ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಆಣೆಕಟ್ಟಿಗೆ ಸೆಪ್ಟೆಂಬರ್ 6 ಶನಿವಾರ ಮುಖ್ಯಮಂತ್ರಿ ಬಾಗಿನ
ವರದಿ :ಅಲಿ ಮಕಾನದಾರ
“ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಆಣೆಕಟ್ಟಿಗೆ ಸೆಪ್ಟೆಂಬರ್ 6 ಶನಿವಾರ ಮುಖ್ಯಮಂತ್ರಿ ಬಾಗಿನ ಮುಂಜಾಗ್ರತ ಕ್ರಮಕ್ಕೆ ಬಿಗಿ ಬಂದುಬಸ್ತ್ ಕ್ರಮಕ್ಕೆ ಸಕಲ ಸಿದ್ಧತೆ “
ಮುಖ್ಯಮಂತ್ರಿ ಸಿದ್ಧರಾಮಯ್ಯ ಸೆಪ್ಟೆಂಬರ್ 6 ಶನಿವಾರ ಮಧ್ಯಾಹ್ನ 12 ಕ್ಕೆ ಕೃಷ್ಣೆಗೆ ಆಲಮಟ್ಟಿಯಲ್ಲಿ ಬಾಗಿನ ಅರ್ಪಿಸಲಿದ್ದಾರೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ರೈತರು, ಸಾರ್ವಜನಿಕರಿಗೆ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಪ್ರವಾಸಿ ಮಂದಿರದ ಬಲಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮನವಿ ಸಲ್ಲಿಸುವವರು ಮೊದಲೇ ಸ್ಥಳೀಯ ಠಾಣೆಯಲ್ಲಿ ಅನುಮತಿ ಪಡೆಯಬೇಕು, ಒಂದು ಮನವಿಗೆ ನಾಲ್ವರಿಗೆ ಅವಕಾಶ ನೀಡಲಾಗುತ್ತದೆ ಎಂದರು.
ಈ ಬಾರಿ ಭದ್ರತೆ ಹೆಚ್ಚಿಸಲಾಗಿದ್ದು ಸಾರ್ವಜನಿಕ ಪ್ರವೇಶ ನಿಷೇಧವಿದೆ ಎಂದರು.
ಬೆಳಗಾವಿ ಐಜಿಪಿ ಬಂದೋಬಸ್ತ ನೇತೃತ್ವ ವಹಿಸಲಿದ್ದಾರೆ. ಇಬ್ಬರು ಎಸ್.ಪಿ, ಆರು ಜನ ಡಿವೈಎಸ್ ಪಿ, 13 ಸಿಪಿಐ, 32 ಪಿಎಸ್ಐ, 24 ಎಎಸ್ಐ, 90 ಜನ ಹೆಡ್ ಕಾನ್ಸಟೇಬಲ್, 242 ಪೊಲೀಸ್ ಕಾನ್ಸಟೇಬಲ್, 24 ಜನ ಮಹಿಳಾ ಕಾನ್ಸಟೇಬಲ್ ಜತೆಗೆ ಕೆಎಸ್ಐಎಸ್ ಎಫ್ ಪೊಲೀಸರು ಬಂದೋಬಸ್ತಗಾಗಿ ನಿಯೋಜನೆಗೊಳಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಇ ಡಿ.ಬಸವರಾಜ, ಎಸ್ ಇ ವಿ.ಆರ್. ಹಿರೇಗೌಡರ, ಹೆಚ್ಚುವರಿ ಎಸ್ ಪಿ ರಾಮನಗೌಡ ಹಟ್ಟಿ, ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಅಶೋಕ ಚವ್ಹಾಣ, ಕೆಎಸ್ಐಎಸ್ಎಫ್ ಅಧಿಕಾರಿ ಅರುಣ್ ಡಿ ವ್ಹಿ, ಸಿಪಿಐ ಶಿವಲಿಂಗ ಪ್ರಭು, ಮತ್ತಿತರರು ಇದ್ದರು.
What's Your Reaction?






