ಮರಳು ಟಿಪ್ಪರ್ಗಳ ಓಡಾಟ ಬುದ್ದಿನ್ನಿ ಸೇತುವೆ, ಬೀರುಕು ಸ್ಥಗಿತಗೊಂಡ ಸಂಚಾರ.!
ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಬಳಗನೂರು ಪಟ್ಟಣ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು ತಿಂಗಳುಗಳಿಂದ ಮರಳು ಸಾಗಾಣಿಕೆ ಅವ್ಯಾಹತವಾಗಿ ಸಾಗುತ್ತಿರುವ ಪರಿಣಾಮ ರವಿವಾರ ಸಂಜೆ ಬುದ್ದಿನ್ನಿ ಗ್ರಾಮದ ಬಳಿಯ ಸೇತುವೆ ಬಿರುಕುಬಿಟ್ಟು ಉರುಳಿಬೀಳುವ ಹಂತ ತಲುಪಿ ಬಳಗಾನೂರು,ಪೋತ್ನಾಳ್ ಮಾರ್ಗ ವಾಹನ ಸಂಚಾರ ಸ್ಥಗಿತವಾಗಿದೆ.
ಸುಮಾರು ತಿಂಗಳುಗಳಿಂದ ಅಕ್ರಮ ಮರಳು ದಂದೆ ಹೆಗ್ಗಿಲ್ಲದೆ ಸಾಗಿದೆ,ಹಲವಾರು ಬಾರಿ ಮಾಧ್ಯಮಗಳಲ್ಲಿ ವಿಸ್ತ್ರುತ ವರದಿಗಳು ಪ್ರಸಾರವಾಗಿದ್ದರೂ,ದೂರುಗಳನ್ನು ಮನವಿಪತ್ರಗಳನ್ನು ನೀಡಿದ್ದರೂ ಅಧಿಕಾರಿಗಳಾಗಲಿ,ಜನಪ್ರತಿನಿಧಿಗಳಾಗಲಿ ಕ್ಯಾರೆ ಎನ್ನುತ್ತಿಲ್ಲ.
ನಿಗದಿಗಿಂತ ದುಪ್ಪಟ್ಟು ಮರುಳನ್ನು ಹೊತ್ತ ಟಿಪ್ಪರುಗಳು ನಿರಂತರ ಓಡಾಡುತ್ತಿರುವುದರಿಂದ ರಸ್ತೆ ಪಕ್ಕದ ಮನೆಗಳು ಬಿರುಕುಬಿಟ್ಟು ಬೀಳುವ ಹಂತ ತಲುಪಿವೆ ಇದರಿಂದ ಜನ ಭಯಭೀತರಾಗಿದ್ದಾರೆ.
ಕೂಡಲೆ ಅಧಿಕಾರಿಗಳು,ಜನಪ್ರತಿನಿಧಿಗಳು ಈ ಅಕ್ರಮ ಮರಳು ದಂದೆಯನ್ನು ಶಾಶ್ವತವಾಗಿ ರದ್ದುಗೊಳಿಸದಿದ್ದರೆ ಗ್ರಾಮಸ್ತರು,ಹೋರಾಟಗಾರರು ಸೇರಿ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆಂದು ಹೋರಾಟಗಾರರಾದ ಎಮ್,ಗಂಗಾಧರ, ಹನುಮಂತ್ರಾಯ್ ಕಟ್ಟಿಮನಿ, ಮಹೇಶ್ ಗೌಡ್ರು ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಸಾರ್ವಜನಿಕರೂ ಕೂಡ ಭಾರಿ ಟಿಪ್ಪರುಗಳ ಓಡಾಟದಿಂದ ದೂಳಾವರಿಸಿ ಅಸ್ತಮಾ ರೋಗಿಗಳು ಪರದಾಡುವಂತಾಗಿದೆ,ಜೊತೆಗೆ ಆರೋಗ್ಯವಂತರಿಗೂ ರೋಗಗಳು ಹರಡುತ್ತಿವೆ.ಈಗ ಸೇತುವೆ ಶಿಥಿಲಗೊಂಡು ಸಂಚಾರವೇ ನಿಂತಿದೆ.
ಇಲ್ಲಿ ಯಾರೂ ಹೇಳೋರು ಕೇಳೋರು ಇಲ್ಲದಂತಾಗಿದೆ.ನಾವು ದಿನನಿತ್ಯದ ವಹಿವಾಟಿಗಾಗಿ ಪ್ರಯಾಣಿಸುವುದು ಹೇಗೆ? ಇದಕ್ಕೆ ಶಾಶ್ವತ ಪರಿಹಾರ ನೀಡದಿದ್ದರೆ ಪ್ರತಿಭಟನೆಗಿಳಿಯುವುದು ಅನಿವಾರ್ಯವೆಂದು ಜನ ಆಕ್ರೋಶವನ್ನು ಹೊರಹಾಕಿದರು.
ಇಷ್ಟೆಲ್ಲಾ ರಾದ್ದಾಂತಗಳಾಗುತ್ತಿದ್ದರೂ ಅಧಿಕಾರಿಗಳು,ಜನಪ್ರತಿನಿಧಿಗಳು ಮೌನಕ್ಕೆ ಜಾರಿರುವುದು ಹಲವು ಅನುಮಾನಗಳಿಗೆಡೆಮಾಡಿಕೊಟ್ಟಿದೆ.ಜನರು ದಂಗೆ ಏಳುವ ಮುನ್ನ ಆಡಳಿತ ಎಚ್ಚೆತ್ತುಕೊಳ್ಳುವುದೇ ಕಾದು ನೋ
ಡಬೇಕಿದೆ.
What's Your Reaction?



