ಯುವ ಸ್ಪಂದನ ಅರಿವು ಕಾರ್ಯಕ್ರಮ
ಹಾಲಾಪೂರು ಕಾಲೇಜಿನಲ್ಲಿ ಯುವ ಸ್ಪಂದನ ಅರಿವು
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ರಾಯಚೂರು ಕರ್ನಾಟಕ ಸರ್ಕಾರದ ಅನುದಾನಿತ ಯೋಜನೆ ಅನುಷ್ಠಾನ ಜನ ಆರೋಗ್ಯ ಕೇಂದ್ರ ಎಪಿಡೀಮಿಯಾಲಜಿ ವಿಭಾಗ ನಿಮ್ಹಾನ್ಸ್ ಬೆಂಗಳೂರು ಸಹಯೋಗದೊಂದಿಗೆ ಮಸ್ಕಿ ತಾಲೂಕಿನ ಹಾಲಾಪೂರ ನ ಜನನಿ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮ ಜರುಗಿತು ಕಾರ್ಯಕ್ರಮ ಉದ್ದೇಶಿಸಿ ಯುವ ಪರಿವರ್ತಕರಾದ ಲಕ್ಷ್ಮಣ ಮಡಿವಾಳ ರವರು ವಿದ್ಯಾರ್ಥಿ ಸಮೂಹಕ್ಕೆ ಶಿಕ್ಷಣ.ಸಂಬಂಧಗಳು.ಲಿಂಗ ಮತ್ತು ಲಿಂಗತ್ವ. ಆರೋಗ್ಯ ಮತ್ತು ಜೀವನ ಶೈಲಿ. ಸುರಕ್ಷತೆ.ಭಾವನೆಗಳು ಹಾಗೂ ನಾಯಕತ್ವದ ಗುಣಗಳನ್ನು ಬೆಳಸಿಕೊಂಡು ಉತ್ತಮ ಪ್ರಜೆಗಳಾಗಲು ಹಾಗೂ ಹಲವಾರು ವಿಷಯಗಳನ್ನು ಮಕ್ಕಳಿಗೆ ತಿಳಿಸಿದರು.ನಂತರ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ಬಳಗ ಸೇರಿ ಯುವ ಪರಿವರ್ತಕರಾದ ಲಕ್ಷ್ಮಣ ಮಡಿವಾಳ ರವರಿಗೆ ಸನ್ಮಾನಿಸಿ ಗೌರವಿಸಿದರು.
What's Your Reaction?






