ರಾಯಚೂರಿನ ಶಕ್ತಿನಗರದಲ್ಲಿ ಮಾಕ್ ಡ್ರಿಲ್ ಕವಾಯಿತು

ಆಪರೇಷನ್‌ ಅಭ್ಯಾಸ್" (Operation Abhyas) ನಾಗರಿಕ ರಕ್ಷಣಾ ಅಣಕು ಪ್ರದರ್ಶನ (Civil Defence Excercise Mock Drill) ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಅಗ್ನಿಶಾಮಕ ದಳ, ಜಿಲ್ಲಾ ಆರೋಗ್ಯ ಇಲಾಖೆ. ಎಸ್.ಡಿ.ಆ‌ರ್.ಎಫ್. ಸಿ.ಐ.ಎಸ್.ಎಫ್. ಎನ್.ಸಿ.ಸಿ ಮತ್ತು ಎನ್.ಎಸ್.ಎನ್ ಸ್ವಯಂ ಸೇವಕರು ಭಾಗವಹಿಸಿ ಮಾಕ್ ಡ್ರಿಲ್ ಅಣುಕು ಪ್ರದರ್ಶನ

May 10, 2025 - 07:07
 0  38
ರಾಯಚೂರಿನ ಶಕ್ತಿನಗರದಲ್ಲಿ ಮಾಕ್ ಡ್ರಿಲ್ ಕವಾಯಿತು
ರಾಯಚೂರಿನ ಶಕ್ತಿನಗರದಲ್ಲಿ ಮಾಕ್ ಡ್ರಿಲ್ ಕವಾಯಿತು
ರಾಯಚೂರಿನ ಶಕ್ತಿನಗರದಲ್ಲಿ ಮಾಕ್ ಡ್ರಿಲ್ ಕವಾಯಿತು

ರಾಯಚೂರು: ಪ್ರಸ್ತುತ, ದೇಶದಲ್ಲಿ ಯುದ್ಧ ಸಂಭವಿಸುವ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಮಾನ್ಯ ಕೇಂದ್ರ ಗೃಹಸಚಿವಾಲಯ ಭಾರತ ಸರಕಾರವು ಇಡಿ ಭಾರತ ದೇಶದಲ್ಲಿ 244 ಜಿಲ್ಲೆಗಳನ್ನು ಅತಿ ಸೂಕ್ಷ್ಮ ಜಿಲ್ಲೆಗಳೆಂದು ಗುರುತಿಸಲಾಗಿದ್ದು, ಈ ಪೈಕಿ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು, ಮಲ್ಲೇಶ್ವರಂ ಹಾಗೂ ರಾಯಚೂರು ಈ ಮೂರು ಜಿಲ್ಲೆಗಳನ್ನು ಅತಿ ಸೂಕ್ಷ್ಮ ಜಿಲ್ಲೆಗಳೆಂದು ಗುರುತಿಸಿರುತ್ತಾರೆ. ಮಾನ್ಯ ಕೇಂದ್ರ ಗೃಹಸಚಿವಾಲಯ ಭಾರತ ಸರಕಾರ ಅವರ ನಿರ್ದೇಶನದಂತೆ ಈ ಜಿಲ್ಲೆಗಳು ಮುಂದೆ ಆಗಬಹುದಾದ ಎಲ್ಲಾ ರೀತಿಯ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸನ್ನದ್ದರಾಗಿರಲು ನಾಗರಿಕ ರಕ್ಷಣಾ ಅಣುಕು ಪ್ರದರ್ಶನ (Civil Defence Excersise/Mock Drill) ಕಾರ್ಯಕ್ರಮವನ್ನು 'ಅಪರೇಷನ್ ಅಭ್ಯಾಸ್" (Operation Abhyas)ಆಯೋಜಿಸಲು ನಿರ್ದೇಶಿಸಿರುತ್ತಾರೆ. ಎಂದು 

ರಾಯಚೂರ ಜಿಲ್ಲೆಯ ಶಕ್ತಿನಗರದ ರಾಯಚೂರು ವಿದ್ಯುತ್‌ ಶಾಖೋತ್ಪನ್ನ ಕೇಂದ್ರದ (RTPS) ಹೆಲಿಪ್ಯಾಡ್ ಆವರಣದಲ್ಲಿ 'ಆಪರೇಷನ್‌ ಅಭ್ಯಾಸ್‌' (Operation Abhyas) ನಾಗರಿಕ ರಕ್ಷಣಾ ಅಣಕು ಪ್ರದರ್ಶನ (Civil Defence Excercise/Mock Drill) & ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಅಗ್ನಿಶಾಮಕ ದಳ ಮತ್ತು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಮೇ 09ರಂದು ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ಕವಾಯಿತು ನಡೆಯಿತು. ಶಕ್ತಿನಗರ ಹಾಗೂ ಸುತ್ತಲಿನ ಗ್ರಾಮಸ್ಥರಲ್ಲಿ, ಒಂದು ವೇಳೆ ಯುದ್ಧ ಸಂಭವಿಸಿದಲ್ಲಿ ಅಥವಾ ಇಂತಹ ಯಾವುದೇ ಘಟನೆ ಜರುಗಿದ್ದಲ್ಲಿ ಭಯಭಿತರಾಗದೇ, ಯುದ್ಧದ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಲು ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳನ್ನು ಅಣಕು ಪ್ರದರ್ಶನದ ಮೂಲಕ ವಿವರಿಸಿ ಶಕ್ತಿನಗರ ಹಾಗೂ ಸುತ್ತಲಿನ ಗ್ರಾಮಸ್ಥರಲ್ಲಿ ಆತ್ಮಸ್ಥೆರ್ಯ ತುಂಬುವಂತಹ ಕಾರ್ಯಕ್ರಮವಾಯಿತು.

ಈ ಒಂದು 'ಆಪರೇಷನ್‌ ಅಭ್ಯಾಸ್" (Operation Abhyas) ನಾಗರಿಕ ರಕ್ಷಣಾ ಅಣಕು ಪ್ರದರ್ಶನ (Civil Defence Excercise Mock Drill) ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಅಗ್ನಿಶಾಮಕ ದಳ, ಜಿಲ್ಲಾ ಆರೋಗ್ಯ ಇಲಾಖೆ. ಎಸ್.ಡಿ.ಆ‌ರ್.ಎಫ್. ಸಿ.ಐ.ಎಸ್.ಎಫ್. ಎನ್.ಸಿ.ಸಿ ಮತ್ತು ಎನ್.ಎಸ್.ಎನ್ ಸ್ವಯಂ ಸೇವಕರು ಭಾಗವಹಿಸಿ ಮಾಕ್ ಡ್ರಿಲ್ ಅಣುಕು ಪ್ರದರ್ಶನ ಮೂಲಕ ವಿವರಿಸಿ ಶಕ್ತಿನಗರ ಹಾಗೂ ಸುತ್ತಲಿನ ಗ್ರಾಮಸ್ಥರಲ್ಲಿ ಆತ್ಮಸ್ಥೆರ್ಯ ತುಂಬುವಂತಹ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ನತೀಶ್ ಕೆ ತಿಳಿಸಿದರು.

What's Your Reaction?

like

dislike

love

funny

angry

sad

wow