ಕನ್ನಡತಿ ಸಾಹಿತಿ ಬಾನು ಮುಸ್ತಾಕ್‌ಗೆ ಬೂಕ‌ರ್ ಪ್ರಶಸ್ತಿ, ಕನ್ನಡಕ್ಕೆ ಸಂದ ಮೊದಲ ಪ್ರಶಸ್ತಿ! ಇತಿಹಾಸ ಸೃಷ್ಟಿಸಿದ ಬಾನು ಮುಸ್ತಾಕ್!

ಫೈರ್ ಬ್ರಾಂಡ್ ಪತ್ರಕರ್ತೆ ಮತ್ತು ಸಾಹಿತಿ ಬಾನು ಮುಸ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಬೂಕ‌ರ್ ಪ್ರಶಸ್ತಿಯ ಗರಿಮೆ

May 22, 2025 - 21:47
 0  87
ಕನ್ನಡತಿ ಸಾಹಿತಿ ಬಾನು ಮುಸ್ತಾಕ್‌ಗೆ ಬೂಕ‌ರ್ ಪ್ರಶಸ್ತಿ, ಕನ್ನಡಕ್ಕೆ ಸಂದ ಮೊದಲ ಪ್ರಶಸ್ತಿ!  ಇತಿಹಾಸ ಸೃಷ್ಟಿಸಿದ ಬಾನು ಮುಸ್ತಾಕ್!
Heart Lamp Wins Booker Prize! Banu Mushtaq Creates History!
ಕನ್ನಡತಿ ಸಾಹಿತಿ ಬಾನು ಮುಸ್ತಾಕ್‌ಗೆ ಬೂಕ‌ರ್ ಪ್ರಶಸ್ತಿ, ಕನ್ನಡಕ್ಕೆ ಸಂದ ಮೊದಲ ಪ್ರಶಸ್ತಿ!  ಇತಿಹಾಸ ಸೃಷ್ಟಿಸಿದ ಬಾನು ಮುಸ್ತಾಕ್!
ಕನ್ನಡತಿ ಸಾಹಿತಿ ಬಾನು ಮುಸ್ತಾಕ್‌ಗೆ ಬೂಕ‌ರ್ ಪ್ರಶಸ್ತಿ, ಕನ್ನಡಕ್ಕೆ ಸಂದ ಮೊದಲ ಪ್ರಶಸ್ತಿ!  ಇತಿಹಾಸ ಸೃಷ್ಟಿಸಿದ ಬಾನು ಮುಸ್ತಾಕ್!
ಕನ್ನಡತಿ ಸಾಹಿತಿ ಬಾನು ಮುಸ್ತಾಕ್‌ಗೆ ಬೂಕ‌ರ್ ಪ್ರಶಸ್ತಿ, ಕನ್ನಡಕ್ಕೆ ಸಂದ ಮೊದಲ ಪ್ರಶಸ್ತಿ!  ಇತಿಹಾಸ ಸೃಷ್ಟಿಸಿದ ಬಾನು ಮುಸ್ತಾಕ್!

ಫೈರ್ ಬ್ರಾಂಡ್ ಪತ್ರಕರ್ತೆ ಮತ್ತು ಸಾಹಿತಿ ಬಾನು ಮುಸ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಬೂಕ‌ರ್ ಪ್ರಶಸ್ತಿಯ ಗರಿಮೆ ಸಂದಿದೆ. ಸಣ್ಣ ಕತೆಗಳ ಅನುವಾದಿತ ಸಂಕಲನವಾಗಿರುವ "ಹಾರ್ಟ್ ಲ್ಯಾಂಪ್"ಗೆ ಈ ಪ್ರಶಸ್ತಿ ಸಂದಿದೆ. ಕನ್ನಡದ ಕೃತಿಯೊಂದಿಗೆ ಈ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು. ಹೀಗಾಗಿ, ಈ ಪ್ರಶಸ್ತಿ ಕನ್ನಡಿಗರಲ್ಲಿ ಪುಳಕವನ್ನುಂಟು ಮಾಡಿದೆ. ಅಂತಾರಾಷ್ಟ್ರೀಯ ಬೂಕ‌ರ್ ಪ್ರಶಸ್ತಿಗೆ ಭಾರೀ ಪೈಪೋಟಿ ಹಾಗೂ ಸ್ಪರ್ಧೆ ಇರುತ್ತದೆ. ಇಷ್ಟೊಂದು ಸ್ಪರ್ಧೆಗಳ ನಡುವೆ ಪ್ರಶಸ್ತಿ ಕನ್ನಡತಿಗೆ ಸಂದಿದೆ.

ಕೆಲವೇ ದಿನಗಳ ಹಿಂದೆ ಬೂಕ‌ರ್ ಪ್ರಶಸ್ತಿ ನನಗೆ ಸಿಗಲೆಂದು ಪ್ರಾರ್ಥಿಸಿ ಎಂದು ಮುಸ್ತಾಕ್ ಅವರು ಹೇಳಿದ್ದರು. ಬೂಕ‌ರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿನ 6 ಪ್ರಮುಖ ಕೃತಿಗಳಲ್ಲಿ ಅವರ ಹಾರ್ಟ್ ಲ್ಯಾಂಪ್ ಕಥಾಗುಚ್ಛವೂ ಒಂದಾಗಿತ್ತು. ಫೀಸ್.. ಪ್ರೇ ಫಾರ್ ಮೀ... ನನಗಾಗಿ ಪ್ರಾರ್ಥಿಸಿ ಅಂತ ವಿನಮ್ರವಾಗಿ ಅವರು ಹೇಳಿದ್ದರು. ಮುಸ್ತಾಕ್ ಅವರ ಪರಿಶ್ರಮ ಹಾಗೂ ಕಲೆಯೊಂದಿಗೆ, ಕನ್ನಡಿಗರ ಪ್ರಾರ್ಥನೆಯೂ ಸೇರಿದೆ ಎನ್ನುವಂತೆ ಅವರಿಗೆ ಬೂಕ‌ರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕನ್ನಡದ ಕೃತಿಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಗಳಿಸಿದೆ.

