ಲಿಂಗಸುಗೂರು ಜಿಲ್ಲಾ ಕೇಂದ್ರವನ್ನಾಗಿ ರಚನೆ ಮಾಡಲು ಆಗ್ರಹಿಸಿ, ಶರಣ ಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಕರವೇ ಮನವಿ

ಲಿಂಗಸುಗೂರು ಬ್ರಿಟಿಷ ಅಧಿಕಾರಿಗಳ, ಸೈನಿಕರ, ಪ್ರಮುಖ ಆಡಳಿತ ಕೇಂದ್ರ ಆಗಿತ್ತು.

Jul 27, 2025 - 17:44
Jul 29, 2025 - 19:04
 0  37
ಲಿಂಗಸುಗೂರು  ಜಿಲ್ಲಾ ಕೇಂದ್ರವನ್ನಾಗಿ ರಚನೆ ಮಾಡಲು ಆಗ್ರಹಿಸಿ, ಶರಣ ಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಕರವೇ ಮನವಿ
ಲಿಂಗಸುಗೂರು  ಜಿಲ್ಲಾ ಕೇಂದ್ರವನ್ನಾಗಿ ರಚನೆ ಮಾಡಲು ಆಗ್ರಹಿಸಿ, ಶರಣ ಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಕರವೇ ಮನವಿ
ಲಿಂಗಸುಗೂರು  ಜಿಲ್ಲಾ ಕೇಂದ್ರವನ್ನಾಗಿ ರಚನೆ ಮಾಡಲು ಆಗ್ರಹಿಸಿ, ಶರಣ ಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಕರವೇ ಮನವಿ

ದಿನಾಂಕ: 27/07/2025. ಲಿಂಗಸಗೂರಿನಲ್ಲಿ ಡಾ. ಶರಣ ಪ್ರಕಾಶ್ ಪಾಟೀಲ್.  

ಮಾನ್ಯ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವರು ಮತ್ತು 

ರಾಯಚೂರು ಜಿಲ್ಲಾ ಉಸ್ತುವಾರಿಗಳು ಇವರಿಗೆ.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ವತಿಯಿಂದ 

ಲಿಂಗಸಗೂರು ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚನೆ ಮಾಡಲು ಎಲ್ಲಾ ಅರ್ಹತೆ ಹೊಂದಿದ್ದು ಅಲ್ಲದೇ,

ಈ ಹಿಂದೆ ಪ್ರಾಗೈತಿಕ ಇತಿಹಾಸಿಕ ಕುರುಹು ಕೋಟೆ, ಕೊತ್ತಲಗಳಿಂದ ಜಗತ್ತು ಸೆಳೆಯುವ ಐತಿಹಾಸಿಕ ನೆಲೆಗಳು ಹೊಂದಿದೆ, ಇದು ಪ್ರಮುಖ ಬ್ರಿಟಿಷ ಅಧಿಕಾರಿಗಳ, ಸೈನಿಕರ, ಪ್ರಮುಖ ಆಡಳಿತ ಕೇಂದ್ರ ಆಗಿತ್ತು. 

1905 ರಿಂದ 1948 ಕೂ ಮುಂಚೆ, ಹುಣಸೆಗಿ, ಕಕ್ಕೇರ, ಸುರಪೂರ, ಶಹಾಪೂರ, ಸಿಂಧನೂರು, ಕುಷ್ಟಗಿ, ಒಳಗೊಂಡು ಲಿಂಗಸಗೂರು ಜಿಲ್ಲೆಯಾಗಿತ್ತು. 

