ಸುಮಾರು ವರ್ಷಗಳಿಂದ ಇದ್ದ ಬಡಪಾಯಿ ಡಬ್ಬ ಅಂಗಡಿ ತೆರವುಗೊಳಿ ಬೀದಿ ಪಾಲು ಮಾಡಿದ ಪ್ರಭಾವಿಗಳು
ಹೌದು ಪ್ರಿಯ ವೀಕ್ಷಕರೇ ಬಲಾಢ್ಯರಿಗೊಂದು ನ್ಯಾಯ ಬಡವರಿಗೊಂದು ನ್ಯಾಯ ಪ್ರಭಾವಿಗಳಿಗೆ ಶೀರ್ ಉಂಡೆ ಬಡವರಿಗೆ ವಿಷದಂಡೆ.. ಯಂತೆ ಹೌದು ವೀಕ್ಷಕರೇ ಲಿಂಗಸುಗೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪಕ್ಕ ದಲ್ಲಿ ಸುಮಾರು ವರ್ಷಗಳಿಂದ ವಯಸ್ಸಾದ ಹಿರಿಯ ಜೀವಿಗಳು ಚಹಾ ಮತ್ತು ಟಿಫಿನ್ ಮಾಡಿಕೊಂಡು ತನ್ನ ಕುಟುಂಬವನ್ನು ಸಾಕಿಕೊಂಡು ಜೀವನ ಸಾಗಿಸುತ್ತಿರುವ ಬಡಪಾಯಿಗಳಿಗೆ ಏಕಾಏಕಿ ಬಲಾಡ್ಯ ರಾಜಕಾರಣಿಗಳು ತಮ್ಮ ಪ್ರಭಾವಿ ವ್ಯಕ್ತಿಗಳು ಬಡ ಜೀವಿಗಳ ಅಂಗಡಿಯನ್ನು ಕಿತ್ತು ಹಾಕಿ ಅದೇ ಜಾಗದಲ್ಲಿ ತಮ್ಮ ಟೀ ಕಾಫಿ ಟಿಫಿನ್ ಸೆಂಟರ್ ಅಂಗಡಿ ಇಟ್ಟುಕೊಂಡಿದ್ದಾರೆ ಇದರಿಂದ ಈ ಹಿರಿಯ ಜೀವಿಗಳು ಬೀದಿ ಪಾಲು ಆಗಿವೆ.
ಆದರೆ ಆಸ್ಪತ್ರೆ ಮುಂದೆ ಅನಧಿಕೃತ ಅಂಗಡಿಗಳು ಇರುವುದರಿಂದ ದ್ವಿಚಕ್ರವಾಹನಗಳ ನಿಲುಗಡೆಗೆ ಸ್ಥಳವಿಲ್ಲದೇ ರಸ್ತೆಯಲ್ಲಿಯೇ ವಾಹನಗಳನ್ನು ಅಡ್ಡದಿಡ್ಡಿಯಾಗಿ ನಿಲ್ಲಿಸುತ್ತಿದ್ದಾರೆ. ಇದರಿಂದ ಅಂಬುಲೇನ್ಸ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕೆಲವೊಂದು ಬಾರಿ ತುರ್ತು ಪ್ರಸಂಗದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ತೊಂದರೆಯಾಗುತ್ತಿದೆ. ಹಲವು ಬಾರಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದೆ ರೋಗಿಗಳು ಮರಣ ಹೊಂದಿದ ಪ್ರಸಂಗಗಳು ಇವೆ. ಸರ್ಕಾರದ ನಿಯಮದ ಪ್ರಕಾರ 100 ಮೀಟರ್ ಒಳಗಡೆ ಸಾರಾಯಿ ಅಂಗಡಿ ಹಾಗೂ ಖಾಸಗಿ ಔಷಧಿ ಅಂಗಡಿಗಳು ಇರಬಾರದು ಆದರೆ ಪಾಲನೆಯಾಗುತ್ತಿಲ್ಲ. ಈ ನಿಮಯ ಎಲ್ಲಿ ಮತ್ತು ಯಾರಿಗೆ ఎంబ ಯಕ್ಷ ಪ್ರಶ್ನೆ.? ಯಾಗಿದೆ
ಬಲಾಡ್ಯರ ಪ್ರಭಾವದಿಂದ ಆಸ್ಪತ್ರೆಯ ಆವರಣದಲ್ಲಿ ಅನಧಿಕೃತವಾಗಿ ಕೆ.ಎಂ.ಎಫ್. ನಂದಿನಿ ಪಾರ್ಲರ್ ಎಂಬ ಹೆಸರಿನಲ್ಲಿ ದೊಡ ಅಂಗಡಿ ಹಾಕಿದ್ದಾರೆ ಅಲ್ಲದೇ ಈ ಪಾರ್ಲ‌್ರನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಿಟ್ಟು ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಆದರೆ ಇಲ್ಲಿ ಪಾರ್ಲ‌್ರನಲ್ಲಿ ಚಹಾ ಸೇರಿದಂತೆ ದಿನುಸು ಗಳನ್ನು ಮಾರಾಟ ನಡೆದಿದೆ. ಈ ಅಂಗಡಿ ಇಡಲು ಸರ್ ನೀವು ಪರವಾನಿಗೆ ನೀಡಿದಿರ ಎಂದು ಅಧಿಕಾರಿಗಳಿಗೆ ಕೇಳಿದರೆ ಇದರಬಗ್ಗೆ ನಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಆಸ್ಪತ್ರೆ ಅಧಿಕಾರಿಗಳಿಂದಾಗಲಿ ಅಥವಾ ಪುರಸಭೆಯಿಂದಾಗಲಿ ಯಾವುದೇ ಪರವಾನಿಗೆಯನ್ನು ಪಡೆಯದೆ. ಏಕಾಏಕಿ ಡಬ್ಬ ಅಂಗಡಿ ಇಟ್ಟುಕೊಂಡಿರುವುದು ಕಾನೂನು ಬಾಹಿರವಾಗಿದೆ. ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ತಾಲೂಕು ಸಮಿತಿ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ಕುಳಿತು ತೀವ್ರವಾಗಿ ಖಂಡಿಸಿದೆ. ನಂತರ ಸಂಬಂಧ ಪಟ್ಟ ಇಲಾಖೆಗೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕೂಡಲೆ ತೆರವುಗೊಳಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ
ಕರವೇ ತಾಲೂಕ ಅಧ್ಯಕ್ಷ ಜಿಲಾನಿ ಪಾಷಾ ಸೇರಿದಂತೆ ಪ್ರಗತಿಪರ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
What's Your Reaction?