ಇದು 12 ಕಥೆಗಳ ಗುಚ್ಛವಾಗಿದೆ. 1990 ಹಾಗೂ 2023ರ ನಡುವೆ ಪ್ರಕಟವಾಗಿದ್ದ 12 ಕತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು.12 ಕತೆಗಳನ್ನು ಒಳಗೊಂಡ ಕಥಾ ಸಂಕಲನ ಗುಚ್ಛ ಇದಾಗಿದ್ದು. 1990 ಹಾಗೂ 2023ರ ನಡುವೆ ಈ ಕತೆಗಳು ಪ್ರಕಟಗೊಂಡಿದ್ದವು. ಇನ್ನು ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಮತ್ತು ಹೆಣ್ಣುಮಕ್ಕಳ ದೈನಂದಿನ ಬದುಕಿಗೆ ಸಂಬಂಧಿಸಿದ ವಿಷಯಗಳ ಮೇಲೆ ಈ ಕತೆಗಳು ಕೇಂದ್ರೀಕೃತವಾಗಿವೆ.

ಕನ್ನಡಕ್ಕೆ ಸಂದ ಗೌರವ: ಬೂಕ‌ರ್ ಪ್ರಶಸ್ತಿ ಎನ್ನುವುದು ಪ್ರತಿ ಸಾಹಿತಿಯ ಕನಸು. ಬೂಕರ್ ಪ್ರಶಸ್ತಿಯ ಕನಸನ್ನು ಕನ್ನಡಿಗರೂ ಕಂಡಿದ್ದರು. ಅದು ಮೊದಲ ಬಾರಿ ಈಡೇರಿದೆ. ಇದರೊಂದಿಗೆ ಕನ್ನಡದ ಕೃತಿಯೊಂದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಹಾಗೂ ಗೌರವ ಸಂದಿದೆ. ಪ್ರಶಸ್ತಿಯ ಮೊತ್ತವು ಅಂದಾಜು 57.28 ಲಕ್ಷ ರೂಪಾಯಿ ಆಗಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಸ್ತಾಕ್ ಅವರು, ಯಾವ ಕಥೆಯೂ ಸಣ್ಣದಲ್ಲ. ಪ್ರತಿ ಸಣ್ಣ ವಿಷಯವೂ ಇಡೀ ಕಥೆಯ ತೂಕವನ್ನು ಒಳಗೊಂಡಿರುತ್ತದೆ ಎನ್ನುವುದು ನನ್ನ ನಂಬಿಕೆ.ಅದರಂತೆಯೇ ಈ ಪುಸ್ತಕ ಬಂದಿದೆ ಎಂದು ಹೇಳಿದರು. ಈ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಸಂತೋಷ ವ್ಯಕ್ತಪಡಿಸಿದರು.

ಇನ್ನು ಈ ಕಥೆಗಳನ್ನು ಅನುವಾದ ಮಾಡಿರುವ ಅನುವಾದಕಿ ಭಕ್ತಿ ಹರ್ಷ ಅವರು, ಇದು ನನ್ನ ಸುಂದರ ಭಾಷೆಗೆ ದೊರೆತ ಅತ್ಯಂತ ಸೊಗಸಾದ ಗೆಲುವು ಎಂದು ಹರ್ಷ ವ್ಯಕ್ತಪಡಿಸಿದರು.

ಪತ್ರಕರ್ತ ಹಾಗೂ ಬರಹಗಾರ ದಿನೇಶ್ ಅಮಿನ್ ಮಟ್ಟು ಅವರು, ಹೆಮ್ಮೆಯ ಲೇಖಕಿ ಭಾನು ಮುಸ್ತಾಕ್  ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು.

ಬಾನು ಮುಸ್ತಾಕ್ ದಂತಗೋಪುರದ ಲೇಖಕಿ ಅಲ್ಲ, ಅವರು ಫೈರ್ ಬ್ರಾಂಡ್ ಪತ್ರಕರ್ತೆಯೂ ಹೌದು ಎನ್ನುವುದು ನನ್ನಂತಹವರ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ.

ಬಾನು ಅವರನ್ನು ನಮ್ಮಂತಹವರಿಗೆ ಪರಿಚಯಿಸಿದ ಪಿ.ಲಂಕೇಶ್ ಅವರಿಗೂ ಅಭಿನಂದನೆಗಳು. ಈ ಪ್ರಶಸ್ತಿಯನ್ನು ಲಂಕೇಶ್ ಅವರೂ ಸಂಭ್ರಮಿಸುತ್ತಿರಬಹುದು ಎಂದು ಹೇಳಿದ್ದಾರೆ.

What's Your Reaction?

like

dislike

love

funny

angry

sad

wow