ಸ್ವಾತಂತ್ರ್ಯಂ ನಂತರದಲ್ಲಿ ರಾಯಚೂರನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಲಿಂಗಸಗೂರು ಉಪ ವಿಭಾಗವನ್ನಾಗಿ ಮಾಡಲಾಯಿತು. ಲಿಂಗಸಗೂರು ತಾಲೂಕಿನಿಂದ ಜಿಲ್ಲಾ ಕೇಂದ್ರ 100 ಕಿ.ಮೀ. ದೂರದಲ್ಲಿ ತಾಲೂಕಿನ ಕೊನೆಯ ಗ್ರಾಮಗಳು ಸುಮಾರು 150-180 ಕಿ.ಮೀ. ದೂರದಲ್ಲಿದೆ. ಯಾವುದಾದರೂ ಕಛೇರಿ ಕೆಲಸಕ್ಕೆ ಹೋದರೆ 2 ದಿನಗಳು ಬೇಕಾಗುತ್ತದೆ. 

        

     ಇದರಿಂದ ರೈತ ಬಡ ಕೂಲಿಕಾರ್ಮಿಕರಿಗೆ, ವ್ಯಾಪರಸ್ಥರಿಗೆ ಹಾಗೂ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. 

   ಭೌಗೋಳಿಕ ಸಂಪತ್ತು, ಕೃಷ್ಣಾನದಿ ಬಸವಸಾಗರ ಆಣೆಕಟ್ಟು, ಹಟ್ಟಿ ಚಿನ್ನದ ಗಣಿ, ನೀರಾವರಿ, ಮುದಗಲ್ ಗ್ರೆನೇಟ, ಜಲವಿದ್ಯುತ್ ಪವನ ವಿದ್ಯುತ್ ಭೂಗರ್ಭದಲ್ಲಿ ತಾಮ್ರ, ಚಿನ್ನ, ವಜ್ರದಂತೆ ನಿಕ್ಷೇಪಗಳು ಇವೆ.

  ಕೃಷ್ಣಾ ಮೇಲ್ದಂಡೆ ಯೋಜನೆಗಳಿಂದ ನೀರಾವರಿ ಒಳಪಡುತ್ತವೆ, ಜೊತೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ಶುದ್ದ ಚಿನ್ನದ ಉತ್ಪಾದನೆಗೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಹೊಂದಿದೆ ಗಣಿ ಆಳಕ್ಕೆ ಹೋದಂತೆ ವಜ್ರವಿದೆ ಎಂದು ಜರ್ಮಿನಿ ದೇಶದ ಭೂಗರ್ಭ ಶಾಸ್ತ್ರಜ್ಞರು ಹೇಳುತ್ತಾರೆ. ತಾಮ್ರದ ಗಣಿಗಾರಿಕೆಗೆ ಸಂಶೋಧನೆಗಳು ನಡೆದಿದೆ, ಜಲ ಪವನ ವಿದ್ಯುತ್ ಉತ್ಪಾದನೆಗಳಿಂದ ಪ್ರಮುಖ ವಿದ್ಯುತ್ ಪೂರೈಕೆ ಮಾರಾಟದ ಕೇಂದ್ರವಾಗಿದೆ. ಅಂತ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಲೂಕಿನ ಗ್ರಾನೈಟಿಗೆ ಭಾರಿ ಬೇಡಿಕೆ ಇದೆ. ಇದರಿಂದ ಲಿಂಗಸಗೂರು ಸಂಪತ್ತು ಭರಿತ ಶ್ರೀಮಂತ ಭೌಗೋಳಿಕ ಪ್ರದೇಶ.

 ಸಹಾಯಕ ಆಯುಕ್ತ ಕಛೇರಿ, ಡಿ.ವೈ.ಎಸ್.ಪಿ. ಕಛೇರಿ, ಜೆಸ್ಕಾಂ ಜಂಟಿ ಕೃಷಿ ನಿರ್ದೇಶಕರ ಕಛೇರಿ ಇವೆ. ತಹಶೀಲ್, ಜಿಲ್ಲಾ ಕೋರ್ಟ್ ಪೂರ್ಣವಾಗಿ ಇಲ್ಲೇ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. 

