ಸಿಡಿಲು ಬಡಿದು ಮೃತಪಟ್ಟಿರುವ ಕುಟುಂಬಕ್ಕೆ ತಾಲೂಕ್ ಆಡಳಿತದಿಂದ 24 ಗಂಟೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 5ಲಕ್ಷ ರೂ ಪರಿಹಾರ

ಸಿಡಿಲು ಬಡಿದು ಮೃತಪಟ್ಟಿರುವ ಕುಟುಂಬಕ್ಕೆ ತಾಲೂಕ್ ಆಡಳಿತದಿಂದ 24 ಗಂಟೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 5ಲಕ್ಷ ರೂ ಪರಿಹಾರ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಕುರಿಗಳು ಮೇಯಿಸಲು ಹೋಗಿ ಸಾಯಂಕಾಲ 6:30 ಸುಮಾರಿಗೆ ಮನೆಗೆ ಬರುವ ಸಂರ್ಭದಲ್ಲಿ ಗುಡುಗು-ಸಿಡಿಲು ಸಹಿತ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಕುರಿಗಳು ಸಹಿತ ಕುರಿಗಯಿ ಮೃತಪಟ್ಟಿರುವ ಘಟನೆ ತಿಳಿದ ತಾಲೂಕ ದಂಡಾಧಿಕಾರಿ Dr. ಮಲ್ಲಪ್ಪ ಯೆರಗೋಳ ಗ್ರಾಮಾಧಿಕಾರಿಗಳಿಂದ ಮಾಹಿತಿ ಪಡೆದು ಸಿಡಿಲು ಬಡಿದು ಮೃತಪಟ್ಟಿರುವ ರಾಮಣ್ಣ ತಂದೆ ದೇವೀಂದ್ರಪ್ಪ ಬಂಡಿ ಅವರ ಪತ್ನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 5ಲಕ್ಷ ರೂ ಪರಿಹಾರವನ್ನು 24 ಗಂಟೆಗಳಲ್ಲಿ ತಾಲೂಕು ಆಡಳಿತದ ವತಿಯಿಂದ...ಬಿಡುಗಡೆ ಮಾಡಿದ ಆದೇಶ ಪ್ರತಿಯನ್ನು ಶಾಸಕ ಬಸನಗೌಡ ತುರುವಿಹಾಳ್ ಅವರ ಜೊತೆ ಮೃತರ ಮನೆಗೆ ಭೇಟಿ ನೀಡಿ ಪರಿಹಾರದ ಬಿಡುಗಡೆ ಆದೇಶ ಪ್ರತಿಯನ್ನು ವಿತರಣೆ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
What's Your Reaction?






