ಯುವ ಸಾಹಿತಿ ಸುರೇಶ ಬಳಗಾನೂರು.ರವರು ಬರೆದಿರುವ ಕವನ||ಕವನ ಶೀರ್ಷಿಕೆ : ಎ ಪೆಗವಾ

ಎ ಪೆಗವಾ ಗೆಲ್ಲಬೇಕಂತಿ ಜಗವಾ ನೀ ಗೆಲ್ಲು ಮೊದಲು ನಿನ್ನ ಮನವ. ವಿಷಯಂಗಳ ಸುಖಕ್ಕೆ ಹಸಿದ ಹುಲಿಯಂತಾಗಿರುವೆ. ನಾನೇಕೆ ಇಲ್ಲಿ ಬಂದಿರುವೆ ಎಂಬ ಸತ್ಯ ಮರೆತಿರುವೆ. ಐಹಿಕ ಸುಖವೆಂಬ ಮಿತ್ಯವ ನಂಬಿರುವೆ. ಹೆತ್ತವರ ಎದೆಗೊದ್ದು ಸತ್ತವರ ಚಿತ್ರಪಟಕ್ಕೆ ಅಡ್ಡಬಿದ್ದು, ನೀನೇನು ಗೆದ್ದು ಬೀಗಬೇಕೆಂದಿರುವೆ? ಎ ಪೆಗವಾ ಹೆತ್ತವರು ನಿನಗಾಗಿ ತಟ್ಟಿಹರೆಷ್ಟು ಮನೆಯ ಕದವ ಅವರಿಟ್ಟ ಭಿಕ್ಷೆಯನ್ನೊತ್ತು ಬೆಳೆದು ನನಗಾಗಿ ನೀವೇನು ಮಾಡಿದ್ದೀರಿ ಎಂದು ನೋಯಿಸುವೆ ಬೆಂದ ಮನವ. ಸುಮ್ಮನೆ ಬದುಕಿ ಹೋಗು ಮೂರು ದಿನ. ಯಾರೂ ನೆನೆಸರು ನಿನ್ನ ಸತ್ತ ಮರುದಿನ.

Nov 30, -0001 - 00:00
 0  54
ಯುವ ಸಾಹಿತಿ ಸುರೇಶ ಬಳಗಾನೂರು.ರವರು ಬರೆದಿರುವ ಕವನ||ಕವನ ಶೀರ್ಷಿಕೆ : ಎ ಪೆಗವಾ

What's Your Reaction?

like

dislike

love

funny

angry

sad

wow