ಸರಕಾರದ ಮುಖ್ಯ ಆಡಳಿತ ಕಛೇರಿಗಳು ಇವೆ. ಪ್ರವಾಸಿ ಮಂದಿರ ಮುದ್ದಿನ ಪಟ್ಟಣದ ಮಧ್ಯದಲ್ಲಿ 80 ಎಕರೆ ಮೈದಾನ ಇವೆ. ಅಗತ್ಯವಾದ ಜಮೀನು ಇದೆ. ಸಂರ್ಪಕ ಕೇಂದ್ರ ಲಿಂಗಸಗೂರು ಪಟ್ಟಣವು, ರಾಯಚೂರು, ಬಳ್ಳಾರಿ, ಕೊಪ್ಪಳ, ಕಲಬುರ್ಗಿ, ಯಾದಗಿರಿ, ಭಾಗಲಕೋಟಿ, ಬಿಜಾಪೂರ ಸೇರಿದಂತೆ ಪ್ರಮುಖ ಜಿಲ್ಲೆಗಳಿಂದ 100 ಕಿ.ಮೀ. ಅಧಿಕ ದೂರವಿರುವ ಪ್ರಮುಖ ಸಂರ್ಪಕ ಕೇಂದ್ರ. 2 ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರೈಲ್ವೆ ಮಾರ್ಗ ಪಟ್ಟಣವನ್ನು ಸಂಧಿಸಲಿವೆ. ವರ್ಷದಲ್ಲಿ ರೈಲ್ವೆ ಸಂಪರ್ಕ ಪೂರ್ಣಗೊಳ್ಳಲಿದೆ. ಕಾರಣ ಈ ಎಲ್ಲಾ ಭೌಗೋಳಿಕ ಸಂಪತ್ತು ಹಾಗೂ ಜಿಲ್ಲಾ ಕಛೇರಿಗೆ ಬೇಕಾಗುವ ಸ್ಥಳಾವಕಾಶ ಇರುತ್ತದೆ. 

ಲಿಂಗಸುಗೂರು ಜಿಲ್ಲಾ.

. ಲಿಂಗಸುಗೂರು (ಛವಣಿ) ವಿಜಯನಗರ ಸಾಮ್ರಾಜ್ಯದ ಒಂದು ಪ್ರಮುಖ ಭಾಗ ಆಗಿನ ಕಾಲದಿಂದಲೇ ನಮ್ಮ ಲಿಂಗಸಗೂರು ಹಟ್ಟಿಯಲ್ಲಿ ಚಿನ್ನವನ್ನು ತೆಗೆಯುತ್ತಿದ್ದಾರೆ, ಅದಕ್ಕಾಗಿ ನಮ್ಮ ಲಿಂಗಸಗೂರಿಗೆ ಚಿನ್ನದ ನಾಡು ಎಂದು ಹೆಸರು ಬಂತು.

. 12ನೇ ಶತಮಾನದಲ್ಲಿ ದೇವಗಿರಿ ಯಾದವ ರಾಜನಿಂದ ಜಲದುರ್ಗದ ಕೋಟೆಯನ್ನು ನಿರ್ಮಿಸಿದರು,

. ಲಿಂಗಸಗೂರಿನಲ್ಲಿ ಪ್ರಮುಖವಾಗಿ ನಾಲ್ಕು ಸಂಸ್ಥಾನಗಳಿದ್ದವು.

1. ಗುಂತುಗೋಳ ಸಂಸ್ಥಾನ. 2. ಗುರುಗುಂಟ ಸಂಸ್ಥಾನ, 3. ಸುರಪುರ ರಾಜ್ಯ, 4. ಜಲದುರ್ಗ ಸಂಸ್ಥಾನ,

5. ಮುದಲ್ ನಲ್ಲಿ ಮುತ್ತಿನ ಕೋಟೆ, ಹಾಗೂ ಮಸ್ಕಿಯಲ್ಲಿ ಅಶೋಕ ಶಿಲಾಸನ, ಇವೆಲ್ಲ ಹೊಂದಿದ್ದು ಲಿಂಗಸಗೂರು ಆ ಸಮಯದಲ್ಲಿ ಪ್ರಮುಖ ಜಿಲ್ಲೆ ಯಾಗಿತ್ತು.

