ಆನ್ ಲೈನ್ ಅರೆಕಾಲಿಕ ಉದ್ಯೋಗ ಶಿಕ್ಷಕಿಗೆ ₹10.21 ಲಕ್ಷ ವಂಚನೆ .

ಶಿಕ್ಷಕಿಯೊಬ್ಬರಿಗೆ ಆನ್ ಲೈನ್ ನಲ್ಲಿ ₹10.21 ಲಕ್ಷ ವಂಚನೆ. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

 - 
Oct 8, 2024 - 13:53
 0  101
ಆನ್ ಲೈನ್  ಅರೆಕಾಲಿಕ ಉದ್ಯೋಗ  ಶಿಕ್ಷಕಿಗೆ ₹10.21 ಲಕ್ಷ ವಂಚನೆ .
ಆನ್ ಲೈನ್  ಅರೆಕಾಲಿಕ ಉದ್ಯೋಗ  ಶಿಕ್ಷಕಿಗೆ ₹10.21 ಲಕ್ಷ ವಂಚನೆ .

ಸಿರುಗುಪ್ಪ : ಪಟ್ಟಣದ ಶಿಕ್ಷಕಿಯೊಬ್ಬರಿಗೆ ಆನ್ ಲೈನ್ ನಲ್ಲಿ ₹10.21 ಲಕ್ಷ ವಂಚನೆ ಮಾಡಲಾಗಿದೆ. ಮೊಬೈಲ್ ನಲ್ಲಿ ಅರೆಕಾಲಿಕ ಉದ್ಯೋಗದ ಬಗ್ಗೆ ನೋಡುತ್ತಿದ್ದಾಗ ಶಿಕ್ಷಕಿಗೆ ಟೆಲಿಗ್ರಾಮ್ ನಲ್ಲಿ ಮಾಹಿತಿಯೊಂದು ಸಿಕ್ಕಿತು.ಇನ್ನಷ್ಟು ಮಾಹಿತಿ ಕೀರ್ತನಾ ಎಂಬುವರಿಗೆ ಕರೆಮಾಡಲು ಅಲ್ಲಿ ತಿಳಿಸಲಾಗಿತ್ತು. ಕರೆಮಾಡಿದಾಗ, ಮಹಿಳೆ ಒಬ್ಬರು ಮಾತನಾಡಿ ಅರೆಕಾಲಿಕ ಉದ್ಯೋಗದ ಬಗ್ಗೆ ತಿಳಿಸಿದರು ಮನೆಯಲ್ಲೇ ಕುಳಿತು ಕೆಲಸ ಮಾಡಿ ಹೆಚ್ಚಿನ ಆದಾಯ ಸಿಗಲಿದೆ ಎಂದು ನಂಬಿದ ಶಿಕ್ಷಕಿಯಿಂದ ₹10,21,809 ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

like

dislike

love

funny

angry

sad

wow