ಸಿಂಪಿ ಸಮಾಜದ ಕುಲ ದೈವ ಶ್ರೀ ಜಡೆಶಂಕರಲಿಂಗ ದೇವರ 26ನೇ ವಾರ್ಷಿಕೋತ್ಸವ
ಮಸ್ಕಿ, 23ಜ : ತಾಲ್ಲೂಕಿನ ಸಿಂಪಿ ಸಮಾಜದ ಕುಲ ದೈವ ಶ್ರೀ ಜಡಿಶಕರಲಿಂಗ ದೇವರ 26 ನೇ ವಾರ್ಷಿಕೋತ್ಸವ ಹಾಗು ದಾಸಿಮಯ್ಯ ವೃತ್ತವನ್ನು ಕೂಡ ಉದ್ಘಾಟನೆ ಅದ್ದೂರಿಯಾಗಿ ನಡೆಯಿತು.
ಶ್ರೀ ಭ್ರಮರಾಂಬ ದೇವಸ್ಥಾನದಿಂದ ಕುಂಬೋತ್ಸವ ದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶಂಕರ ದೇವರ ಪಲ್ಲಕ್ಕಿ ಉತ್ಸವದೊಂದಿಗೆ ಹಾಡು ಕುಣಿತ ಡೋಳ್ಳಿನೊಂದಿಗೆ ಅತ್ಯಂತ ಸಡಗರ ಸಂಭ್ರಮದಿಂದ ಶ್ರೀ ಜಡೆ ಶಂಕರಲಿಂಗ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಉತ್ತುಸುಕತೆಯಿಂದ ಭಾಗವಹಿಸಿ ಶ್ರೀ ಶಂಕರಲಿಂಗ ದೇವರ ಕೃಪೆಗೆ ಪಾತ್ರರಾದರು.
ಪಟ್ಟಣದ ಬಳಗಾನೂರು ಕ್ರಾಸ್ ಹತ್ತಿರ ದಾಸಿಮಯ್ಯ ವೃತ್ತವನ್ನು ಕೂಡ ಉದ್ಘಾಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಇಲಕಲ್ಲಿನ ಮಹಾಂತಪ್ಪ ಚೆನ್ನಿ ಕಮತಗಿಯ ರಾಚಪ್ಪ ಸರಡಗಿ ಸಿಂಪಿ ಸಮಾಜದ ಹಿರಿಯರು ಹಾಗೂ ಮಸ್ಕಿ ಪುರಸಭೆಯ ಅಧ್ಯಕ್ಷರು ಆದ ಸುರೇಶ್ ಹರಸೂರ್, ಶ್ರೀಧರ್ ಬಳ್ಳೊಳ್ಳಿ, ದೊಡ್ಡಪ್ಪ ಬುಳ್ಳ ಮಸ್ಕಿ ಪಂಪಣ್ಣ ನಾಗಲಿಕರ್ ಹಾಗೂ ಸಮಾಜದ ಮುಖಂಡರು ಯುವಕರು ಭಾಗವಹಿಸಿ ಯಶಸ್ವಿಗೊಳಿಸಿದರು.
What's Your Reaction?