. ಲಿಂಗಸಗೂರು ವಿಜಯನಗರ ಮತ್ತು ಆದಿಲ್ ಶಾ ಗಳ ಕಾಲದಲ್ಲಿ, 1904 ಇಸವಿಯ ಮುಂಚೆಯೂ ಲಿಂಗಸಗೂರು ಜಿಲ್ಲೆ ಆಗಿತ್ತು.

. ಲಿಂಗಸಗೂರು ಜಿಲ್ಲೆ ಆಗಿರುವ ಕಾಲದಲ್ಲಿ ಕೊಪ್ಪಳ, ಸಿಂಧನೂರು, ಮಸ್ಕಿ, ಮುದುಗಲ್, ಹಟ್ಟಿ, ಕಕ್ಕೇರ, ಹುಣಸಗಿ, ಸುರಪುರ, ಶಹಪು‌ರ್ ಇವೆಲ್ಲ ಲಿಂಗಸಗೂರು ಜಿಲ್ಲೆಯ ತಾಲೂಕುಗಳಾಗಿದ್ದವು. 

. ನಿಜಾಮರ ಹಾಗೂ ಬ್ರಿಟಿಷರ ಕಾಲದಲ್ಲಿ ಲಿಂಗಸಗೂರು ಸೈನಿಕರ ನೆಲೆಯಾಗಿತ್ತು ಈ ಕಾರಣದಿಂದ ಲಿಂಗಸಗೂರಿಗೆ ಛವಣಿ ಎಂದು ಹೆಸರು ಕರೆಯಲಾಯಿತು.

. ಇವತ್ತಿಗೂ ನಾವು ನೋಡಬಹುದು ಬ್ರಿಟಿಷರ ಕಾಲದಲ್ಲಿ ಕಟ್ಟಿರುವ 101 ಬಾಗಿಲು ಹೊಂದಿದ ಬ್ರಿಟಿಷರ ಅರಮನೆ, ಅದು ಈಗ ಲಿಂಗಸುಗೂರಿನ ಸಹಾಯಕ ಆಯುಕ್ತರ ಕಚೇರಿಯಾಗಿ ಮರುಪಡಿಸಲಾಗಿದೆ,

. 1948 ನಿಜಾಮ ಆಳ್ವಿಕೆ ಹೋಗಿ ಯಾವಾಗ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು ಆಗ ಲಿಂಗಸಗೂರಿಗೆ ಉಪ ವಿಭಾಗ ಉಪಜಿಲ್ಲೆ ಎಂದು ಮಾಡಲಾಯಿತು ಹಾಗೂ ರಾಯಚೂರಿಗೆ ಜಿಲ್ಲೆಯನ್ನಾಗಿ ಮಾಡಲಾಗಿತ್ತು.

. ಲಿಂಗಸಗೂರು ಭೂಗರ್ಭದಲ್ಲಿ ಚಿನ್ನ, ತಾಮ್ರ, ವಜ್ರ ಇದೆ ಎಂದು ಜರ್ಮನಿ ಭೂಗರ್ಭ ತಜ್ಞರು ಹೇಳಿದ್ದಾರೆ,

. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಿಂಗಸೂರು ತಾಲೂಕಿನ ಗ್ರನೆಟ್ಸ್ ಗಳಿಗೆ ಬಾರಿ ಬೇಡಿಕೆ ಇದೆ.

. ಬಸವಸಾಗರ ಅಣೆಕಟ್ಟು ಲಿಂಗಸಗೂರಿನಿಂದ ಬರಿ 25 km ದೂರವಿದೆ.

