ಹರ್ಬಲ್ ನ್ಯೂಟ್ರಿನ್ ಎಂಬ ಹೆಸರಿನಲ್ಲಿ ಅನಧಿಕೃತ ಚಿಕಿತ್ಸಾ ಕೇಂದ್ರಕ್ಕೆ ಅಧಿಕಾರಿಗಳ ದಾಳಿ; ಸೀಜ್!
ಮಸ್ಕಿ ಮುದ್ಗಲ್ ರಸ್ತೆಯ ಪಕ್ಕದ ಖಾಸಗಿ ಮನೆಯ ಒಂದರಲ್ಲಿ ದೇವದುರ್ಗ ಮೂಲದ ಸಂಜೀವ್ ಕುಮಾರ್ ಎಂಬ ವ್ಯಕ್ತಿ ಹರ್ಬಲ್ ನ್ಯೂಟ್ರಿನ್ ಎಂಬ ಹೆಸರಿನಲ್ಲಿ ಅನಧಿಕೃತ ಚಿಕಿತ್ಸಾ ಕೇಂದ್ರ ನಡೆಸುತ್ತಿರುವುದು ಮತ್ತು ಮಸ್ಕಿ ತಾಲೂಕಿನ ಹಳ್ಳಿ ಗ್ರಾಮಗಳಿಗೆ ತೆರಳಿ ಜನರಿಗೆ ವಿಶ್ವಾಸಕ್ಕೆ ಪಡೆದುಕೊಂಡು ಎಲ್ಲ ಸರ್ವ ರೋಗಗಳಿಗೆ ಚಿಕಿತ್ಸೆ ನೀಡಲಾಗುವುದೆಂದು ಜನರಿಂದ ಮೂರು ಸಾವಿರದಿಂದ ಹತ್ತು ಹದಿನೈದು ಸಾವಿರದವರೆಗೆ ಹಣ ಪಡೆದು ಆರೋಗ್ಯ ತಪಾಸಣೆ ಮಾಡುವ ಯಾವುದೇ ಅಧಿಕೃತ ಸಾಧನೆಗಳಿಲ್ಲದೆ ರೋಗಗಳಿಗೆ ಚಿಕಿತ್ಸೆ ನೀಡುತ್ತಾರೆ. ಅಲ್ಲಿ ಚಿಕಿತ್ಸೆ ಪಡೆದಿರುವ ರೋಗಿಗಳು ತಮ್ಮಗಿರುವ ರೋಗ ಯಾವುದೇ ರೀತಿಯ ಗುಣವಾಗದೆ ಹಣ ಕಳೆದುಕೊಂಡು ಹೈರಾಣ ಆದ ಜನ ಕರವೇ ಸಂಘದ ತಾಲೂಕ ಅಧ್ಯಕ್ಷರು ರಮೇಶ್ ಕೆ ನಾಯಕ್ ಮತ್ತು ದುರುಗರಾಜ್ ವಟಗಲ್ ಅವರುಗೆ ಮಾಹಿತಿ ನೀಡಿದಾಗ ಅವರು ಕೂಡಲೇ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ದ್ದಾರೆ. ಸಾರ್ವಜನಿಕ ದೂರು ಮಾಹಿತಿ ಮೇರೆಗೆ ಗುರುವಾರ 22 ರ ಬೆಳಿಗ್ಗೆ 9ಗಂಟೆ ಗೆ ಮಸ್ಕಿ ಆರೋಗ್ಯ ಕೇಂದ್ರದ ಆಯುಷ್ಯ ವೈದ್ಯಧಿಕಾರಿ ಡಾಕ್ಟರ್ ಶ್ರೀದೇವಿ ಹಾಗು ಹುಸೇನಪ್ಪ ಆರೋಗ್ಯ ನಿರೀಕ್ಷಣಾಧಿಕಾರಿ ಮತ್ತು ಪಿ ಎಸ್ ಐ ಮುದ್ದು ರಂಗ ಸ್ವಾಮಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲಿಸಿದಾಗ
ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸಂಜೀವ್ ಕುಮಾರ್ ಎಂಬ ವ್ಯಕ್ತಿ ಹತ್ತಿರ ಯಾವುದೇ ಅಧಿಕೃತ ಸರ್ಟಿಫಿಕೇಟ್ ಪರವಾನಿಗೆ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಹರ್ಬಲ್ ನ್ಯೂಟ್ರಿನ್ ಎಂಬ ಹೆಸರಿನಲ್ಲಿ ಅನಧಿಕೃತ ಚಿಕಿತ್ಸಾ ಕೇಂದ್ರ ಸಿಜ್ ಮಾಡಿದ್ದಾರೆ.
What's Your Reaction?






