ಮಸ್ಕಿ ವಿವಿಧಡೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿ
ಮಸ್ಕಿ : (ಡಿ.21) ಪಲ್ಸ್ ಪೋಲಿಯೋಕಾರ್ಯಕ್ರಮ 17 ಬೂತ್‌ಗಳಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಶಿಕ್ಷಕರು ಮಸ್ಕಿ ಪಟ್ಟಣದ ಪ್ರತಿ ವಾರ್ಡ್ ಹಾಗು ಬಸ್ ನಿಲ್ದಾಣ ಗಳಲ್ಲಿ ಸಂಚಾರಿ ತಂಡ, ಟ್ರಾನ್ಸಿಟ್ ತಂಡವು, 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕುದು ಕಂಡು ಬಂದಿತು
ಪಟ್ಟಣದ ಕಿಲ್ಲಾ ಸರಕಾರಿ
ಹಿರಿಯ ಪ್ರಾಥಮಿಕ ಶಾಲೆ ಆವರಣ ದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಮೂ ಲಕ ಪುರಸಭೆ ಸದಸ್ಯರಾದ ಚೇತನ್ ಪಾಟೀಲ್ ಚಾಲನೆ ನೀಡಿದರು.
ಈ ವೇಳೆ ಡಾ. ಅಮರೇಶ ಎಂ ಬಿ ರವರು ಮಾತನಾಡಿ, ಪೋಲಿ ಯೋ ರೋಗವು ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ. ಇತರೆ ದೇಶಗಳಲ್ಲಿ ರೋಗ ಪೀಡಿತರು ಇರುವುದು ಆತಂಕಕಾರಿ ಆದ್ದರಿಂದ ರಾಷ್ಟ್ರೀಯ ಪೋಲಿಯೋ ಲಸಿಕಾ ಅಭಿಯಾನವನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಎಲ್ಲಾ ಸರ್ಕಾರಿ ಸಾರ್ವಜ ನಿಕ ಆಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಉಪಕೇಂದ್ರಗಳಲ್ಲಿ, ಸರಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಪಲ್ಸ್ ಪೋಲಿ ಯೋ ಲಸಿಕೆ ಹಾಕಲಾಗುವುದು ಎಂದರು.
ಪುರಸಭೆಯ ಪೋಲಿಯೋ ಬೂತ್‌ಗಳಲ್ಲಿ Dr. ಮಹೇಶ ಲಸಿಕೆ ಹಾಕುವುದರ ಮೂಲಕ ವಾರ್ತಾಭಾರತಿ ಪತ್ರಿಕೆ ವರದಿಗಾರನಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು
ಇಂದು ಮತ್ತು ನಂತರದ 3 ದಿನಗಳಲ್ಲಿ ಮನೆ-ಮನೆ ಭೇಟಿಯ ಮೂಲಕ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶ, ಪಟ್ಟಣದಲ್ಲಿ ವಲಸಿಗ ಸಮುದಾಯದ ಮತ್ತು ಸ್ಲಂಗಳಲ್ಲಿ ವಾಸಿಸುವ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಸರಕಾರವು ಪ್ರಕಟನೆಯಲ್ಲಿ ತಿಳಿಸಿದ ಹಾಗೆ ವೆವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಸ್ಕಿ ವೈದ್ಯಾಧಿಕಾರಿ Dr. ಮಹೇಶ ಹಾಗು Dr. ಅಂಬಿಕಾ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಶಿಕ್ಷಕರು ಉಪಸ್ಥಿತರಿದ್ದರು.
What's Your Reaction?