. ಕೃಷ್ಣಾ ನದಿ ನಮ್ಮ ಲಿಂಗಸಗೂರು ತಾಲೂಕನ್ನು 70% ಭೂಭಾಗವನ್ನು ತಾಕಿ ಹೋಗುತ್ತದೆ.

. ಮಸ್ಕಿ ತಾಲೂಕಿಗೆ ಮಾರಲದಿನ್ನಿ ಡ್ಯಾಮ್ ಇದೆ.

. ಲಿಂಗಸಗೂರು ಹೃದಯ ಭಾಗದಲ್ಲಿ ಸರ್ಕಾರಿ ಜಗ ಬಹಳಷ್ಟು ಇದೆ ಆದ ಕಾರಣ ಲಿಂಗಸುಗೂರು ಜಿಲ್ಲೆ ಮಾಡಲು ಎಲ್ಲಾತರಾದ ಅನುಕೂಲವಿದೆ.

. ಸುಲಭವಾಗಿ ನಗರದ ಒಳಗೆ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಬಹುದು.

. ಲಿಂಗಸಗೂರಿನಲ್ಲಿ ಸಹಾಯಕ ಆಯುಕ್ತ, ಕಚೇರಿ, ಡಿ ವೈ ಎಸ್ ಪಿ ಕಚೇರಿ, ಉಪ ಅಬಕಾರಿ ಇಲಾಖೆ ಕಚೇರಿ, ಅರಣ್ಯ ಇಲಾಖೆ ಕಚೇರಿ, ಗೆಸ್ಕಾಂ ಕಚೇರಿ, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಡಿಸ್ಟ್ರಿಕ್ ಕೋರ್ಟ್, ಹಾಗೂ ಸರ್ಕಾರದ ಪ್ರಮುಖ ಆಡಳಿತ ಕಚೇರಿಗಳಿವೆ.

. ಲಿಂಗಸುಗೂರು ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿದೆ. ಹೆದ್ದಾರಿ 150A (ಜೇವರ್ಗಿ - ಚಾಮರಾಜನಗರ), ಬೆಳಗಾವಿ - ಹುನಗುಂದು - ರಾಯಚೂರು, (EC10-ಪಣಜಿ-ಹೈದರಾಬಾದ್),

. ಲಿಂಗಸಗೂರಿನಿಂದ ಕರ್ನಾಟಕ ದ ಯಾವುದೇ ಜಿಲ್ಲೆಗೆ ಬಸ್ ಮೂಲಕ ಸುಲಭವಾಗಿ ಹೋಗಬಹುದಾಗಿದೆ.

. ಲಿಂಗಸುಗೂರಿಗೆ ಆದಷ್ಟು ಬೇಗನೆ ರೈಲ್ವೆ ಮಾರ್ಗ ಹಾಗೂ ರೈಲ್ವೆ ಸಂಚಾರ ಆಗಲಿದೆ (ಗದಗ್-ವಾಡಿ).

ಈ ಮೇಲಿರುವ ಎಲ್ಲಾ ವಿಷಯವನ್ನು ನೋಡಿದರೆ ಲಿಂಗಸಗೂರು ಮತ್ತೆ ಜಿಲ್ಲೆ ಯಾವತ್ತೋ ಆಗಬೇಕಾಗಿತ್ತು, ಅದು ನಮ್ಮೆಲ್ಮರ ದುರಾದೃಷ್ಟ ಎಂದು ಅನ್ನೋ ಬೇಕು ಅಷ್ಟೇ.

