ಒಂದು ಲೇಖನ ಅಥವಾ ಕವನ ಮತ್ತು ಇತರೆ ಸೃಜನಶೀಲ ಬರಹಗಳನ್ನು ಮತ್ತು ಇತ್ತೀಚಿನ ಭಾವಚಿತ್ರವನ್ನು ಈ ಕೆಳಗೆ ತಿಳಿಸಿದ ವಿಳಾಸಕ್ಕೆ ತಲುಪಿಸಬಹುದು.
ತಾವು ಕಳುಹಿಸುವ ಬರಹಗಳು ದಲಿತ ಸಾಹಿತ್ಯ, ಸಂಸ್ಕೃತಿ, ಚಳುವಳಿ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರಗಳ ಬಗ್ಗೆಯೂ ವಿಷಯ ವಸ್ತುವಿರುವ ಕಥಾವಸ್ತುವನ್ನು ಒಳಗೊಂಡಿರಬೇಕು. ಮತ್ತು ವಿಮರ್ಶಕರಿಂದ ವಿಮರ್ಶೆ ಬರಹಗಳನ್ನು ಕಳುಹಿಸಲು ಮನವಿ.
*ವಿಶೇಷ ಸೂಚನೆಗಳು*
1. ತಾವು ಕಳುಹಿಸುವ ಬರಹಗಳ ಜೊತೆಗೆ ಪ್ರಕಟಿಸುವ ಒಪ್ಪಿಗೆಯ ಪತ್ರವನ್ನು ನೀಡಬೇಕು.
2. ತಾವು ಕಳುಹಿಸಿದ ಬರಹ ಪ್ರಕಟಿಸಲು ಅಂತಿಮವಾಗಿ ಸಂಪಾದಕ ಮಂಡಳಿಗೆ ಬಿಟ್ಟಿರುತ್ತದೆ.
3. ಬರಹವು ನುಡಿ 01ಈ ತಂತ್ರಾಂಶದಲ್ಲಿ ಮುದ್ರಿಸಿದ ಬರಹದ ಜೊತೆಗೆ ತಮ್ಮ ಒಂದು ಇತ್ತೀಚಿನ ಭಾವಚಿತ್ರವನ್ನು ಕಳಿಸಬೇಕು .
ವ್ಯಾಟ್ಸಪ್ ನಂಬರ್ ಗಳಿಗಾಗಲಿ ಇಮೇಲ್ ಗಾಗಲಿ ಹಾಗೂ ವಿಳಾಸಕ್ಕೆ ತಲುಪಿಸಲು ಕೋರಲಾಗಿದೆ.
ಸ್ಮರಣ ಸಂಚಿಕೆ ಮೂಲಕ ಸಮ್ಮೇಳನಕ್ಕೆ ಶುಭಕೋರುವವರು ಹಾಗೂ ವಿವಿಧ ಇಲಾಖೆಗಳು ತಮ್ಮ ಯೋಜನೆಗಳ, ಸಂಸ್ಥೆಗಳ ಪ್ರಚಾರಕ್ಕಾಗಿ ಮತ್ತು ವೈಯಕ್ತಿಕವಾಗಿ ಜಾಹೀರಾತುಗಳನ್ನು ಕಳುಹಿಸಿಕೊಡಬಹುದು.
ಜಾಹೀರಾತಿನ ದರದ ಮಾಹಿತಿ ಈ ರೀತಿಯಾಗಿರುತ್ತದೆ.
ಹಿಂಬದಿ ರಕ್ಷಾಪುಟ (ಬಹುವರ್ಣದಲ್ಲಿ) - 1.00.000 =00
ಎರಡನೇ ಪುಟ (ಬಹುವರ್ಣದಲ್ಲಿ) -50.000=00
ಮೂರನೇ ರಕ್ಷಾಪುಟ (ಬಹುವರ್ಣದಲ್ಲಿ) -50.000=00
ಒಳಪಟ (ಸಿಂಗಲ್ ಕಲರ್) -25.000=00
ಅರ್ಧಪುಟ (ಸಿಂಗಲ್ ಕಲರ್)-15.000 = 00
ಒಂದು ಪುಟ ಕಪ್ಪುಬಿಳುಪು - 10.000 = 00
ಅರ್ಧಪುಟ ಕಪ್ಪು ಬಿಳುಪು 5.000 = 00
ಈ ರೀತಿಯಾಗಿ
ಮಾಹಿತಿಯನ್ನು ಕಳುಹಿಸಿಕೊಡಲು ನವೆಂಬರ್ 20 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ
*ಆರ್.ಕೆ.ಈರಣ್ಣ*
ಅಧ್ಯಕ್ಷರು ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮಾನವಿ.
99724 37930
erannark057@gmail.com
*ರಾಮಣ್ಣ ಹಿರೇಭೇರಿಗಿ*
ಪ್ರಧಾನ ಕಾರ್ಯದರ್ಶಿ
ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಸಿಂಧನೂರು.
95917 52436
rahi.8828@gmail.com
*ಡಾ.ಮಲ್ಲಿಕಾರ್ಜುನ ಕುರುಬದೊಡ್ಡಿ*
ಕಾರ್ಯದರ್ಶಿಗಳು
ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ರಾಯಚೂರು.
9743231796
*ಡಾ.ಬಸವರಾಜ ಸುಂಕೇಶ್ವರ*
ಪ್ರಧಾನ ಕಾರ್ಯದರ್ಶಿ
ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮಾನವಿ.
99450 87479
basavarajsunkrshwar@gmail.com
*ಡಾ.ಶರೀಫ್ ಹಸಮಕಲ್*
ಸಾಹಿತ್ಯಿಕ ಸಲಹೆಗಾರರು
ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಸಿಂಧನೂರು.
94806 05552
*ಡಾ.ರವಿಕುಮಾರ ಅಸ್ಕಿಹಾಳ*
ಸಾಹಿತ್ಯಿಕ ಸಲಹೆಗಾರರು
ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ರಾಯಚೂರು.
9535824919
*ಹನುಮಂತಪ್ಪ ಚಿಕ್ಕಕಡಬೂರು*
ಪ್ರಧಾನ ಕಾರ್ಯದರ್ಶಿ
ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮಸ್ಕಿ.
99008 35058
*ಬಸವರಾಜ ಚಿಗರಿ*
ಉಪಾಧ್ಯಕ್ಷರು,
ದಲಿತ ಸಾಹಿತ್ಯ ಪರಿಷತ್ತು ತಾಲೂಕ ಯುವಘಟಕ ಸಿಂಧನೂರು.
90080 97881
ಇವರನ್ನು ಸಂಪರ್ಕಿಸಬಹುದು ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಸಮ್ಮೇಳನದ ಸಂಯೋಜಕರಾದ ತಾಯರಾಜ್ ಮರ್ಚಟ್ಹಾಳ,ಸಹ ಸಂಯೋಜಕರಾದ ಡಾ.ಹುಸೇನಪ್ಪ ಅಮರಾಪುರ ಮತ್ತು ಸಂಪಾದಕರಾದ ಆರ್.ಕೆ.ಈರಣ್ಣ, ರಾಮಣ್ಣ ಹಿರೇಭೇರಿಗಿ ಅವರು ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?