ರೈತರಿಗೆ 2025- 26ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ

ಮಸ್ಕಿ ಕೃಷಿ ಇಲಾಖೆಯಿಂದ ರೈತರಿಗೆ NSC TS-3R ತೊಗರಿ ಹಾಗೂ GK-2002 ಸೂರ್ಯಕಾಂತಿ ಬೀಜ ಸಂಪೂರ್ಣ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಉಪ ಕೃಷಿ ನಿರ್ದೇಶಕರು ನಯೀಮ್ ಹುಸೇನ್ ಸಹಾಯಕ ಕೃಷಿ ನಿರ್ದೇಶಕರು ಮಲ್ಲಿಕಾರ್ಜುನ ಹಾಗೂ ಅಮರೇಗೌಡ ಕೃಷಿ ಅಧಿಕಾರಿ ವೈ ಬಿ ಕ್ಷತ್ರೀ ತಿಳಿಸಿದರು. ರೈತರು ತಮ್ಮ ಅಗತ್ಯ ದಾಖಲೆಗಳನ್ನು ನೀಡಿ ಮುಂಗಾರು ಹಂಗಾಮಿನ ಬೀಜ ಪಡೆದರು. ಈ ವೇಳೆ ರೈತ ಸಂಪರ್ಕ ಕೇಂದ್ರ ಮಸ್ಕಿ ಸಿಬ್ಬಂದಿಗಳು ಪ್ರಸಾದ್, ರಾಜೇಶ್, ಸಿದ್ದರಾಮೇಶ, ರಮೇಶ, ಸೇರಿದಂತೆ ವಿವಿಧ ಗ್ರಾಮದ ರೈತರು ಉಪಸ್ಥಿತರಿದ್ದರು
What's Your Reaction?






