ಮಸ್ಕಿ : ಪಟ್ಟಣದ ಶಕ್ತಿ ದೇವತೆ ಶ್ರೀ ಕಾಳಿಕಾದೇವಿಯ 12ನೇ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು.
ಮಸ್ಕಿ,23ಜ :ಶುಕ್ರವಾರ ಮುಂಜಾನೆ ನಾನಾ ಪುಷ್ಪಾಲಂಕಾರದ ಶೃಂಗಾರಗೊಂಡ ಶ್ರೀ ಕಾಳಿಕಾದೇವಿ ಪಲ್ಲಕ್ಕಿಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ವಿಶ್ವಕರ್ಮ ವೃತ್ತ,ಅಶೋಕ ವೃತ್ತ,ಆಂಜನೇಯ ದೇವಸ್ಥಾನಕ್ಕೆತಲುಪಿ,ಮಹಾಮಜ್ಜನಕ್ಕೆ ಮುತ್ತೈದೆಯರು ಗಂಗಾ ಜಲ ಪೂಜಿಸಿ,ಕುಂಭ ಹೊತ್ತು ಮಹಿಳೆಯರು,ಮೆರವಣಿಗೆಯಲ್ಲಿ
ಪುರವಂತಿಕೆ ಕಲಾತಂಡದವರು ಹೊಡಪು ಹೇಳುತ್ತ ಪುನ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾಗಿ ಅಶೋಕ ವೃತ್ತ, ಅಗಸಿ,ಕಲೀಲ ವೃತ್ತ, ದೈವದ ಕಟ್ಟೆ, ಪ್ರಮುಖ ಬೀದಿಗಳ ಮುಖಾಂತರ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ತಲುಪಿ ಶ್ರೀ ಕಾಳಿಕಾದೇವಿಗೆ ಪಂಚಾಮೃತಾಭಿಷೇಕ ಹಾಗೂ ನವಗ್ರಹ ಪೂಜೆ, ಹೋಮ, ಹವನ, ಮಂಗಳಾರತಿ ನೆರವೇರಿಸಿದರು.
ಮಸ್ಕಿ ಪಟ್ಟಣದ ವಿಶ್ವಕರ್ಮ ಸಮಾಜದವರು,ಶ್ರೀ ಕಾಳಿಕದೇವಿಯ ಭಕ್ತರು ಮತ್ತು ನಾನಾ ಕಡೆಯಿಂದ ಆಗಮಿಸಿದ್ದ ವಿಶ್ವಕರ್ಮ ಸಮಾಜದವರು ಭಕ್ತಿ ಸಮರ್ಪಿಸಿ ಪ್ರಸಾದ ಸವಿದರು.
What's Your Reaction?



