ಮುಖ್ಯ ನ್ಯಾಯಮೂರ್ತಿ ಮೇಲಿನ ದಾಳಿ ಯತ್ನಕ್ಕೆ ರಾಯಚೂರು ನ್ಯಾಯವಾದಿಗಳ ಸಂಘ ಖಂಡನೆ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ, ವಕೀಲನಿಂದ ಶೂ ಎಸೆತ- advocate throws shoes at cji br gavai

Oct 8, 2025 - 18:17
Oct 8, 2025 - 18:18
 0  51
ಮುಖ್ಯ ನ್ಯಾಯಮೂರ್ತಿ ಮೇಲಿನ ದಾಳಿ ಯತ್ನಕ್ಕೆ ರಾಯಚೂರು ನ್ಯಾಯವಾದಿಗಳ ಸಂಘ ಖಂಡನೆ
ಮುಖ್ಯ ನ್ಯಾಯಮೂರ್ತಿ ಮೇಲಿನ ದಾಳಿ ಯತ್ನಕ್ಕೆ ರಾಯಚೂರು ನ್ಯಾಯವಾದಿಗಳ ಸಂಘ ಖಂಡನೆ
ಮುಖ್ಯ ನ್ಯಾಯಮೂರ್ತಿ ಮೇಲಿನ ದಾಳಿ ಯತ್ನಕ್ಕೆ ರಾಯಚೂರು ನ್ಯಾಯವಾದಿಗಳ ಸಂಘ ಖಂಡನೆ

ರಾಯಚೂರು : ಇತ್ತೀಚಿಗೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಲಯದ ಕಲಾಪ ನಡೆಸುವ ವೇಳೆ ಪ್ರಕರಣದಲ್ಲಿ ನ್ಯಾಯ‌ ಸಿಕ್ಕಲ್ಲವೆಂದು ಅಸಮಾಧಾನದಿಂದ ಅವರ ಮೇಲೆ ಕೋಪಗೊಂಡು ಶೂ ಎಸೆಯುವ ಯತ್ನ ಮಾಡಿರುವ ಕರಾಳ ಘಟನೆಯನ್ನು  ರಾಯಚೂರು ನ್ಯಾಯವಾದಿಗಳ ಸಂಘ ತೀವ್ರವಾಗಿ ಖಂಡಿಸಿದೆ. ಈ ಕುರಿತು ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸಭೆ ನಡೆಸಿ‌ ಖಂಡನಾ ನಿರ್ಣಯವನ್ನು ಕೈಗೊಂಡು‌, ಪದಾಧಿಕಾರಿಗಳು ಮಾತನಾಡಿ ಇದು ಭಾರತ ದೇಶದ ಜನತೆಯ‌ ಮತ್ತು ನ್ಯಾಯಾಂಗ, ಸಂವಿಧಾನದ ಮೇಲಾದ ದಾಳಿಯಾಗಿದೆ ಎಂದರು.‌‌ ನಂತರ ಒಂದು ದಿನ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಮುಖ್ಯ ನ್ಯಾಯಾಧೀಶರಿಗೆ ಬೆಂಬಲವನ್ನು ಸೂಚಿಸಿ ಆ ವಕೀಲನ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟಪತಿಯವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಲ್ಲಿಕಾರ್ಜುನ ವಕೀಲರು, ಉಪಾಧ್ಯಕ್ಷ ನಜೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ಖಜಾಂಚಿ ಸೈಯದ್ ನವಾಜ್ ಪಾಷ,  ಹಿರಿಯ ವಕೀಲರಾದ ಮಸ್ಕಿ ನಾಗರಾಜ,  ಎಸ್.ಜಿ. ಮಠ, ವೈ ಶ್ರೀಕಾಂತ್ ರಾವ್, ರಾಜಾ ಪಾಂಡುರಂಗ ನಾಯಕ, ಎಚ್. ಜಗದೀಶ್, ಅಂಬಾಪತಿ ಪಾಟೀಲ್, ಎನ್‌ . ಶಿವಶಂಕರ್, ಜಿ.ಎಸ್. ವೀರಭದ್ರಪ್ಪ, ಕರುಣಾಕರ್ ಕಟ್ಟಿಮನಿ, ಜೆ.ಪಿ‌ ಮಾಡಗಿರಿ, ಬಸವರಾಜ ಚಿಕ್ಕಸೂಗೂರು, ಈರಣ್ಣ, ಎಚ್, ದೊಡ್ಡಪ್ಪ, ಜಿ.ಟಿ. ರೆಡ್ಡಿ, ಮೊಕ್ಷರಾಜ್, ಹನುಮಂತಪ್ಪ ಅತ್ತನೂರು, ನಿಂಗಪ್ಪ ಗಲಗ, ತಾಯಪ್ಪ ಭಂಡಾರಿ, ಡಿಜಿಪಿ, ರಾಮನಗೌಡ ಮರ್ಚೆಟಾಳ್, ಮುನ್ನಾ ಕುಮಾರ್, ಮೊಹಮ್ಮದ್ ಸುಲ್ತಾನ್, ಶಿವಕುಮಾರ ಮ್ಯಾಗಳಮನಿ, ಜುನೈದ್ ಸೇರಿದಂತೆ ಅನೇಕರಿದ್ದರು.

What's Your Reaction?

like

dislike

love

funny

angry

sad

wow