. ಈಗ ಲಿಂಗಸಗೂರು ಜಿಲ್ಲೆಯಾದರೆ, ಸಿಂಧನೂ‌ರ್, ಮಸ್ಕಿ, ಮುದ್ಮಲ್, ಹಟ್ಟಿ ಕಕ್ಕೇರ, ಹುಣಸಗಿ, ಸುರಪುರ್ ಈ ಎಲ್ಲಾ, ತಾಲೂಕುಗಳು ನಮ್ಮ ಜಿಲ್ಲೆಯಲ್ಲಿ ಇರಬೇಕು,

. ಲಿಂಗಸುಗೂರು ಜಿಲ್ಲೆ ಆದರೆ ಜಿಲ್ಲಾ ಆಸ್ಪತ್ರೆ ಆಗುತ್ತದೆ ಅದರಲ್ಲಿ 1000 ಅಥವಾ 1500 ಬೆಡ್ ಗಳಿರುವ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಆಗುತ್ತದೆ ಹಾಗೂ ಎಲ್ಲಾ ತರಹದ ಉಪಕಾರಣಗಳ ಜೊತೆ, ಎಲ್ಲಾ ತರಹದ ವೈದ್ಯರು.

. ವಿದ್ಯಾರ್ಥಿಗಳೆಲ್ಲಾ ಇಲ್ಲೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಬಹುದು, ಕಾಲೇಜ್, ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್, ಅಗ್ರಿ ಕಾಲೇಜ್, ಹಾಗೂ ಇನ್ನುಳಿದ ಎಲ್ಲಾ ಕಾಲೇಜುಗಳು ಇಲ್ಲಿ ಆಗುತ್ತವೆ.

. ಇಲ್ಲೇ ಒಳ್ಳೆ ಒಳ್ಳೆ ಕಂಪನಿಗಳು ಆಗಬಹುದು ಇಲ್ಲ, ನಾವೇ ಒಳ್ಳೆ ಕಂಪನಿ ಸ್ಥಾಪಿಸಬಹುದು,

. ಕೂಲಿ ಕಾರ್ಮಿಕರಿಗೆ ಬೆಂಗಳೂರು, ಪುಣೆ, ಮುಂಬೈಗೆ ದುಡಿಯೋಕೆ ಹೋಗುವಂತವರಿಗೆ ಇಲ್ಲಿ ಕೆಲಸ ಸಿಗುತ್ತದೆ.

. ಎಲ್ಲಾ ಬಿಸಿನೆಸ್ ಗಳು ಬೆಳೆಯುತ್ತವೆ

. ದೊಡ್ಡಮಟ್ಟದ ಕೃಷಿ ಮಾರುಕಟ್ಟೆ ಇಲ್ಲೇ ಸ್ಥಾಪಿಸಬಹುದು.

ಈ ಎಲ್ಲಾ ಭೌಗೋಳಿಕ ಸಂಪತ್ತು ಹಾಗೂ ಜಿಲ್ಲಾ ಕಚೇರಿಗೆ ಬೇಕಾಗುವ ಸ್ಥಳಾವಕಾಶ ಹೇರಳವಾಗಿರುವುದರಿಂದ ಲಿಂಗಸಗೂರು ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚನೆ ಮಾಡಬೇಕೆಂದು ತಮ್ಮಲ್ಲಿ ಎಲ್ಲಾ ಸಾರ್ವಜನಿಕರು ವಿನಂತಿಸಿಕೊಳ್ಳುತ್ತಿದ್ದೇವೆ. 

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷರು ಜಿಲಾನಿ ಪಾಷಾ, ವಿಜಯ ಪೋಳ, ವಿಶ್ವನಾಥ್ ನಾಯ್ಡು, ತಿಮ್ಮನ ಗೌಡ, ಅಜೀಜ್ ಪಾಷ, ಅಲ್ಹುದ್ದೀನ್ ಬಾಬಾ, ಬಸವರಾಜ್ ಪ್ರಭುಗೌಡ, ನನ್ನ ಸಾಬ್, ಪರಮಣ್ಣ ಮತ್ತು ಇನ್ನಿತರರಿದ್ದರು

What's Your Reaction?

like

dislike

love

funny

angry

sad

wow