ಮಸ್ಕಿ ಮಾರಲದಿನ್ನಿ ಡ್ಯಾಮಿನ ಜಲಾಶಯದಿಂದ ಹೆಚ್ಚಿನ ಪ್ರಮಾಣದ ಮಸ್ಕಿ ಹಳ್ಳಕ್ಕೆ ಯಾವುದೇ ಕ್ಷಣದಲ್ಲಿ ನೀರು ಹರಿ ಬಿಡಲಾಗುವುದು ಸಾರ್ವಜನಿಕರು ಹಳ್ಳದ ಕಡೆಗೆ ಹೋಗದಿರಲು ಎಚ್ಚರಿಕೆ..!
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ವಿಪತ್ತು ನಿರ್ವಹಣಾ ಪ್ರಾಧಿಕಾರ ರವರ ನಿರ್ದೇಶನದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ
ಮಸ್ಕಿ ನಾಲಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಜಲಾಶಯವು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಪ್ರಸ್ತುತ 472.12 ಮೀಟರ್ ನೀರು ಶೇಖರಣೆಗೊಂಡಿದ್ದು, ಗರಿಷ್ಠ ಪ್ರಮಾಣ ಕೂಡ 472.12 ಮೀಟರ್ ಇರುತ್ತದೆ (ಒಟ್ಟು 29 ಅಡಿ ಪ್ರಸ್ತುತ 29 ಅಡಿ ನೀರು ಸಂಗ್ರಹಣೆಗೊಂಡಿದ್ದು) ಆದಕಾರಣ ಮಸ್ಕಿ ನಾಲಾ ಜಲಾಶಯಕ್ಕೆ ಹೆಚ್ಚುವರಿ ಒಳಹರಿವು ಹರಿದು ಬರುತ್ತಿದ್ದು, ಹೆಚ್ಚುವರಿ ನೀರನ್ನು ಮಸ್ಕಿ ಹಳ್ಳಕ್ಕೆ ಬಿಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ವಿಪತ್ತು ನಿರ್ವಹಣಾ ಪ್ರಾಧಿಕಾರ ರವರ ನಿರ್ದೇಶನದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಸಾರ್ವಜನಿಕರು ಹಾಗು ತಮ್ಮ ಸಾಕುಪ್ರಾಣಿಗಳು ಕುರಿ, ದನ ಮೇಯಿಸಲು ಮತ್ತು ಅನ್ಯ ದೈನಂದಿನ ಕೆಲಸಕ್ಕೆಂದು ಹಳ್ಳ ದಾಟುವ ಮೂಲಕ ಹೊಲಗದ್ದೆಗಳಿಗೆ ಹೋಗುವವರು ಹೋಗಬಾರದು ಮತ್ತು ಮಸ್ಕಿ ಹಳ್ಳಕ್ಕೆ ಬಿಡುವ ನೀರು ಮಸ್ಕಿ ಬಳಗಾನೂರು ಪೋತ್ನಾಳ್ ಮಾರ್ಗವಾಗಿ ರಾಯಚೂರು ಮಂತ್ರಾಲಯಕ್ಕೆ ಹೋಗುತ್ತದೆ ಆದಕಾರಣ ಪಕ್ಕದ ಹಳ್ಳಿ ಗ್ರಾಮಗಳು ಪಟ್ಟಣದ ಗ್ರಾಮಸ್ಥರು ಯಾರು ಹಳ್ಳದ ಕಡೆ ಹೋಗಬಾರದೆಂದು ಎಚ್ಚರಿಕೆ.! ಪೊಲೀಸ್ ಇಲಾಖೆಗೆ ಹಾಗೂ ಮಸ್ಕಿಪುರಸಭೆ ಬಳಗಾನೂರ ಪಟ್ಟಣ ಪಂಚಾಯಿತಿ ಮತ್ತು ಕೆಳಭಾಗದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಈ ವಿಷಯದ ಬಗ್ಗೆ ಸುದ್ದಿ ರವಾನಿಸಲಾಗಿದೆ ಎಂದು ಮಸ್ಕಿನಾಲಾ ಯೋಜನೆಯ ಮಸ್ಕಿ ಸಹಾಯಕ
ಇಂಜಿನಿಯರ್ ರವರು ಪತ್ರಿಕೆ ಮಾಧ್ಯಮದಲ್ಲಿ ಪ್ರಕಟಿಸಲು ಮಾಹಿತಿ ನೀದಿದ್ದಾರೆ.
What's Your Reaction?



