ಭೂಸ್ವಾದಿನಕ್ಕೆ ದೊರೆಯದ ಭೂ ಪರಿಹಾರ ಹಣ; ಕಚೇರಿ ಜಪ್ತಿ
ವರದಿ :ಅಲಿ ಮಕಾನದಾರ

ಬಸವನಬಾಗೇವಾಡಿ ತಾಲೂಕಿನ ಮುತ್ತಗಿಯ ಇಬ್ಬರು ರೈತರಿಂದ ಭೂಸ್ವಾಧೀನ ಪಡಿಸಿಕೊಂಡ ಜಮೀನಿಗೆ ನ್ಯಾಯಾಲಯ ಆದೇಶಿಸಿದ ಪರಿಹಾರ ನೀಡದ ಕಾರಣ ಇಲ್ಲಿಯ ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಆಲಮಟ್ಟಿ. ಕಚೇರಿಯ ಸಾಮಗ್ರಿ ಜಪ್ತಿ ಕಾರ್ಯ ಗುರುವಾರ ನಡೆಯಿತು.
ಮುತ್ತಗಿಯ ರೈತ ಸದಾಶಿವಪ್ಪ ಗೊಲ್ಲರ ಅವರ 1 ಎಕರೆ ಭೂಮಿಗೆ 55,78,432 ರೂ ಹಾಗೂ ಅದೇ ಗ್ರಾಮದ ಚಂದನಗೌಡ ಈರಗೊಂಡ ಅವರಿಂದ ವಶಪಡಿಸಿಕೊಂಡ 1 ಎಕರೆ 32 ಗುಂಟೆ ಜಮೀನಿಗೆ 1,16,13,348 ರೂ ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿತ್ತು.
ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡಲು ವಿಫಲವಾದ ಹಿನ್ನಲೆಯಲ್ಲಿ
ವಿಜಯಪುರ ಮೊದಲನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶದಂತೆ ಗುರುವಾರ, ಇಲ್ಲಿಯ ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಐದು ಕಂಪ್ಯೂಟರ್ ಗಳನ್ನು ನ್ಯಾಯಾಲಯದ ಬೇಲಿಫ್ ಸಮ್ಮುಖದಲ್ಲಿ ಜಪ್ತಿ ಮಾಡಲಾಗಿದೆ ಎಂದು ರೈತರ ಪರ ವಕೀಲ ಎಸ್.ಬಿ. ಪಾಟೀಲ ತಿಳಿಸಿದರು.
ಬೇಲಿಫ್ ಗೋಂಧಳಿ ಇದ್ದ
ರು.
What's Your Reaction?






