ದುಡಿಯುವ ಮಧ್ಯಮ ವರ್ಗದ ಜನರ ಜೀವನ ವೃದ್ಧಿಸುವಲ್ಲಿ ನಮ್ಮ ಸಹಕಾರಿ ಸೇವೆ ಅನನ್ಯ. ಚಂದ್ರಶೇಖರ್ ಹೂವಿನಬಾವಿ ಅಭಿಮತ

ಮಸ್ಕಿ ಶ್ರೀ ಧರ್ಮಸ್ಥಳ ಮಂಜುನಾಥ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ 16ನೇ ವರ್ಷದ ಸರ್ವ ಸದಸ್ಯರ ಸಭೆ, ಬುದುವಾರ  ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಸಭಾಂಗಣದಲ್ಲಿ  ಅದ್ದೂರಿಯಾಗಿ ಜರುಗಿತು.

Sep 4, 2025 - 07:29
Sep 4, 2025 - 09:51
 0  43
ದುಡಿಯುವ ಮಧ್ಯಮ ವರ್ಗದ ಜನರ ಜೀವನ ವೃದ್ಧಿಸುವಲ್ಲಿ ನಮ್ಮ ಸಹಕಾರಿ ಸೇವೆ ಅನನ್ಯ. ಚಂದ್ರಶೇಖರ್ ಹೂವಿನಬಾವಿ ಅಭಿಮತ
ದುಡಿಯುವ ಮಧ್ಯಮ ವರ್ಗದ ಜನರ ಜೀವನ ವೃದ್ಧಿಸುವಲ್ಲಿ ನಮ್ಮ ಸಹಕಾರಿ ಸೇವೆ ಅನನ್ಯ. ಚಂದ್ರಶೇಖರ್ ಹೂವಿನಬಾವಿ ಅಭಿಮತ

ಮೊದಲಿಗೆ  ಸಹಕಾರಿ ಪಿತಾಮಹ ಮತ್ತು ಧರ್ಮಸ್ಥಳ ಮಂಜುನಾಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿದ್ದ ಚಂದ್ರಶೇಖರ್ ಹೂವಿನ ಬಾವಿ ಸಂಸ್ಥೆಯ ಹಿರಿಮೆ,ಪ್ರಗತಿ, ಗುರಿ,ಪಥವನ್ನುದ್ದೇಶಿಸಿ ಮಾತನಾಡಿದರು.

ಅವರು ಶ್ರೀ ಧರ್ಮಸ್ಥಳ ಮಂಜುನಾಥ ಪತ್ತಿನ ಸೌಹಾರ್ದ ಸಹಕಾರಿ ಸಂಘವು  16 ವರ್ಷಗಳ ಸೇವೆಯ  ಹಾದಿಯಲ್ಲಿ ದುಡಿಯುವ ಮಧ್ಯಮ ವರ್ಗದ ಜನರ ಜೀವನ ವೃದ್ಧಿಸುವಲ್ಲಿ ನಮ್ಮ ಸಹಕಾರಿ ಸೇವೆ ಅನನ್ಯವಾದದ್ದಾಗಿದೆ ಎಂದು ಹೇಳಿದರು.

 

ನಂತರ ಸದಸ್ಯರ ಪ್ರತಿನಿಧಿಗಳಾಗಿ ದೊಡ್ಡಪ್ಪ ಸಗರದ್,ಹಾಗೂ ಶೇಖರ ಗೌಡ ಜಾಲಿ , ಬಳಗಾನೂರುರವರು ಠೇವಣಿ ಪ್ರಯೋಜನಗಳು,ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಕಾರ್ಯಕ್ರಮದ ನಿರೂಪಣೆಯನ್ನು ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರಾಗಿರುವ  ಶಿವಕುಮಾರ್ ಹೆಗ್ಗನಹಳ್ಳಿ ಮಾಡಿದರೆ, ಉಪಕಾರ್ಯನಿರ್ವಾಹಕರಾದ ಪರಮೇಶ ಕೊಪ್ಪರದ್ ಸಹಕಾರಿಯ ಲೆಕ್ಕ ಪರಿಶೋಧನೆ ಪ್ರಗತಿಪಥ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರು ಉಮಾಕಾಂತ ಹಳ್ಳಿ, ಉಪಾಧ್ಯಕ್ಷರು ಶಿವುಕುಮಾರ್ ಮಾಳಗಿ,ನಿರ್ದೇಶಕರಾದ ಪಂಪಾಪತಿ,ಶೇಖರ ಗೌಡ ಪೊಲೀಸ್ ಪಾಟೀಲ್,ವೀರೇಶ್ ಉದ್ಬಾಳ್,ಮಹೇಶ್ ನಂದಿಹಾಳ, ಮಲ್ಲಿಕಾರ್ಜುನ್ ವೀರಾಪೂರು, ಬಸವರಾಜ ಗುಂಡಳ್ಳಿ,ಸೇರಿದಂತೆ ಸಂಸ್ಥೆಯ ಸದಸ್ಯರು ಪಿಗ್ಮಿ ಠೇವಣಿ ಸಂಗ್ರಾಹಕರು ಸೇರಿದಂತೆ ಹಲವು ಗ್ರಾಹಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow