ರಾಯಚೂರಿನ ಆಶ್ರಯ ಕಾಲೋನಿಯ ತಾಯಿ, ಮಗಳು ಕಾಣೆ: ಪತ್ತೆಗೆ ಪೊಲೀಸರ ಮನವಿ

ತಾಯಿ ಹಾಗೂ ಮಗಳ ಕುರಿತು ಮಾಹಿತಿ ಸಿಕ್ಕಲ್ಲಿ ಠಾಣೆಯ ದೂರವಾಣಿ ಸಂಖ್ಯೆ: 08532-235600, ಪಿಎಸ್‌ಐ ಮೊಬೈಲ್ ಸಂಖ್ಯೆ: 9480803849ಗೆ ಸಂಪರ್ಕ ಮಾಡಬಹುದಾಗಿದೆ

Sep 10, 2025 - 08:19
 0  28
ರಾಯಚೂರಿನ ಆಶ್ರಯ ಕಾಲೋನಿಯ ತಾಯಿ, ಮಗಳು ಕಾಣೆ: ಪತ್ತೆಗೆ ಪೊಲೀಸರ ಮನವಿ
ವರದಿ ಎಸ್ ಖಾಜಾ ಶೇಕ್

ರಾಯಚೂರು ಮಾರ್ಕೆಟ್ ಯಾರ್ಡ ಪೊಲೀಸ್ ಠಾಣೆಯ ವ್ಯಾಪ್ತಿಯ ಚಂದ್ರಬಂಡ ರಸ್ತೆಯ ಹಳೆ ಆಶ್ರಯ ಕಾಲೋನಿಯ ನಿವಾಸಿಗಳಾದ ಪಾತೀಮಾ ಗಂಡ ಮಹದ್ ಶ್ಯಾಲಂ (45) ಹಾಗೂ ಆಕೆಯ ಮಗಳಾದ ಸಾನಿಯಾ ಬೇಗಂ ತಂದೆ ಮಹದ್ ಶ್ಯಾಲಂ (17) ಎಂಬವರು ಆಗಸ್ಟ್ 13ರ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗು ಏನು ಹೇಳದೆ ಕೇಳದೆ ಮನೆಯಲ್ಲಿದ್ದ 10 ಸಾವಿರ ರೂ. ಹಣ ಮತ್ತು ಬೆಳ್ಳಿ ಕಾಲುಚೈನ್ ತೆಗೆದುಕೊಂಡು ಹೋದವರು ಇದುವರೆಗೂ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿದ್ದು, ಠಾಣೆಯಲ್ಲಿ ಗುನ್ನ ಸಂಖ್ಯೆ: 87/2025 ಕಲಂರಡಿ ಪ್ರಕರಣ ದಾಖಲಾಗಿದೆ.

ಪಾತೀಮಾ ಗಂಡ ಮಹದ್ ಶ್ಯಾಲಂ (45) ಅವರು 5.3 ಫೀಟ್ ಎತ್ತರ, ದುಂಡು ಮುಖ, ಕಪ್ಪು ಮೈಬಣ್ಣ ಸದೃಢ ಮೈಕಟ್ಟು, ಹೂಗಳುಳ್ಳ ಬೂದು ಬಣ್ಣದ ಸೀರೆ ಮತ್ತು ಬುರ್ಖಾ ಧರಿಸಲಾಗಿದ್ದು, ಕನ್ನಡ ಮತ್ತು ಹಿಂದಿ ಮಾತನಾಡುತ್ತಾಳೆ.

ಸಾನಿಯಾ ಬೇಗಂ ತಂದೆ ಮಹದ್ ಶ್ಯಾಲಂ (17) ಬಾಲಕಿಯು 5.6 ಫೀಟ್ ಎತ್ತರ, ಉದ್ದನೆಯ ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಸ್ಕೈ ಬ್ಲೂ ಬಣ್ಣದ ಚೂಡಿದಾರ ಧರಿಸಲಾಗಿದ್ದು, ಕನ್ನಡ ಮತ್ತು ಹಿಂದಿ ಮಾತನಾಡುತ್ತಾಳೆ. ಈ ತಾಯಿ ಹಾಗೂ ಮಗಳ ಕುರಿತು ಮಾಹಿತಿ ಸಿಕ್ಕಲ್ಲಿ ಠಾಣೆಯ ದೂರವಾಣಿ ಸಂಖ್ಯೆ: 08532-235600, ಪಿಎಸ್‌ಐ ಮೊಬೈಲ್ ಸಂಖ್ಯೆ: 9480803849ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

like

dislike

love

funny

angry

sad

wow