ಜಮಿಯತ್ ಉಲಮಾ ಎ ಹಿಂದ್ ಸಂಘಟನೆ ವತಿಯಿಂದ ಪಂಜಾಬ್ ಪ್ರವಾಹ ಪೀಡಿತರಿಗೆ ದೇಣಿಗೆ ಸಂಗ್ರಹ
70 ಸಾವಿರ ರೂ. ದೇಣಿಗೆ ಸಂಗ್ರಹ ವರದಿ: ಅಕ್ರಮ್ ಪಾಷಾ
ಲಿಂಗಸುಗೂರು:26: ಶುಕ್ರವಾರ ಜಮಿಯತ್ ಉಲಮಾ ಎ ಹಿಂದ್ ಸಂಘಟನೆ
ಇತ್ತಿಚೆಗೆ ಪಂಜಾಬ್ ನಲ್ಲಿ ಭೀಕರ ಪ್ರವಾಹ ಉಂಟಾಗಿ ಅಪಾರವಾದ ಹಾನಿ ಸಂಭವಿಸಿ ಜನರು ತಮ್ಮ ಸೂರನ್ನು ತ್ಯಜಿಸಿ ಅನೇಕ ರೀತಿಯ ಕಷ್ಟಕ್ಕೆ ಗುರಿಯಾಗಿದ್ದನ್ನು ಮನಗೊಂಡು ಜಮಿಯತ್ ಉಲಮಾ ಎ ಹಿಂದ್ ಸಂಘಟನೆಯೂ ದೇಶಾದ್ಯಂತ ಸಂತ್ರಸ್ತರ ಸಹಾಯಕ್ಕಾಗಿ ದೇಣಿಗೆ ಸಂಗ್ರಹ ಕೈಗೊಂಡಿದ್ದು ತಾಲೂಕ ಅಧ್ಯಕ್ಷರಾದ ಮೌಲಾನ ಫಜಲೆ ಕರೀಂ ಸಾಬ್ ಖಾಸ್ಮಿ, ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಆಬಿದ್ ಅಲಿ ಸಾಬ್ ಜೆಇ ರವರ ನೇತೃತ್ವದಲ್ಲಿ 70 ಸಾವಿರ ರೂ. ದೇಣಿಗೆ ಸಂಗ್ರಹ ಮಾಡಲಾಯಿತು.
ಸುಧ್ಧಿಗಾರರೊಂದಿಗೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಆಬಿದ್ ಅಲಿ ಜೆಇ ರವರು ಪಂಜಾಬ್ ನಲ್ಲಿ ನಡೆದ ಭೀಕರ ಪ್ರವಾಹದಿಂದ ಅನೇಕ ಜನರು ಮನೆ ಮಠ ಕಳೆದುಕೊಂಡು ತೀವ್ರ ತೊಂದರೆ ಅನುಭವಿಸುತಿದ್ದು ದೇಶಾದ್ಯಂತ ಅನೇಕ ಸಂಘ ಸಂಸ್ಥೆಗಳು ಸಹಾಯಕ್ಕೆ ಮುಂದಾಗಿದ್ದು ಜಮಿಯತ್ ಉಲಮಾ-ಎ-ಹಿಂದ್ ಲಿಂಗಸುಗೂರು ವತಿಯಿಂದ ಪಂಜಾಬ್ ಪ್ರವಾಹ
ಪೀಡಿತ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹ ಕಾರ್ಯ ಪ್ರಾರಂಭಿಸಿದ್ದೇವು ತಾಲೂಕಿನ ಜನರು ಕೈಲಾದಷ್ಟು ಸಹಾಯ ಮಾಡುವ ಮೂಲಕ 70 ಸಾವಿರ ರೂಪಾಯಿ ದೇಣಿಗೆ ಹಣ ಸಂಗ್ರಹಗೊಂಡ ಹಿನ್ನಲೆಯಲ್ಲಿ ಜಮಿಯತ್ ಉಲೆಮಾ ಎ ಹಿಂದ್ ರಾಯಚೂರು ಜಿಲ್ಲೆಯ ಅಧ್ಯಕ್ಷರಾದ ಮುಫ್ತಿ ಕಲಿಮುದ್ದಿನ್ ಸಾಬ್ ರವರಿಗೆ ತಲುಪಿಸುವ ಮೂಲಕ ದೇಣಿಗೆ ಹಣವನ್ನು ಸಂತ್ರಸ್ತರ ಸಹಾಯಕ್ಕಾಗಿ ಕಳುಹಿಸಲಾಯಿತು.
ಸಂತ್ರಸ್ತರ ನೆರವಿಗೆ ಧಾವಿಸಿ ಸಹಾಯ ಮಾಡಿದ ತಾಲೂಕಿನ ಸರ್ವರಿಗೂ ಹಾಗೂ ದೇಣಿಗೆ ಸಂಗ್ರಹ ಮಾಡುವಲ್ಲಿ ಶ್ರಮವಹಿಸಿದ ಜಮಿಯತ್ ಉಲಮಾ ಎ ಹಿಂದ್ ಕಮೀಟಿಯ ಸದಸ್ಯರೆಲ್ಲರಿಗೂ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಮೌಲಾನ ಫಜಲೆ ಕರೀಂ ಸಾಬ್ ಖಾಸ್ಮಿ,
ಪ್ರಧಾನ ಕಾರ್ಯದರ್ಶಿ ಆಬಿದ್ ಅಲಿ ಸಾಬ್ ಜೆಇ,
ಉಪಾಧ್ಯಕ್ಷರುಗಳಾದ
ಮುಫ್ತಿ ಅಬ್ದುಲ್ಲಾ ಸಾಬ್ ಖಾಸ್ಮಿ ಮುದಗಲ್,
ಮುಫ್ತಿ ಸುಲೇಮಾನ್ ಸಾಬ್ ಸಂತೆಕೆಲ್ಲೂರ,
ಮೌಲಾನ ಅಜಮಲ್ ಸಾಬ್ ಹಟ್ಟಿ,
ಹಾಫೀಜ್ ಗುಲಾಮ್ ರಸೂಲ್ ಸಾಬ್ ಗುರುಗುಂಟ,
ಸಹಾಯಕ ಕಾರ್ಯದರ್ಶಿ ಅಬ್ದುಲ್ ರಜಾಕ್ ಹಾಫೀಜ್ ಸಾಬ್,
ಖಜಾಂಚಿ ಹಾಜಿ ಅಬ್ದುಲ್ ರಶೀದ್ ಸಾಬ್,
ಹಾಗೂ ಸದಸ್ಯರುಗಳಾದ
ವಸೀಮ್ ಅಹ್ಮದ್, ಮೊಹ್ಮದ್ ಫ್ರೂಟ್, ಖಾಜಾ ಹುಸೈನ್ ಗುತ್ತಿಗೆದಾರರು, ಇಮ್ತಿಯಾಜ್ ಜೆಡಿಎಸ್, ಅಕ್ರಂ
ಪಾಶಾ ಇದ್ದರು.
What's Your Reaction?



