ಮಸ್ಕಿ ಯಲ್ಲಿ ಗಾಂಜಾ ವೆಸನಿ ಯುವಕನ ಪುಂಡಾಟ, ಪುರಸಭೆ ಸಿಬ್ಬಂದಿ ಮೇಲೆ ಹಲ್ಲೆ ಪೊಲೀಸ್ ಠಾಣೆಯಲ್ಲಿ ದೂರು : ಗಾಂಜಾವೆಸನಿ  ಅಂದರ್!

ಹೌದು ಪ್ರೀಯ ವೀಕ್ಷಕರೇ ಮಸ್ಕಿ ಪಟ್ಟಣದಲ್ಲಿ ಗಾಂಜಾ, ಡ್ರಗ್ಸ್, ಅಫೀಮು, ಮುಂತಾದ ಮಾದಕ ವಸ್ತುಗಳ ಮಾರಾಟ ಮತ್ತು ಪೂರೈಕೆ ಜಾಲ ಸಕ್ರಿಯವಾಗಿ  ಯುವಕರನ್ನ ಗಾಂಜಾ ವೆಸನಿಗಳನ್ನಾಗಿ  ಮಾಡಿ ಯುವಕರನ್ನು ದಾರಿ ತಪ್ಪಿಸುತ್ತಿದೆ.

Aug 7, 2025 - 05:05
 0  24

ಜಯಪ್ರಸಾದ್ ಎನ್ನುವ  ಯುವಕ ದಿನಾಂಕ 6 ಬುದುವಾರ ಬೆಳಗ್ಗೆ  ಗಾಂಜ ಸೇವಿಸಿ   ರಸ್ತೆಗಳಿದ್ದು  ಮಸ್ಕಿ ಪುರಸಭೆಯ ಸಪಾಯಿ ಕರ್ಮಚಾರಿ ವಾಹನ ಚಾಲಕನ ಮೇಲೆ  ಮಾರಣಾಂತಿಕ ಹಲ್ಲೆ  ಮಾಡಿದ್ದಲ್ಲದೆ ರಸ್ತೆ ಮೇಲೆ ಓಡಾಡುವ  ಸಾರ್ವಜನಿಕರಿಗೆ ಹಾಗು ಆರಕ್ಷಕ ಸಿಬ್ಬಂದಿಗಳಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿ   ಸಾರ್ವಜನಿಕರಲ್ಲಿ ಭಯಭೀತಿಯನ್ನು ಹುಟ್ಟಿಸಿ ಆತಂಕವನ್ನು ಸೃಷ್ಟಿಮಾಡಿ  ಪುಂಡಾಟ ಮೆರೆದಿದ್ದಾನೆ. 

 ವಿಚಾರ ತಿಳಿದ ಸಮುದಾಯದ ಮುಖಂಡರು ಪುರಸಭೆ ಸಿಬ್ಬಂದಿಗಳು  ಪೊಲೀಸ್ ಠಾಣೆಗೆ ಹೋಗಿ  ಪಿಎಸ್ಐ ಮುದ್ದು ರಂಗಸ್ವಾಮಿ  ಅವರಿಗೆ ಮಾಹಿತಿ ನೀಡಿ ಮಸ್ಕಿ ಪಟ್ಟಣದಲ್ಲಿ ಇತ್ತೀಚಿಗೆ ಕೆಲವು ದಿನಗಳಿಂದ ಗಾಂಜಾ, ಡ್ರಗ್ಸ್, ಅಫೀಮು ಮುಂತಾದ ಮಾದಕ ವಸ್ತುಗಳ ಮಾರಾಟ ಮತ್ತು ಪೂರೈಕೆ ಹೆಚ್ಚಾಗಿದೆ. ಇದರಿಂದಾಗಿ ಹಲವಾರು ಯುವಕರು ಇಂತಹ ದುಶ್ಚಟ

ಗಳಿಗೆ ಬಲಿಯಾಗುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಜನಸಾಮಾನ್ಯರು ರಸ್ತೆಯ ಮೇಲೆ ಭಯಬೀತಿಯಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಎಂದು ದಲಿತ ಪರ ಮುಖಂಡರು ಸಾರ್ವಜನಿಕರು ಮಸ್ಕಿ ಪೊಲೀಸ್ ಠಾಣೆ ಪಿ ಎಸ್ಐ ಅವರಿಗೆ ಮನವಿ ಸಲ್ಲಿಸಿ

 ಇಂಥಹ ಮಾದಕ ವಸ್ತುಗಳ ಪೂರೈಕೆ ಮತ್ತು ಮಾರಾಟ ದೊಡ್ಡ ಜಾಲ ಮಸ್ಕಿ ಯಲ್ಲಿ ಸಕ್ರಿಯ ವಾಗಿದೆ. ಆದ ಕಾರಣ ಇಂಥಹ ಮಾದಕ ವಸ್ತುಗಳ ಮಾರಾಟ ಮತ್ತು ಪೂರೈಕೆಯ ಜಾಲವನ್ನು ಬೇದಿಸಿ, ತಪ್ಪಿತಸ್ಥರನ್ನು ಹೆಡೆಮುರಕಟ್ಟಿ  ತಮ್ಮ ಇಲಾಖೆಯಿಂದ    ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದರ ಜೊತೆಗೆ  ಸಮಾಜದಲ್ಲಿ ಸ್ವಾಸ್ಥ್ಯ  ಸಾಮರಸ್ಯ ಕಾಪಾಡಬೇಕೆಂದು  ಮನವಿ ಪತ್ರ ಸಲ್ಲಿಸಿದ್ದಾರೆ.   

 ಮಾಹಿತಿ ತಿಳಿದ ಪಿಎಸ್ಐ ಕೂಡಲೇ ಗಾಂಜಾ ವೆಸನಿ ಯುವಕನನ್ನು  ವಿಚಾರಣೆಗೆ ಒಳಪಡಿಸಿ   ದೂರು ದಾಖಲಿಸಿಕೊಂಡು  ತನಿಖೆ ಕೈಗೊಂಡಿದ್ದಾರೆ.

What's Your Reaction?

like

dislike

love

funny

angry

sad

wow